Asianet Suvarna News Asianet Suvarna News

ಸರಸ್ವತಿ ದೇವಿಗೆ ಅವಮಾನ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ರಾಜಸ್ಥಾನದ ಶಿಕ್ಷಕಿ ಅಮಾನತು!

ಸರಸ್ವತಿ ದೇವಿಗೆ ಅವಮಾನ ಮಾಡಿದ ಕಾರಣಕ್ಕೆ ಸರ್ಕಾರಿ ಶಾಲಾ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಪೋಷಕರ ದೂರು, ಪ್ರತಿಭಟನೆ ಬೆನ್ನಲ್ಲೇ ಶಿಕ್ಷಕಿಯನ್ನು ಅಮಾನತು ಮಾಡಲು ಆದೇಶ ನೀಡಲಾಗಿದೆ.

Rajasthan Govt school teacher suspended after Disrespecting Goddess Saraswati ckm
Author
First Published Feb 24, 2024, 7:25 PM IST

ಜೈಪುರ(ಫೆ.24) ಸರಸ್ವತಿ ಶಿಕ್ಷಣ ದೇವತೆ. ಶಾಲೆಗಳಲ್ಲಿ ಸರಸ್ವತಿ ಪೂಜೆ, ಸರಸ್ವತಿ ಫೋಟೋಗಳು ಸಾಮಾನ್ಯ. ಆದರೆ ಇತ್ತೀಚೆಗೆ ಶಾಲೆಗಳಲ್ಲೂ ಧಾರ್ಮಿಕ ಕಿಚ್ಚು ಹೊತ್ತಿಕೊಳ್ಳುತ್ತಿರುವುದು ದುರಂತ. ಇದೀಗ ರಾಜಸ್ಥಾನದ ಬರನ್ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕಿ ಸರಸ್ವತಿ ದೇವಿಗೆ ಅವಮಾನ ಮಾಡಿ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಗಂಭೀರ ಆರೋಪ ಕೇಳಿಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಶಿಕ್ಷಕಿ ಸರಸ್ವತಿ ದೇವಿಗೆ ಅಮಮಾನ ಮಾಡಿರುವುದು ಪತ್ತೆಯಾಗುತ್ತಿದ್ದಂತೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.  

ಬರನ್ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕಿ ಹೇಮಲತಾ ಬೈರ್ವಾ ಅಮಾನತುಗೊಂಡಿರುವ ಶಿಕ್ಷಕಿ. ಈ ಶಿಕ್ಷಕಿ ಪದೇ ಪದೇ ಸರಸ್ವತಿ ದೇವಿ ವಿರುದ್ಧ ಹೇಳಿಕೆ ನೀಡಿರುವು ಕುರಿತು ಮಕ್ಕಳ ಪೋಷಕರು ದೂರು ನೀಡಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇದೀಗ ಮತ್ತೆ ಶಿಕ್ಷಕಿ ಸರಸ್ವತಿ ದೇವಿ ಶಿಕ್ಷಣ ದೇವತೆಯಲ್ಲ ಎಂದಿದ್ದಾರೆ. ಶಿಕ್ಷಣಕ್ಕೆ ಸರಸ್ವತಿಯ ಕೊಡುಗೆ ಏನು? ಇದರ ಜೊತೆಗೆ ಸರಸ್ವತಿ ದೇವಿ ವಿರುದ್ಧ ಕೆಲ ಮಾತುಗಳನ್ನಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ರಾಜಸ್ಥಾನ ಶಿಕ್ಷಣ ಸಚಿವ ಮದನ್ ದಿಲಾವರ್ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಸಿಗರೇಟು ಸೇದುವ ಸೀತಾ ದೇವಿ, ದೇವರ ಅವಹೇಳನ ನಾಟಕ ಪ್ರದರ್ಶಿಸಿದ 5 ವಿದ್ಯಾರ್ಥಿಗಳು,ಪ್ರೊಫೆಸರ್ ಅರೆಸ್ಟ್ !

ಶಾಲಾ ಶಿಕ್ಷಕರು ತಮ್ಮ ಪಾಠ, ಮಾರ್ಗದರ್ಶನ, ಮೌಲ್ಯಯುತ ಜೀವನವನ್ನು ಮಕ್ಕಳಿಗೆ ಕಲಿಸಬೇಕು. ಈ ದೇಶದ ಬಗ್ಗೆ ಮಕ್ಕಳಲ್ಲಿ ಗೌರವ ಮೂಡಬೇಕು. ಇದರ ನಡುವೆ ಸರಸ್ವತಿಯನ್ನು ಅಪಮಾನ ಮಾಡುವುದು, ಧಾರ್ಮಿಕ ಭಾವನೆಗೆ ಧಕ್ಕೆ ತರುವುದನ್ನು ಸರ್ಕಾರ ಸಹಿಸುವುದಿಲ್ಲ. ಹೀಗಾಗಿ ತಕ್ಷಣವೇ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಮದನ್ ದಿಲಾವರ್ ಆದೇಶ ಹೊರಡಿಸಿದ್ದಾರೆ. ಬರನ್ ಜಿಲ್ಲೆಯ ಕೃಷ್ಣಗಂಜ್ ವಲಯದ ಲಕ್ಡಾಯ್ ಗ್ರಾಮದ ಶಾಲಾ ಶಿಕ್ಷಕಿ ಹೇಮಲತಾ ಇದೀಗ ಅಮಾನತುಗೊಂಡಿದ್ದಾರೆ. 

ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಸರಸ್ವತಿ ಫೋಟೋವನ್ನು ಕಾರ್ಯಕ್ರಮದಲ್ಲಿ ಇಡಲು ನಿರಾಕರಿಸಿದ್ದಾರೆ. ಸರಸ್ವತಿ ಫೋಟೋವನ್ನು ತಕ್ಷಣವೇ ತೆಗೆಸಿದ್ದಾರೆ. ಇದು ವಿದ್ಯಾರ್ಥಿಗಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ಪೋಷಕರು ಪ್ರತಿಭಟನೆ ನಡೆಸಿದ್ದರು. ದೂರು ದಾಖಲಿಸಿದ್ದರು. ಶಿಕ್ಷಕಿಯ ಹೇಳಿಕೆ, ನಡೆ, ದೂರುಗಳನ್ನು ಆಧರಿಸಿ ಇದೀಗ ಅಮಾನತು  ಮಾಡಲಾಗಿದೆ.

 

ವಿಜಯಪುರ: ದೇವಿಮೂರ್ತಿ ವಿವಸ್ತ್ರಗೊಳಿಸಿದ ಅನ್ಯಕೋಮಿನ ವ್ಯಕ್ತಿ ಬಂಧನ

ಶಾಲಾ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಶಾಲೆ, ಸ್ಥಳೀಯರನ್ನೊಳಗೊಂಡ ಶಾಲಾ ಸಮಿತಿ, ಗ್ರಾಮದ ಇತರ ಸಂಘಟನೆಗಳು ಜೊತೆ ಸೇರಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಸರಸ್ವತಿ ದೇವಿ ಫೋಟೋಗೆ ಶಿಕ್ಷಕಿ ಗರಂ ಆಗಿದ್ದರು. ಹೀಗಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ಸುಸೂತ್ರವಾಗಿ ಆಯೋಜನೆಗೊಂಡಿರಲಿಲ್ಲ.

Follow Us:
Download App:
  • android
  • ios