Asianet Suvarna News Asianet Suvarna News

ಜೀನಾ ಯಹಾ ಮರ್ನಾ‌ ಯಹಾ ಹಾಡು ಹಾಡಿದ ಸಚಿನ್‌ ಪೈಲಟ್‌

  • ಜೀನಾ ಯಹಾ ಮರ್ನಾ ಯಹಾ ಹಾಡು ಹಾಡಿದ ಸಚಿನ್‌ ಪೈಲಟ್‌
  • ಟ್ವಿಟ್ಟರ್‌ನಲ್ಲಿ  1.9 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆ
  • ಜೈಪುರದಲ್ಲಿ ರೋಟರಿ ಕ್ಲಬ್‌ ಆಯೋಜಿಸಿದ್ದ ಕಾರ್ಯಕ್ರಮ
Rajastan Congress leader Sachin Pilot Sings Jeena Yahan Marna Yahan Shares Video On Twitter akb
Author
Bangalore, First Published Dec 22, 2021, 4:45 PM IST

ಜೈಪುರ: ಕಾಂಗ್ರೆಸ್‌ ಮುಖಂಡ, ರಾಜಸ್ತಾನದ ಪ್ರಭಾವಿ ಯುವ ನಾಯಕ, ಸ್ಪುರದ್ರೂಪಿ ಸಚಿನ್‌ ಪೈಲಟ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಸಚಿನ್ ಪೈಲಟ್‌ರವರ ರಾಜಕೀಯದಾಚೆಗಿನ ಬದುಕಿನ ವಿಚಾರಗಳು ನಿಜಕ್ಕೂ ಆಸಕ್ತಿದಾಯಕವಾಗಿವೆ. ಇತ್ತೀಚೆಗೆ ಅವರು ಕಾರ್ಯಕ್ರಮವೊಂದರಲ್ಲಿ 'ಜೀನಾ ಯಹಾ ಮರ್ನಾ ಯಹಾ' (Jeena Yahan Marna Yahan) ಹಾಡಿಗೆ ಧ್ವನಿ ಗೂಡಿಸಿದ್ದು,  ಇದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಇದನ್ನು 1.9 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. 

ಜೈಪುರ (Jaipur) ದ ಆಲ್ಬರ್ಟ್ ಹಾಲ್‌ (Albert Hall)ನಲ್ಲಿ ರೋಟರಿ ಕ್ಲಬ್ (Rotary Club) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿನ್ ಪೈಲಟ್ ಹಾಡುತ್ತಿರುವುದನ್ನು ಚಿತ್ರೀಕರಿಸಲಾಗಿದೆ. ಕಳೆದ ವಾರ ನಡೆದ ರಾಜಸ್ಥಾನ ಸರ್ಕಾರದ ಮೂರು ವರ್ಷಗಳ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ  ಸಚಿನ್ ಪೈಲಟ್‌ ಗೈರು ಹಾಜರಾಗಿದ್ದರು. ಈ ಬಗ್ಗೆ ಎದ್ದಿರುವ ಹಲವು ಊಹಾಪೋಹಗಳ ಮಧ್ಯೆ ಈ ವೀಡಿಯೊ ಹೊರ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

 

ಈ ವೀಡಿಯೊದಲ್ಲಿ, ಸಚಿನ್ ಪೈಲಟ್ ದೊಡ್ಡ ಗುಂಪಿನೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಮೈಕ್ ಹಿಡಿದುಕೊಂಡ ಕಾಂಗ್ರೆಸ್ ನಾಯಕ, ಬಾಲಿವುಡ್ ನಟ ರಾಜ್ ಕಪೂರ್ ಅವರ 1970 ರ ಚಲನಚಿತ್ರ ಮೇರಾ ನಾಮ್ ಜೋಕರ್‌ನ (Mera Naam Joker) ಸಾಂಪ್ರದಾಯಿಕ ಹಾಡಿನ ಕೆಲವು ಸಾಲುಗಳನ್ನು ಹಾಡಿದರು. 'ಜೀನಾ ಯಹಾ, ಮರ್ನಾ ಯಹಾ, ಇಸ್ಕೆ ಶಿವ ಜಾನಾ ಕಹಾ' ಎಂದು ಬರೆದು ಈ ವಿಡಿಯೋವನ್ನು ಅವರು ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋವನ್ನು 1.9 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.  ಜೈಪುರದ ಆಲ್ಬರ್ಟ್ ಹಾಲ್‌ನಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. 

ಇದಕ್ಕೂ ಮೊದಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ನಡೆದ ರಾಜಸ್ಥಾನ ಸರ್ಕಾರದ ಮೂರು ವರ್ಷಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಚಿನ್‌ ಪೈಲಟ್  ಗೈರಾಗಿದ್ದರು. ಇದರಿಂದ ಉಭಯ ನಾಯಕರ ನಡುವೆ ಮತ್ತೆ ಮನಸ್ತಾಪ ಉಂಟಾಗಿದೆ ಎಂದು ಬಿಂಬಿಸಲಾಗಿತ್ತು. 
ಇತ್ತೀಚೆಗೆ ಅಶೋಕ್‌ ಗೆಹ್ಲೋಟ್ ಕಳೆದ ವರ್ಷ ಬಂಡಾಯವೆದ್ದಿದ್ದ ಸಚಿನ್‌ ಪೈಲಟ್‌ (Sachin Pilot)ಗೆ ಅವಕಾಶ ಕಲ್ಪಿಸುವ ಸಲುವಾಗಿ ತಮ್ಮ ಕ್ಯಾಬಿನೆಟ್ ಅನ್ನು ಪರಿಷ್ಕರಿಸಿದರು.

ಫಾರೂಕ್ ಅಳಿಯ, ಸೇನಾಧಿಕಾರಿ, ಕಿರಿಯ ಎಂಪಿ ಪೈಲಟ್ ಜೀವನಗಾಥೆಯಿದು!

2011ರವರೆಗೆ ರಾಜಸ್ತಾನದಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ಬಿಜೆಪಿ ಪತನಗೊಂಡ ನಂತರ ರಾಜಸ್ಥಾನ (Rajastan) ದಲ್ಲಿ ಪಕ್ಷದ ಪುನರುಜ್ಜೀವನಕ್ಕೆ ಕಾರಣರಾದ ಪೈಲಟ್ ಅವರು ಮುಖ್ಯಮಂತ್ರಿ ಸ್ಥಾನದ ಸ್ಪರ್ಧಿಯಾಗಿದ್ದರು. ಆದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರವೂ ಇವರಿಗೆ ಸಿಎಂ ಸ್ಥಾನ ಸಿಕ್ಕಿರಲಿಲ್ಲ. ನಂತರ ಸಂಧಾನ ನಡೆಸಿ ಇವರಿಗೆ ಡಿಸಿಎಂ ಹುದ್ದೆ ನೀಡಲಾಗಿತ್ತು. ಅಂದಿನಿಂದಲೂ ಅಶೋಕ್‌ ಗೆಹ್ಲೋಟ್‌ (Ashok Gehlot) ಹಾಗೂ ಸಚಿನ್ ಪೈಲಟ್‌ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ ಎಂದು ಮೂಲಗಳು ಹೇಳುತ್ತವೆ.

Rajasthan Politics| ಖಾತೆ ಹಂಚಿದರೂ ಮುಗಿಯದ ಬಿಕ್ಕಟ್ಟು, ಪೈಲಟ್‌ರನ್ನು ಹೊರ ಹಾಕುವಂತೆ ಮನವಿ!

ಹೀಗಿರುವಾಗ ಯುವ ನಾಯಕ ಹಾಗೂ ರಾಜಸ್ಥಾನ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಸಚಿನ್ ಪೈಲಟ್‌ರವರ ರಾಜಕೀಯದಾಚೆಗಿನ ಬದುಕಿನ ವಿಚಾರಗಳು ನಿಜಕ್ಕೂ ಆಸಕ್ತಿದಾಯಕವಾಗಿವೆ. ಸಿನಿಮಾದಲ್ಲಿರುವ ಕಥೆಯಂತೆ ಮುಸ್ಲಿಂ ಪ್ರಭಾವಿ ರಾಜಕಾರಣಿಯ ಮಗಳನ್ನೇ ಪ್ರೀತಿಸಿ ಮದುವೆಯಾಗುವ ಅವರ ಲವ್ ಸ್ಟೋರಿ ಹಾಗೂ ಭಾರತೀಯ ಸೇನೆಗೆ ಅವರ ಸೇವೆ ನಿಜಕ್ಕೂ ಪ್ರೇರಣೆ ನೀಡುವಂತಹುದ್ದು.

ಸಚಿನ್ ಪೈಲಟ್ ಮದುವೆಯಾಗಿದ್ದು, ಜಮ್ಮು ಕಾಶ್ಮೀರದ ಮುಸ್ಲಿಂ ಪ್ರಭಾವೀ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಮಗಳು ಹಾಗೂ ಒಮರ್ ಅಬ್ದುಲ್ಲಾರ ತಂಗಿ ಸಾರಾ ಅಬ್ದುಲ್ಲಾರನ್ನು. ಹೌದು ಇದು ಅಚ್ಚರಿ ಮೂಡಿಸಿದರೂ ನಂಬಲೇಬೇಕಾದ ವಿಚಾರ. ಇನ್ನು ಫರೂಕ್ ಅಬ್ದುಲ್ಲಾ ತಮ್ಮ ನಡುವಿನ ಪ್ರೀತಿಯನ್ನು ವಿರೋಧಿಸುತ್ತಾರೆಂದು ತಿಳಿದಾಗ, ಸಾರಾಳ ತಂದೆ, ಓರ್ವ ಮುಖ್ಯಮಂತ್ರಿಯನ್ನೇ ಎದುರಾಕಿಕೊಂಡು ಪ್ರೀತಿಸಿದ ಹುಡುಗಿಯನ್ನು ಕರೆದೊಯ್ದು ಮದುವೆಯಾಗಿದ್ದರು. 

Follow Us:
Download App:
  • android
  • ios