ತಮಿಳುನಾಡಿನ ನಂತರದಲ್ಲಿ ದಿನಕ್ಕೆ ಅತಿಹೆಚ್ಚು ಕೊರೋನಾ ಪರೀಕ್ಷೆ ನಡೆಸುವ ಖ್ಯಾತಿ ಇರುವ ರಾಜಸ್ಥಾನ| ಆನೆಗಳಿಗೂ ಕೊರೋನಾ ಪರೀಕ್ಷೆ ಶುರು

ಜೈಪುರ(ಜೂ.14): æಹಲಿ ಹಾಗೂ ತಮಿಳುನಾಡಿನ ನಂತರದಲ್ಲಿ ದಿನಕ್ಕೆ ಅತಿಹೆಚ್ಚು ಕೊರೋನಾ ಪರೀಕ್ಷೆ ನಡೆಸುವ ಖ್ಯಾತಿ ಇರುವ ರಾಜಸ್ಥಾನದಲ್ಲಿ ಇದೀಗ ಪ್ರಾಣಿಗಳಿಗೂ ಸೋಂಕು ಪತ್ತೆ ಪರೀಕ್ಷೆ ಆರಂಭಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಸ್ಥಾನದ ರಾಜಧಾನಿ ಜೈಪುರದ ಹಾತಿ ಗಾಂವ್‌(ಆನೆಗಳ ಗ್ರಾಮ)ನಲ್ಲಿ ಆನೆಗಳಿಗೆ ರಾಜ್ಯ ಅರಣ್ಯ ಇಲಾಖೆ ಕೋವಿಡ್‌-19 ಪರೀಕ್ಷೆಯನ್ನು ಆರಂಭಿಸಿದೆ. ಈ ವೇಳೆ ಪ್ರಾಣಿಗಳ ವೈದ್ಯ ಡಾ. ಅರವಿಂದ್‌ ಮಾಥೂರ್‌ ಅವರು ಆನೆಗಳ ಗಂಟಲು ದ್ರವವನ್ನು ಸಂಗ್ರಹಿಸಿದರು.

ಈ ಗ್ರಾಮದಲ್ಲಿ 110 ಆನೆಗಳು ಇರುವ ಕಾರಣ ಈ ಗ್ರಾಮಕ್ಕೆ ಆನೆ ಗ್ರಾಮವೆಂದೇ ಪ್ರಸಿದ್ಧಿ. ಈ ಪೈಕಿ 63 ಆನೆಗಳು ಆನೆ ಗ್ರಾಮದಲ್ಲೇ ಆಶ್ರಯ ಪಡೆದಿದ್ದು, ಉಳಿದ ಆನೆಗಳು ಮಾಲಿಕರ ಬಳಿಯಿವೆ.