ಗುಜರಾತ್ ಭೇಟಿ ಬಳಿಕ ದೆಹಲಿಗೆ ಬಂದಿಳಿದ ಯುಕೆ ಪ್ರಧಾನಿ ಮೋದಿ ಪರವಾಗಿ ಬೊರಿಸ್ ಜಾನ್ಸನ್ ಸ್ವಾಗತಿಸಿದ ರಾಜೀವ್ ಚಂದ್ರಶೇಖರ್ ಪ್ರಧಾನಿಯಾದ ಬಳಿಕ ಜಾನ್ಸನ್ ಮೊದಲ ಭಾರತ ಭೇಟಿ
ನವದೆಹಲಿ(ಏ.22): ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿಯಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಲಿದೆ. ಗುಜರಾತ್ ಭೇಟಿ ಬಳಿಕ ಇದೀಗ ನವದೆಹಲಿಗೆ ಆಗಮಿಸಿದ ಬೋರಿಸ್ ಜಾನ್ಸನ್ ಅವರನ್ನು ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಕರ್ ಬರಮಾಡಿಕೊಂಡಿದ್ದಾರೆ.
ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೋರಿಸ್ ಜಾನ್ಸನ್ ಅವರಿಗೆ ಆತ್ಮೀಯ ಸ್ವಾಗತಕೋರಿದ ರಾಜೀವ್ ಚಂದ್ರಶೇಖರ್ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಶುಭಾಶಯ ತಿಳಿಸಿದರು.ಈ ಕುರಿತು ಟ್ವಿಟರ್ ಮೂಲಕ ರಾಜೀವ್ ಚಂದ್ರಶೇಖರ್ ಸಂತಸ ಹಂಚಿಕೊಂಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಪರವಾಗಿ ಸರ್ಕಾರದಲ್ಲಿರುವ ನನ್ನ ಸಹೋದ್ಯೋಗಿಗಳು ಇಂದು ದೆಹಲಿಯಲ್ಲಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಸ್ವಾಗತಿಸುವ ಸೌಭಾಗ್ಯ ಸಿಕ್ಕಿತು ಎಂದು ಟ್ವೀಟ್ ಮಾಡಿದ್ದಾರೆ.
ನವ ಭಾರತದಲ್ಲಿ ಶ್ರಮಿಕರಿಗೆ ಹೆಚ್ಚು ಅವಕಾಶ: ಆರ್‌ಸಿ
ಪ್ರಧಾನಿಯಾದ ಬಳಿಕ ಬೋರಿಸ್ ಜಾನ್ಸನ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ರಕ್ಷಣಾ ಸಹಕಾರ, ಏರೋಸ್ಪೇಸ್, ಟೆಕ್ನಾಲಜಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಭಾರತ ಹಾಗೂ ಯುಕೆ ಸಂಬಂಧ ಬಲಪಡಿಸುವ ವ್ಯಾಪಾರ ವಹಿವಾಟು ಒಪ್ಪಂದಕ್ಕೆ ಈ ಭೇಟಿ ಮತ್ತಷ್ಟು ಉತ್ತೇಜನ ನೀಡಲಿದೆ.
ನಿನ್ನೆ ಸಬರಮತಿ ಆಶ್ರಮ, ಅಕ್ಷರಧಾಮ ದೇಗುಲಕ್ಕೆ ಭೇಟಿ
ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಎರಡು ದಿನಗಳ ಭಾರತ ಪ್ರವಾಸ ಗುರುವಾರ ಆರಂಭವಾಯಿತು. ಅಧಿಕಾರಿಗಳು ಮತ್ತು ಉದ್ಯಮಿಗಳ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ ಜಾನ್ಸನ್, ಗುರುವಾರ ನೇರವಾಗಿ ಗುಜರಾತ್‌ನ ಅಹಮದಾಬಾದ್‌ಗೆ ಬಂದಿಳಿದರು.
ಬೆಂಗ್ಳೂರಿನ 75 ಕೆರೆ ಪುನಶ್ಚೇತನ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಈ ವೇಳೆ ಅವರು ಇಲ್ಲಿ ಮಹಾತ್ಮಾ ಗಾಂಧೀಜಿ ವಾಸವಿದ್ದ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಚರಕದಿಂದ ನೂಲು ಎಳೆದರು. ಇದೆ ವೇಳೆ ‘ಸತ್ಯ, ಅಹಿಂಸೆಯಂತಹ ತತ್ವಗಳ ಮೂಲಕ ವಿಶ್ವವನ್ನು ಬದಲಾಯಿಸಿದ ಅಸಮಾನ್ಯ ಮನುಷ್ಯನು ವಾಸವಿದ್ದ ಆಶ್ರಮಕ್ಕೆ ಭೇಟಿ ನೀಡಿರುವುದು ನನ್ನ ಪುಣ್ಯ ಎಂದು ಭೇಟಿ ನೀಡಿದವರ ದಾಖಲಾತಿ ಪುಸ್ತಕದಲ್ಲಿ ಬರೆದಿದ್ದಾರೆ. ಬಳಿಕ ಜಾನ್ಸನ್ ಗಾಂಧಿನಗರದಲ್ಲಿನ ಗುಜರಾತ್ ಬಯೋಟೆಕ್ ವಿವಿ ಮತ್ತು ಅಕ್ಷರಧಾಮ ದೇಗುಲಕ್ಕೂ ಜಾನ್ಸನ್ ಭೇಟಿ ನೀಡಿದರು.
ಪ್ರವಾಸದ 2ನೇ ದಿನವಾದ ಇಂದು ಜಾನ್ಸನ್ , ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಉಭಯ ದೇಶಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಲಿವೆ. ಭಾರತ-ಬ್ರಿಟನ್ ನಡುವಣ ದ್ವಿಪಕ್ಷೀಯ ವ್ಯಾಪಾರ, ರಕ್ಷಣೆ ಮತ್ತು ಜನರ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಸಲಿದೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಹಾಗೂ ಸಚಿನ್ ತೆಂಡುಲ್ಕರ್ ರೀತಿ ಅನಿಸಿತು
ಬ್ರಿಟನ್‌ನಿಂದ ನೇರವಾಗಿ ಗುಜರಾತ್‌ನ ಅಹಮ್ಮದಾಬಾದ್‌ಗೆ ಬಂದಳಿದ ಬೋರಿಸ್ ಜಾನ್ಸನ್‌ಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಬೋರಿಸ್ ಜಾನ್ಸನ್ ನನಗೆ ಸಚಿನ್ ತೆಂಡುಲ್ಕರ್, ಅಮಿತಾಬಚ್ಚನ್ ರೀತಿ ಅನಿಸಿತು. ಆ ರೀತಿಯ ಪ್ರೀತಿ ಹಾಗೂ ಸ್ವಾಗತ ಸಿಕ್ಕಿದೆ ಎಂದು ಜಾನ್ಸನ್ ಹೇಳಿದ್ದಾರೆ.
ಬ್ರಿಟನ್ ಹಾಗೂ ಭಾರತದಲ್ಲಿ ಕೆಲವು ಕೈಗಾರಿಕೆಗಳ ಸ್ಥಾಪನೆ ಮತ್ತು ಹೂಡಿಕೆ ಕುರಿತಂತೆ ಉಭಯ ದೇಶಗಳು ಘೋಷಿಸಲಿವೆ. ರಾಜತಾಂತ್ರಿಕ ಮತ್ತು ಆರ್ಥಿಕ ಪಾಲುದಾರಿಕೆ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದೆ. ಕೋವಿಡ್ ಹಿನ್ನೆಲೆ 2 ಬಾರಿ ಜಾನ್ಸನ್ ಅವರ ಭಾರತ ಭೇಟಿ ಮುಂದೂಡಿಕೆಯಾಗಿತ್ತು.
