ಕೊರೋನಾ ಸಮರ: ಈ ಕಲೆಕ್ಟರ್ ಕೊಟ್ಟ ಆದೇಶದ ಬಳಿಕ ಜನ ಹೊರಗ್ಬರೋದು ಡೌಟೇ ಬಿಡಿ!
ಕೊರೋನಾ ತಾಂಡವಕ್ಕೆ ಭಾರತ ಕಂಗಾಲು| ದೇಶದಾದ್ಯಂತ ಬಂದ್ ವಾತಾವರಣ| ಕೊರೋನಾ ಭೀತಿ ಇದ್ದರೂ, ಒರ ಬರುತ್ತಿದ್ದಾರೆ ಜನ| ಜನರನ್ನು ತಡೆಯಲು ಈ ಜಿಲ್ಲೆಯ ಕಲೆಕ್ಟರ್ ತಗೊಂಡ್ರು ಕಟ್ಟುನಿಟ್ಟಿನ ಕ್ರಮ
ಜೆಐಪುರ್(ಮಾ.23): ಕೊರೋನಾ ಅಡ್ಡಹಾಸ ಮಿತಿ ಮೀರುತ್ತಿದ್ದು, ಇಡೀ ದೇಶವೇ ಸದ್ಯ ಅಪಾಯದಲ್ಲಿದೆ. ಹೀಗಿರುವಾಗ ರಾಜಸ್ಥಾನ ಸರ್ಕಾರ ಇಡೀ ರಾಜ್ಯದಲ್ಲಿ ಮಾರ್ಚ್ 31ರವರೆಗೆ ಲಾಕ್‌ಡೌನ್ ಘೋಷಿಸಿದೆ. ಹೀಗಿರುವಾಗ ಅತ್ತ ಅಲ್ವರ್ ಜಿಲ್ಲೆಯ ಕಲೆಕ್ಟರ್ ಇಂದ್ರಜೀತ್ ಸಿಂಗ್ ಜಿಲ್ಲೆಯಲ್ಲಿ ಐದಕ್ಕಿಂತ ಹೆಚ್ಚು ಜನರು ಒಟ್ಟಾಗಿ ಕಾಣಿಸಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗಗೊಳ್ಳುವುದಾಗಿ ಆದೇಶಿಸಿದ್ದಾರೆ.
ಯಾರನ್ನೂ ಬಿಡಲ್ಲ
ಜಿಲ್ಲಾ ಕಲೆಕ್ಟರ್ ಇಂದ್ರಜೀತ್ ಸಿಂಗ್ ಈ ಸಂಬಂಧ ಆದೇಶ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಒಂದು ವೇಳೆ ಐದಕ್ಕಿಂತ ಹೆಚ್ಚು ಮಂದಿ ಒಂದೇ ಕಡೆ ಕಂಡು ಬಂದರೆ ಅವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಜಾರಿಗೊಳಿಸುತ್ತೇವೆ. ಅವರು ಅದೆಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಅಥವಾ ವಿಐಪಿ ಆಗಿರಲಿ ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.
ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇವರಿಗಷ್ಟೇ ಪರ್ಮಿಷನ್
ಬೆಳಗ್ಗೆ ಕೇವಲ ಹಾಲು, ತರಕಾರಿ, ದಿನಸಿ ಅಂಗಡಿ, ಮೆಡಿಕಲ್ ಶಾಪ್‌ಗಳಷ್ಟೇ ತೆರೆದಿರುತ್ತವೆ, ಇವುಗಳು ಕೂಡಾ ಮಧ್ಯಾಹ್ನ ಹಾಗೂ ಸಂಜೆ ಮುಚ್ಚಿರುತ್ತವೆ. ಜನರು ದಿನನಿತ್ಯದ ಸಾಮಾನು ಖರರೀದಿಸಲು ಅಂಗಡಿಗೆ ತೆರಳಬಹುದು. ಆದರೆ ಈ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಹಾಗೂ ಕೈಯ್ಯಲ್ಲಿ ಸ್ಯಾನಿಟೈಸರ್ ಇರುವುದು ಕಡ್ಡಾಯ ಎಂದಿದ್ದಾರೆ.
ಯಾರೆಲ್ಲಾ ಹೊರ ಬರಬಹುದು?
ಜಿಲ್ಲೆಯಲ್ಲಿ ಕೇವಲ ಪೊಲೀಸ್ ಸಿಬಬ್ಬಂದಿ, ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೆಲ ಸಾಮಾಜಿ ಸಂಘಟನೆಯ ಸದಸ್ಯರು ಹೊರ ಬರಬಹುದು. ಇನ್ನು ಸರ್ಕಾರಿ ಉದ್ಯೋಗಿಗಳಿಗೆ ಸನುಮತಿ ಇಲ್ಲದೇ ತಮ್ಮ ನಿವಾಸದಿಂದ ಹೊರ ಬರದಂತೆ ಆದೇಶಿಸಲಾಗಿದೆ. ಇನ್ನುರೋಗಿಗಳು ಕೂಡಾ ಹೊರ ಹಹೋಗುವಾಗ ಕೈಯ್ಯಲ್ಲಿ ವೈದ್ಯರು ನೀಡಿದ್ದ ಮೆಡಿಕಲ್ ಸರ್ಟಿಫಿಕೇಟ್ ಇರಲೇಬೇಕು.
ಜನತಾ ಕರ್ಫ್ಯೂಗೆ ಒಂದಾದ ಭಾರತ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮಾರ್ಚ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ