ರಾಹುಲ್ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ: ಗೆಹ್ಲೋಟ್ ಘೋಷಣೆ
2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೆಹ್ಲೋಟ್ (Ashok Gehlot), ‘ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಹಂಕಾರಿಯಾಗಬಾರದು. 2014ರಲ್ಲಿ ಬಿಜೆಪಿ ಕೇವಲ ಶೇ.31ರಷ್ಟುಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ. ಉಳಿದ ಶೇ.69ರಷ್ಟು ಮತಗಳು ಬಿಜೆಪಿಯ (BJP) ವಿರುದ್ಧವಾಗಿವೆ’ ಎಂದಿದ್ದಾರೆ.
ಈ ವೇಳೆ 26 ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಬಗ್ಗೆ ಮಾತನಾಡಿದ ಅವರು ‘ಕಳೆದ ತಿಂಗಳು ಬೆಂಗಳೂರಿನಲ್ಲಿ ‘ಇಂಡಿಯಾ’ ಸಭೆ ನಡೆಸಿದಾಗ ಎನ್‌ಡಿಎ ಭಯಗೊಂಡಿತ್ತು. 2024ರಲ್ಲಿ ಎನ್‌ಡಿಎ (NDA) ಶೇ.50ರಷ್ಟು ಮತಗಳೊಂದಿಗೆ ಮರಳಿ ಅಧಿಕಾರಕ್ಕೆ ಬರಲು ಯೋಜಿಸುತ್ತಿದೆ ಎನ್ನಲಾಗುತ್ತಿದೆ. ಆದರೆ ಅದನ್ನು ಸಾಧಿಸಲು ಮೋದಿ ಅವರಿಗೆ ಎಂದಿಗೂ ಸಾಧ್ಯವಿಲ್ಲ. 2024ರ ಚುನಾವಣೆಯೇ ಪ್ರಧಾನಿ ಯಾರೆಂಬುದನ್ನು ನಿರ್ಧರಿಸುತ್ತದೆ’ ಎಂದರು.
ಲೋಕಸಭಾ ಚುನಾವಣೆ: ಪ್ರಧಾನಿ ಮೋದಿ ವಿರುದ್ದ ಪ್ರಿಯಾಂಕಾ ಕಣಕ್ಕಿಳಿಸಲು ಯುಪಿ ಕಾಂಗ್ರೆಸ್ ಉತ್ಸುಕ!
ಒಲ್ಲದ ಮದುವೆ ಇಬ್ರಿಗೂ ಹಾನಿ:
ಚಂಡೀಗಢ: ಪಂಜಾಬ್‌ನಲ್ಲಿ ಆಡಳಿತಾರೂಢ ಆಪ್ (AAP) ಜೊತೆ ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್, ‘ಒಲ್ಲದ ಮದುವೆಯಾದರೆ 2 ಕುಟುಂಬಗಳಿಗೂ ಹಾನಿಯಾಗುತ್ತದೆ’ ಎನ್ನುವ ಮೂಲಕ ಮತ್ತೊಮ್ಮೆ ಮೈತ್ರಿ ಬಗ್ಗೆ ತನ್ನ ಅಸಮಾಧಾನವನ್ನು ಹೊರಹಾಕಿದೆ. ಈ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಗ್ ಬಜ್ವಾ, ‘ಕಾಂಗ್ರೆಸ್ ಕಾರ್ಯಕರ್ತರು (COngress workers) ಈ ಹೊಸ ಪಕ್ಷ ನಾಯಕರ (ಆಪ್ ನಾಯಕರು) ಮುಖವನ್ನು ನೋಡಲು ಬಯಸುವುದಿಲ್ಲ. ಎಲ್ಲಿ ಒಪ್ಪಿತವಲ್ಲದ ಸ್ನೇಹವಿರುತ್ತದೋ, ಅಥವಾ ನಿಮ್ಮ ಸಂಗಾತಿ ಮದುವೆಗೆ ಒಪ್ಪಿರುವುದಿಲ್ಲವೋ ಅಂತಹ ಸಂಬಂಧಗಳು 2 ಕುಟುಂಬಗಳಿಗೂ ಹಾನಿ ಉಂಟು ಮಾಡುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಪಂಜಾಬ್ ವಿರುದ್ಧ ಕೆಲಸ ಮಾಡುವವರ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ಲೋಕಸಭೆ ಟಿಕೆಟ್‌ಗಾಗಿ ಕಾಂಗ್ರೆಸ್ ಉಪಾಧ್ಯಕ್ಷೆ ವೀಣಾ ಪಟ್ಟು: ಮಾಜಿ ಸಚಿವರಿಂದಲೂ ಭರ್ಜರಿ ಫೈಟ್