Asianet Suvarna News Asianet Suvarna News

Rajasthan Politics| ಮಂತ್ರಿಗಿರಿ ಬೆನ್ನಲ್ಲೇ ಖಾತೆಯನ್ನೂ ಹಂಚಿದ ಸಿಎಂ ಗೆಹ್ಲೋಟ್, ಯಾರಿಗೆ ಯಾವ ಖಾತೆ?

* ರಾಜಸ್ಥಾನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ

* ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿದ ಸಿಎಂ ಗೆಹ್ಲೋಟ್

 

Rajasthan Portfolio Allocation CM Ashok Gehlot Keeps Home Finance, and IT and Communication pod
Author
Bangalore, First Published Nov 22, 2021, 5:38 PM IST

ಜೈಪುರ(ನ.22): ರಾಜಸ್ಥಾನದಲ್ಲಿ ಗೆಹ್ಲೋಟ್ ಸರ್ಕಾರದ ಸಂಪುಟ ಪುನಾರಚನೆ (Rajasthan Cabinet Reshuffle) ಒಂದು ದಿನದ ಬಳಿಕ, ಸೋಮವಾರದಂದು ಖಾತೆ ಹಂಚಿಕೆಯೂ ನಡೆದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Chief Minister Ashok Gehlot) ಅವರು ಗೃಹ, ಹಣಕಾಸು, ಐಟಿ ಮತ್ತು ಸಂವಹನ ಇಲಾಖೆಗಳನ್ನು (Home, Finance, and IT & Communication) ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇನ್ನುಳಿದ ಎಲ್ಲ ಇಲಾಖೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಬಿ.ಡಿ.ಕಲ್ಲಾ ಅವರಿಗೆ ಶಿಕ್ಷಣ ಮತ್ತು ಪಾರ್ಸಾದಿ ಲಾಲ್ ಮೀನಾರವರಿಗೆ ಆರೋಗ್ಯ ಇಲಾಖೆಯಂತಹ ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ನೀಡಲಾಗಿದೆ.

ಯಾರಿಗೆ ಯಾವ ಖಾತೆ?

ಮತ್ತೊಂದೆಡೆ ಶಾಂತಿ ಧರಿವಾಲ್‌ಗೆ ಸಂಸದೀಯ ವ್ಯವಹಾರ ಹಾಗೂ ಸಲೇಹ್‌ ಮೊಹಮ್ಮದ್‌ಗೆ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ನೀಡಲಾಗಿದೆ. ಪ್ರಮೋದ್ ಜೈನ್ ಭಯಾ ಅವರು ಗಣಿ ಮತ್ತು ಪೆಟ್ರೋಲಿಯಂ ಖಾತೆ ಜವಾಬ್ದಾರಿ ಪಡೆದಿದ್ದರೆ, ಲಾಲ್‌ಚಂದ್ ಕಟಾರಿಯಾ ಕೃಷಿ, ಉದಯಲಾಲ್ ಅಂಜನಾ ಕೋಆಪರೇಟಿವ್ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Rajasthan Portfolio Allocation CM Ashok Gehlot Keeps Home Finance, and IT and Communication pod

Rajasthan Portfolio Allocation CM Ashok Gehlot Keeps Home Finance, and IT and Communication pod

Rajasthan Portfolio Allocation CM Ashok Gehlot Keeps Home Finance, and IT and Communication pod

ಸಂಪುಟ ಪುನಾರಚನೆ, ಪೈಲಟ್ ಬಣಕ್ಕೆ ಪ್ರಾತಿನಿಧ್ಯ!!\

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌  (Rajasthan Chief Minister Ashok Gehlot) ಹಾಗೂ ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ (Congress Leader Sachin Pilot) ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ರಾಜಸ್ಥಾನದಲ್ಲಿ (Rajasthan) ಶನಿವಾರ ಮಹತ್ವದ ಬೆಳವಣಿಗೆ ನಡೆದಿದೆ. ಗೆಹ್ಲೋಟ್‌ ಅವರು ಶನಿವಾರ ಸಂಜೆ ತಮ್ಮ ಸಂಪುಟದ ಎಲ್ಲಾ 21 ಸಚಿವರ ರಾಜೀನಾಮೆ (Resignation) ಪಡೆದು, ಸಚಿವ ಸಂಪುಟ ಪುನಾರಚಿಸಿದ್ದಾರೆ.

ಸಂಪುಟ ಪುನಾರಚನೆ ಕುರಿತು ಸಚಿನ್ ಪೈಲೆಟ್ ಸಂತಸ ವ್ಯಕ್ತಪಡಿಸಿದ್ದಾರೆ. ಸಮಾನತೆ ಬೇಕು ಅನ್ನೋದು ನಮ್ಮ ಆಗ್ರವಾಗಿತ್ತು. ಇದನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಿದೆ. ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುನ್ನಡೆಯಬೇಕು. ಇದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ತಾಳ್ಮೆಯಂದ ಸಚಿವರನ್ನು ಆಯ್ಕೆ ಮಾಡಿದೆ ಎಂದು ಸಚಿನ್ ಪೈಲೆಟ್ ಹೇಳಿದ್ದಾರೆ.

ಸಂಪುಟ ಪುನಾರಚನೆಯಲ್ಲಿ ಮೂವರು ಮಹಿಳೆಯರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಆದರೆ ಪ್ರಮಾಣ ಕಡಿಮೆಯಾಗಿದೆ ಅನ್ನೋ ಕೂಗು ಕೇಳಿಬಂದಿದೆ. ಶೇಕಾಡ 33 ರಷ್ಟು ಮಹಿಳಾ ಮೀಸಲಾತಿ (Women Reservation) ಸಿಕ್ಕಿಲ್ಲ. ಈ ಮೂಲಕ ರಾಜಸ್ಥಾನ ಸಚಿವ ಸಂಪುಟ ಮಹಿಳೆಯರ ವಿಚಾರದಲ್ಲಿ ಸಮತೋಲ ಕಾಪಾಡಿಕೊಂಡಿಲ್ಲ. ರಾಜ್ಯದ ಅಭಿವೃದ್ದಿಯಲ್ಲಿ ಮಹಿಳಾ ಸಚಿವರ ಪಾತ್ರ ಪ್ರಮುಖವಾಗಿದೆ. ಆದರೆ ಇದನ್ನು ಅಶೋಕ್ ಗೆಹ್ಲೋಟ್ ಸರ್ಕಾರ ಕಡೆಗಣಿಸಿದಂತಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಬಿಕ್ಕಟ್ಟೇನು?:

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿದ್ದಾಗಿನಿಂದಲೂ ಗೆಹ್ಲೋಟ್‌ ಮತ್ತು ಪೈಲಟ್‌ (Gehlot Vs Pilot) ಬಣಗಳ ಮಧ್ಯೆ ಅಧಿಕಾರ ಸಂಘರ್ಷವಿತ್ತು. ಪೈಲಟ್‌ ಬಣದ ಹಲವು ಶಾಸಕರು ಸಚಿವಾಕಾಂಕ್ಷಿಗಳಾಗಿದ್ದರು. ಪೈಲಟ್‌ ದೆಹಲಿಗೆ ಭೇಟಿ ನೀಡಿ ಸೋನಿಯಾ, ರಾಹುಲ್‌, ಪ್ರಿಯಾಂಕಾ ಗಾಂಧಿ ಸೇರಿ ಇನ್ನಿತರ ನಾಯಕರನ್ನು ಭೇಟಿ ನೀಡಿ ತಮ್ಮ ಬೆಂಬಲಿಗರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. ಬಳಿಕ ಗೆಹ್ಲೋಟ್‌ ಅವರು ಸೋನಿಯಾ ಸೇರಿ ಇನ್ನಿತರ ನಾಯಕರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದರು.

Follow Us:
Download App:
  • android
  • ios