ಕ್ಯಾನ್ಸರ್‌ಗೆ ಗಿಡಮೂಲಿಕೆಗಳ ಔಷಧಿ ಕಂಡು ಹಿಡಿದ ವಿಷ್ಣು ಶರ್ಮಾಗೆ ರಾಷ್ಟ್ರಪತಿಗಳಿಂದ ಶ್ಲಾಘನೆ

ರಾಜಸ್ಥಾನದ ವಿಷ್ಣು ಶರ್ಮಾ ಎಂಬ ವ್ಯಕ್ತಿಯೊಬ್ಬರು ಕ್ಯಾನ್ಸರ್‌ಗೆ ಗಿಡಮೂಲಿಕೆಗಳಿಂದ ಔಷಧಿಯನ್ನು ತಯಾರಿಸಿದ್ದಾರೆ. ಈಗಾಗಲೇ ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿರುವ ಅವರಿಗೆ  ಈ ಸಾಧನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸನ್ಮಾನಿಸಲ್ಪಟ್ಟಿದ್ದಾರೆ.

Rajasthan Man Develops Ayurvedic Medicine For Cancer, Gets Praised By President

ಜೈಪುರ: ಇಂದು ವಿಶ್ವ ಕ್ಯಾನ್ಸರ್‌ ದಿನ, ಪ್ರತಿದಿನವೂ ಕ್ಯಾನ್ಸರ್‌ನಿಂದ ಒಬ್ಬರಲ್ಲ ಒಬ್ಬರು ಸಾಯುತ್ತಿದ್ದರೆ, ವಿಶ್ವದೆಲ್ಲೆಡೆ ಲಕ್ಷಾಂತರ ಮಂದಿ ಈ ಕ್ಸಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಚಿಕಿತ್ಸೆ ನೀಡಿದರು ಸಣ್ಣದೊಂದು ಅಂಶ ದೇಹದಲ್ಲಿ ಬಾಕಿಯಾದರೂ ಇದು ಮತ್ತೆ ಬರುವಂತಹ ಮಾರಕ ರೋಗವಾಗಿದೆ. ಶ್ರೀಮಂತರು ಸೆಲೆಬ್ರಿಟಿಗಳು ವಿದೇಶಗಳಲ್ಲಿ ಇದಕ್ಕೆ ಅತ್ಯಾಧುನಿಕ ಚಿಕಿತ್ಸೆ ಪಡೆದರೆ ಜನಸಾಮಾನ್ಯರಿಗೆ ಅಂತಹ ಸೌಲಭ್ಯಗಳು ಕೈಗೆಟುಕದು. ಅನೇಕ ಕಡೆ ಹಳ್ಳಿ ಮದ್ದುಗಳನ್ನು ಕ್ಯಾನ್ಸರ್‌ಗೆ ನೀಡುತ್ತಿದ್ದಾರೆ ಆದರೂ ಕೂಡ ಈ ಕೆಲ ಹಳ್ಳಿ ಮದ್ದುಗಳು ವೈದ್ಯಕೀಯ ಲೋಕದಲ್ಲಿ ಪ್ರಮಾಣೀಕರಿಸಲ್ಪಟ್ಟಿರುವುದಿಲ್ಲ, ಕೆಲವೊಮ್ಮೆ ವಾಸಿಯಾಗುತ್ತವೆ. ಕೆಲವೊಮ್ಮೆ ಹೇಳಲಾಗದು. ಹೀಗಿರುವಾಗ ರಾಜಸ್ಥಾನ ವ್ಯಕ್ತಿಯೊಬ್ಬರು ಈ ರೋಗದ ವಿರುದ್ಧ ಹೋರಾಡುವ ಔಷಧಿಯೊಂದನ್ನು ಸಿದ್ಧಪಡಿಸಿದ್ದಾರೆ. ಅವರ ಈ ಕಾರ್ಯಕ್ಕೆ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ಲಾಘಿಸಿದ್ದಾರೆ. ಹೀಗಾಗಿ ಸುದ್ದಿಯಲ್ಲಿರುವ ಹಳ್ಳಿ ವೈದ್ಯರೊಬ್ಬರನ್ನು ವಿಶ್ವ ಕ್ಯಾನ್ಸರ್ ದಿನವಾದ ಇಂದು ಪರಿಚಯಿಸುತ್ತಿದ್ದೇವೆ. 

ಕ್ಯಾನ್ಸರ್ ಔಷಧಿ ತಯಾರಿಸಿದ ವಿಷ್ಣು ಶರ್ಮಾ
ಇಂದು ವಿಶ್ವ ಕ್ಯಾನ್ಸರ್ ದಿನದಂದು, ನಾವು ರಾಜಸ್ಥಾನದ ದೌಸಾ ಜಿಲ್ಲೆಯ ನಿವಾಸಿ ವಿಷ್ಣು ಶರ್ಮಾ ಅವರ  ಅವಿಷ್ಕಾರದ ಬಗ್ಗೆ ಹೇಳುತ್ತಿದ್ದೇವೆ. ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸಲು ಗಿಡಮೂಲಿಕೆಗಳಿಂದ ಆಯುರ್ವೇದ ಔಷಧವನ್ನು ಇವರು ತಯಾರಿಸಿದ್ದು, ಇದನ್ನು ವೈಜ್ಞಾನಿಕ ವಿಧಾನದ ಮೂಲಕ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈಗ  ವಿಷ್ಣು ಶರ್ಮಾ ಅವರು ಇದಕ್ಕೆ ಪೇಟೆಂಟ್‌ಗಾಗಿ ಕಾಯುತ್ತಿದ್ದೇವೆ. ಈ ಔಷಧಿಯನ್ನು ತಯಾರಿಸಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಕೂಡ ವಿಷ್ಣು ಶರ್ಮಾ ಅವರನ್ನು ಸನ್ಮಾನಿಸಿದ್ದಾರೆ. ಹೀಗಾಗಿ ಈಗ ಭಾರತ ಸರ್ಕಾರ ಇವರ ಔಷಧಿಗೆ ಪೇಟೆಂಟ್ ನೀಡಿದರೆ ಅವರು ಶೀಘ್ರದಲ್ಲೇ ಕ್ಯಾನ್ಸರ್‌ಗೆ ಗಿಡಮೂಲಿಕೆ ಔಷಧಿಯನ್ನು ತಯಾರಿಸಿ ರೋಗಿಗಳಿಗೆ ನೀಡಲಿದ್ದಾರೆ. 

ರಾಜಸ್ಥಾನದ ದೌಸಾದ ಸಣ್ಣ ಹಳ್ಳಿಯಾದ ಲೋಟ್ವಾಡಾದವರಾದ ವಿಷ್ಣುಶರ್ಮಾ ಅವರನ್ನು ಮನೆಯಲ್ಲಿ ಬಡತನವಿದ್ದ ಕಾರಣ ಪೋಷಕರು ಕೇವಲ 10ನೇ ತರಗತಿಯವರೆಗೆ ಓದಿಸಿದ್ದರು. ಕುಟುಂಬದ ಜವಾಬ್ದಾರಿಯಿಂದಾಗಿ ವಿಷ್ಣುಶರ್ಮಾ ಅವರಿಗೆ ಮುಂದೆ ಓದಲು ಸಾಧ್ಯವಾಗದೇ ಮನೆಯಲ್ಲಿ ಪೂರ್ವಜರಿಂದ ಬಂದ ಕೃಷಿಯನ್ನೇ ಜೀವನಕ್ಕಾಗಿ ಮುಂದುವರೆಸಿದ್ದರು. ಆದರೆ ಓದುವ ಆಸಕ್ತಿ ಇದ್ದ ವಿಷ್ಣು ಶರ್ಮ ಮುಂದೆ ಬಿಎ ಮುಗಿಸುವಲ್ಲಿ ಯಶಸ್ವಿಯಾದರು. 

ಕ್ಯಾನ್ಸರ್‌ಗೆ ನೀಡುವ ಗಿಡಮೂಲಿಕೆಗಳ ಬಗ್ಗೆ ಜ್ಞಾನ

ವಿಷ್ಣು ಶರ್ಮಾ ಅವರಿಗೆ ಈ ಗಿಡಮೂಲಿಕೆಗಳ ಬಗ್ಗೆ ಮೊದಲೇ ಜ್ಞಾನವಿತ್ತು ಮತ್ತು ಮುಂದೆ ಅವರ ಪತ್ನಿಗೂ ಪತಿಯಿಂದ ಇದರ ಅರಿವಾಗಿತ್ತಿ. ಹೀಗಾಗಿ ದಂಪತಿಗಳಿಬ್ಬರು ಸೇರಿ ಕ್ಯಾನ್ಸರ್‌ಗೆ ಔಷಧ ತಯಾರಿಸುವ ಪ್ರಯತ್ನ ಪ್ರಾರಂಭಿಸಿದರು. ಮೊದಲನೆಯದಾಗಿ, ಈ ಜನರು ಜನರ ಬಾಯಿ ಕ್ಯಾನ್ಸರ್ ಗುಣಪಡಿಸಲು ಸಹಾಯ ಮಾಡುವ ಟೂತ್‌ಪೇಸ್ಟ್ ಅನ್ನು ತಯಾರಿಸಿದರು. ಅದು ಅವರಿಗೆ ಯಶಸ್ವಿಯಾಗಿದೆ ಎನಿಸಿದ್ದು, ನಂತರ ಅವರು ಕ್ರಮೇಣ ಗಿಡಮೂಲಿಕೆಗಳ ಅನುಪಾತಕ್ಕೆ ಅನುಗುಣವಾಗಿ ಔಷಧವನ್ನು ಸಿದ್ಧಪಡಿಸಿದರು. ಪ್ರಸ್ತುತ, ನಾಲ್ಕನೇ ಹಂತದ ಕ್ಯಾನ್ಸರ್ ರೋಗಿಗಳು ಸಹ ಚಿಕಿತ್ಸೆಗಾಗಿ ಅವರ ಬಳಿಗೆ ಬರುತ್ತಿದ್ದಾರೆ.

ಅನೇಕ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ವೈದ್ಯರು ಕೈಬಿಟ್ಟ ರೋಗಿಗಳು ಸಹ ತಮ್ಮ ಔಷಧಿಗಳನ್ನು ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಿಷ್ಣು ಹೇಳಿದ್ದಾರೆ. ವಿಷ್ಣು ತಾನು ಮೊದಲು ತೋಡಭಿಮ್ ಪ್ರದೇಶದ ನಿವಾಸಿ ಹರ್ಚರಣ್ ಮೀನಾ ಅವರಿಗೆ ಚಿಕಿತ್ಸೆ ನೀಡಿದ್ದಾಗಿ ಹೇಳಿದ್ದಾರೆ. ಅವರ ಕ್ಯಾನ್ಸರ್ ಸಂಪೂರ್ಣವಾಗಿ ಗುಣಮುಖವಾಗಿದ್ದು, ನಂತರ ಅವರಿಗೆ ಮತ್ತೆ ಕ್ಯಾನ್ಸರ್ ಬರಲಿಲ್ಲ. ಒಂದು ವೇಳೆ ಇವರ ಈ ಔಷಧಿಗೆ ಪೇಟೆಂಟ್ ಸಿಕ್ಕಲ್ಲಿ ಮುಂದೆ ಕಡಿಮೆ ದರದಲ್ಲಿ ದೇಶದೆಲ್ಲೆಡೆ ಈ ಔಷಧಿಯನ್ನು ನೀಡುವಂತಾದರೆ ಕ್ಯಾನ್ಸರ್‌ನಿಂದ ಪೀಡಿತರಾಗಿ ಸಾವಿನಂಚಿನಲ್ಲಿರುವ ಅನೇಕರಿಗೆ ಬದುಕುವುದಕ್ಕೆ ಒಂದು ಹೊಸ ಆಶಾಕಿರಣ ಸಿಕ್ಕಂತಾಗುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ. 

Latest Videos
Follow Us:
Download App:
  • android
  • ios