ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ ಉಪಮುಖ್ಯಮಂತ್ರಿಯಾಗಿ ದಿಯಾ ಕುಮಾರಿ ಹಾಗೂ ಪ್ರೇಮ್ ಚಂದ್ರ ಬೈರ್ವಾ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜೈಪುರ(ಡಿ.15) ರಾಜಸ್ಥಾನ ವಿಧಾನಸಭೆ ಗೆದ್ದ ಬಿಜೆಪಿ ಇದೀಗ ಅಧಿಕೃತವಾಗಿ ಸರ್ಕಾರ ರಚಿಸಿದೆ. ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಶರ್ಮಾ ಜೊತೆಗೆ ಉಪಮುಖ್ಯಮಂತ್ರಿಗಳಾಗಿದೆ. ದಿಯಾ ಕುಮಾರಿ ಹಾಗೂ ಪ್ರೇಮ್ ಚಂದ್ರ ಬೈರ್ವಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಬಿವಿಪಿ ಮೂಲದ ಹಾಗೂ ಆರೆಸ್ಸೆಸ್ ಬೆಂಬಲಿತ ಭಜನ್‌ಲಾಲ್ ಶರ್ಮಾ ಅವರನ್ನು ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಹಾಗೂ ಆರ್‌ಎಸ್ಎಸ್ ಕಾರ್ಯಕರ್ತ ಭಜನ್ ಲಾಲ್ ಶರ್ಮಾ(54) ಇಂದು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
3 ಮಾಜಿ ಸಿಎಂಗಳಿಗೆ ಬಿಜೆಪಿ ಕೊಕ್, ಜಾತಿ ಆಧಾರಿತವಾಗಿ ಮುಖ್ಯಮಂತ್ರಿ ಪಟ್ಟ ಹಂಚಿದ ಬಿಜೆಪಿ!
ಎಂಎ ರಾಜ್ಯಶಾಸ್ತ್ರ ಪದವೀಧರ ಭಜನ್‌ಲಾಲ್ ಶರ್ಮಾ ಮೂಲತಃ ರಾಜಸ್ಥಾನದ ಭರತ್‌ಪುರದವರು. ಎಬಿವಿಪಿ ಮೂಲದವರಾಗಿದ್ದ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡು ದೀರ್ಘಾವಧಿಯಿಂದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದಾರೆ. ಭರತ್‌ಪುರದಿಂದ ಟಿಕೆಟ್ ಕೇಳಿದ್ದರು. ಆದರೆ ವರಿಷ್ಠರು ‘ಭರತ್‌ಪುರದಲ್ಲಿ ಬ್ರಾಹ್ಮಣರು ತುಂಬಾ ಕಮ್ಮಿ ಇದ್ದಾರೆ. ಅಲ್ಲಿ ನೀವು ಗೆಲ್ಲುವ ಸಾಧ್ಯತೆ ಇಲ್ಲ. ಹೀಗಾಗಿ ಸಾಂಗಾನೇರ್ ಕ್ಷೇತ್ರದಿಂದ ನಿಲ್ಲಿ’ ಎಂದು ಸಾಂಗಾನೇರ್ ಟಿಕೆಟ್ ನೀಡಿದ್ದರು. ಅಲ್ಲಿ 48 ಸಾವಿರ ಮತದ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿ ವಿಧಾನಸಭೆ ಮೆಟ್ಟಿಲೇರಿದ ಶರ್ಮಾ ಇದೀಗ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿದ್ದಾರೆ.
ರಾಜಸ್ಥಾನದ ಸಿಎಂ ಆಯ್ಕೆ ಹಲವರಿಗೆ ಅಚ್ಚರಿ ನೀಡಿತ್ತು. ಘಟಾನುಘಟಿ ನಾಯಕರು, ಮಾಜಿ ಸಿಎಂ ವಸುಂಧರಾ ರಾಜೆ ಸೇರಿದಂತೆ ಹಲವು ನಾಯಕರ ಹಿಂದಿಕ್ಕಿದ ಭಜನ್ ಲಾಲ್ ಶರ್ಮಾ ಸಿಎಂ ಆಯ್ಕೆ ಆಯ್ಕೆಯಾಗಿದ್ದರು.
ಮಧ್ಯಪ್ರದೇಶದಲ್ಲಿ ಚೌವ್ಹಾಣ್ ರಾಜ್ಯಭಾರ ಅಂತ್ಯ..! 3 ಬಾರಿ ಶಾಸಕನಿಗೆ ಸಿಎಂ ಪಟ್ಟ ಕಟ್ಟಿದ ಹೈಕಮಾಂಡ್ !
ರಾಜಸ್ಥಾನ ವಿಧಾನಸಭಾ ಚುನಾವಣೆ ನವೆಂಬರ್ 25 ರಂದು ನಡೆದಿತ್ತು. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟಗೊಂಡಿತ್ತು. ಬಿಜೆಪಿ 115 ಸ್ಥಾನ ಗೆಲ್ಲುವ ಮೂಲಕ ಪೂರ್ಣ ಬಹುಮತ ಪಡೆಯಿತು. ಅಧಿಕಾರದಲ್ಲಿದ್ದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ 69 ಸ್ಥಾನಕ್ಕೆ ಕುಸಿದಿತ್ತು. ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳ ಪೈಕಿ 199 ಸ್ಥಾನಕ್ಕೆ ಚುನಾವಣೆ ನಡೆದಿತ್ತು.
