Asianet Suvarna News Asianet Suvarna News

ತಂಗಿಯನ್ನ ಭೇಟಿ ಮಾಡಬೇಕು ಎಂದಿದ್ದಕ್ಕೆ ಪತ್ನಿಯನ್ನ ಬೈಕ್‌ಗೆ ಕಟ್ಟಿ ಎಳೆದೊಯ್ದ ಪತಿ!

ಸೋದರಿ ಭೇಟಿ ಮಾಡಬೇಕು ಎಂಬ ಪತ್ನಿಯ ಬೇಡಿಕೆಯಿಂದ ಸಿಟ್ಟಿಗೆದ್ದ ಪತಿ, ಆಕೆಯನ್ನು ಬೈಕ್‌ಗೆ ಕಟ್ಟಿ ಸುಮಾರು ದೂರ ಎಳೆದೊಯ್ದ ಭೀಕರ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ನಹರ್‌ಸಿಂಗಾಪುರ ಎಂಬಲ್ಲಿ ನಡೆದಿದೆ.

Rajasthan man drags wife behind bike for wanting to visit her sister rav
Author
First Published Aug 14, 2024, 8:03 AM IST | Last Updated Aug 14, 2024, 8:03 AM IST

ಜೈಪುರ: ಸೋದರಿ ಭೇಟಿ ಮಾಡಬೇಕು ಎಂಬ ಪತ್ನಿಯ ಬೇಡಿಕೆಯಿಂದ ಸಿಟ್ಟಿಗೆದ್ದ ಪತಿ, ಆಕೆಯನ್ನು ಬೈಕ್‌ಗೆ ಕಟ್ಟಿ ಸುಮಾರು ದೂರ ಎಳೆದೊಯ್ದ ಭೀಕರ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ನಹರ್‌ಸಿಂಗಾಪುರ ಎಂಬಲ್ಲಿ ನಡೆದಿದೆ.

ವೈರಲ್‌ ಆದ ವಿಡಿಯೋದಲ್ಲಿ ಪ್ರೇಮ್‌ರಾಮ್‌ ಮೇಘ್ವಾಲ್‌ ಎಂಬಾತ ಪತ್ನಿಯ ಎರಡೂ ಕಾಲುಗಳನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದಿದ್ದಾನೆ. ಬಳಿಕ ಬೈಕ್‌ ನಿಲ್ಲಿಸಿ ಆಕೆಯ ದೇಹವನ್ನು ಮೆಟ್ಟಿಕೊಂಡು ನಿಂತಿರುವುದು ಕಂಡುಬಂದಿದೆ.

 

ರಾಂಗ್ ನಂಬರ್‌ನಿಂದ ಮಹಿಳೆಯರ ಸಲಿಂಗಿ ಪ್ರೀತಿ ಶುರು: ಪತಿ ಬಿಟ್ಟು ಪರಾರಿಯಾದ ಬೆನ್ನಲ್ಲೇ ಟ್ವಿಸ್ಟ್!

ಕಳೆದ ತಿಂಗಳು ನಡೆದಿದೆ ಎನ್ನಲಾದ ಘಟನೆ ಕುರಿತು ಪೊಲೀಸರು ಮಹಿಳೆಯ ಪತಿ ಪ್ರೇಮರಾಮ್‌ ಮತ್ತು ಆಕೆಯ ಮೇಲಿನ ದೌರ್ಜನ್ಯ ತಡೆಯದೇ ವಿಡಿಯೋ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣದ ದಾಖಲಿಸಿದ್ದಾರೆ ಹಾಗೂ ಪ್ರೇಮರಾಮ್‌ನನ್ನು ಬಂಧಿಸಿದ್ದಾರೆ.

ಘಟನೆ ಬಳಿಕ ಮಹಿಳೆ ದೂರು ನೀಡದೆ ಬಂಧುಗಳ ಮನೆಗೆ ಹೋಗಿ ನೆಲೆಸಿದ್ದಳು. ವಿಡಿಯೋ ವೈರಲ್‌ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಈ ನಡುವೆ ಮಾನವ ಕಳ್ಳಸಾಗಣೆಯ ಕೋನದಿಂದಲೂ ಪ್ರಕರಣದ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios