ಪಂಚರಾಜ್ಯ ಚುನಾವಣೆಯ ಭಾಗವಾಗಿ ಶನಿವಾರ ರಾಜಸ್ಥಾನದ 199 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಶೇ.69ರಷ್ಟು ಮತದಾನವಾಗಿದೆ. ಕೆಲವೊಂದು ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ಜೈಪುರ: ಪಂಚರಾಜ್ಯ ಚುನಾವಣೆಯ ಭಾಗವಾಗಿ ಶನಿವಾರ ರಾಜಸ್ಥಾನದ 199 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಶೇ.69ರಷ್ಟು ಮತದಾನವಾಗಿದೆ. ಕೆಲವೊಂದು ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. 200 ಕ್ಷೇತ್ರಗಳ ಪೈಕಿ 1ರಲ್ಲಿ ಅಭ್ಯರ್ಥಿಯೊಬ್ಬ ನಿಧನ ಹೊಂದಿದ ಕಾರಣ 199ರಲ್ಲಿ ಮತದಾನ ನಡೆಯಿತು. 1862 ಅಭ್ಯರ್ಥಿಗಳು ಕಣದಲ್ಲಿದ್ದು, ಡಿ.3ರಂದು ಇವರೆಲ್ಲರ ಭವಿಷ್ಯ ನಿರ್ಧಾರವಾಗಲಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot), ವಿಧಾನಸಭಾ ಸ್ಪೀಕರ್ ಸಿ.ಪಿ.ಜೋಶಿ (CP Joshi), ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ (Sachin Pilot), ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸೇರಿ ಅನೇಕರು ಉತ್ಸಾಹದಿಂದ ಮತ ಚಲಾಯಿಸಿದರು. ರಾಜ್ಯದಲ್ಲಿ ಸುಮಾರು 51 ಸಾವಿರ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಮುಂಜಾನೆ 7 ಗಂಟೆಯಿಂದಲೇ ಜನ ಸರತಿಯಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಸುಗಮ ಮತದಾನಕ್ಕಾಗಿ ರಾಜ್ಯಾದ್ಯಂತ 1.7 ಲಕ್ಷ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.
ಪಿಎಂ ಅಂದ್ರೆ 'ಪನೌತಿ ಮೋದಿ' ಪ್ರೈಮ್ ಮಿನಿಸ್ಟರ್ ಘನತೆಗೆ ಅವಮಾನಿಸಿದ್ರಾ ರಾಹುಲ್ ಗಾಂಧಿ?
ದೀಗ್ ಜಿಲ್ಲೆಯ ಸನ್ವಾಲರ್‌ನಲ್ಲಿ ಕಲ್ಲು ತೂರಾಟ (Stone Pelting) ನಡೆದಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೇ ಫತೇಪುರ್‌ನ ಸಿಕಾರ್‌ನಲ್ಲೂ 2 ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಉಳಿದಂತೆ ರಾಜ್ಯಾದ್ಯಂತ ಶಾಂತಿಯುತ ಮತದಾನವಾಗಿದೆ.
ತೆಲಂಗಾಣದಲ್ಲಿ ಸೋನಿಯಾ ಜನ್ಮದಿನಕ್ಕೆ 'ಗ್ಯಾರಂಟಿ ಗಿಫ್ಟ್' : ಡಿಕೆಶಿ
ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಳಿಕ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಜನ್ಮದಿನವಾದ ಡಿಸೆಂಬರ್ 9 ರಂದೇ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಕ್ಯಾಬಿನೆಟ್ ಸಭೆ ನಡೆಸಲಿದ್ದು, ಅಂದೇ ರಾಜ್ಯಕ್ಕೆ ಕಾಂಗ್ರೆಸ್ ಭರವಸೆ ನೀಡಿರುವ 6 ಗ್ಯಾರಂಟಿಗಳನ್ನು ಜಾರಿ ಮಾಡುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ರಾಜಸ್ಥಾನ ಚುನಾವಣೆಗೆ 7 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್: ಕರ್ನಾಟಕಕ್ಕಿಲ್ಲದ ಇನ್ನೆರಡು ಗ್ಯಾರಂಟಿ ಯಾವುವು?
ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಜನರು ಬದಲಾವಣೆಯನ್ನು ಬಯಸಿದ್ದಾರೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರನ್ನು ಶಾಶ್ವತವಾಗಿ ಅವರ ಫಾರ್ಮ್‌ಹಾಸ್‌ಗೇ ಸೀಮಿತಗೊಳಿಸುವುದನ್ನು ನೋಡಲು ಇಚ್ಛಿಸಿದ್ದಾರೆ ಎಂದಿದರು. ಇದೇ ವೇಳೆ ತಮ್ಮ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮೋದನೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದುಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೋಪದೋಷಗಳಿವೆ. ನನಗೆ ನಾನೇ ವಕೀಲನಾಗಲು ಇಚ್ಛಿಸಲ್ಲ. ನಾನು ಅಂದು ಕ್ಯಾಬಿನೆಟ್ ಸಭೆಗೆ ಹೋಗಿರಲಿಲ್ಲ. ಇದು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ. ಯಾವುದೇ ಅನುಮತಿ ನೀಡಿದರೂ ಅದು ಅಸಿಂಧು ಎಂದು ನಾನು ಅರ್ಜಿ ಸಲ್ಲಿಸಿದ್ದೆ. ಆದರೆ ಅನುಮತಿ ನೀಡಿಕೆ ಸರಿ ಅಲ್ಲ ಎಂದು ಅಂದಿನ ಅಡ್ವೊಕೇಟ್ ಜನರಲ್ ಹೇಳಿದ್ದರು. ಈಗಿನ ನಿರ್ಧಾರದ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಇದೇ ವೇಳೆ ಜಾತಿಗಣತಿಯ ಪುಟಗಳು ನಾಪತ್ತೆಯಾಗಿದ್ದು, ರಾಜಕೀಯ ತಂತ್ರವೇ, ವರದಿಯನ್ನು ಮುಚ್ಚಿಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಾವು ಘೋಷಿಸಿರುವ ಜಾತಿಗಣತಿ ಅಥವಾ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೆ ನಾವು ಬದ್ಧರಾಗಿದ್ದೇವೆ. ಅದು ವ್ಯವಸ್ಥಿತವಾಗಿ ನಡೆಯಬೇಕಿದೆ. ಈ ಬಗ್ಗೆ ನಾನು ಹೆಚ್ಚೇನು ಹೇಳಲ್ಲ’ ಎಂದರು.
