Asianet Suvarna News Asianet Suvarna News

ಸಾಮಾನ್ಯ ಸ್ಲೀಪರ್‌ ಬೋಗಿಗೆ ಎಸಿ ಭಾಗ್ಯ!

ಸಾಮಾನ್ಯ ಸ್ಲೀಪರ್‌ ಬೋಗಿಗೆ ಎಸಿ ಭಾಗ್ಯ| ಜನರಲ್‌ ಬೋಗಿಗೂ ಎಸಿ ಬೋಗಿಯಾಗಿ ಪರಿವರ್ತನೆ| ಕೈಗೆಟಕುವ ದರದಲ್ಲೇ ಪ್ರಯಾಣ ಭಾಗ್ಯ| ರೈಲ್ವೆಯಿಂದ ಹೊಸ ಪ್ರಯೋಗ

Railways works on upgrading Sleeper and General Class coaches to AC
Author
Bangalore, First Published Sep 10, 2020, 12:47 PM IST

ನವದೆಹಲಿ(ಸೆ. 10): ಹವಾನಿಯಂತ್ರಿತ ಬೋಗಿಗಳು ಸಾಮಾನ್ಯರಿಗೂ ಕೈಗೆಟಕುವತಾಗಬೇಕು ಎಂಬ ಉದ್ದೇಶದಿಂದ ರೈಲ್ವೆ ಇಲಾಖೆ 3 ಟಯರ್‌ ನಾನ್‌-ಎಸಿ ಸ್ಲೀಪರ್‌ ಕ್ಲಾಸ್‌ ಬೋಗಿಗಳನ್ನು ಹಾಗೂ ಕಾಯ್ದಿರಿಸದ ಸಾಮಾನ್ಯ ದರ್ಜೆ ಬೋಗಿಗಳನ್ನೂ ಎಸಿ ಕೋಚ್‌ಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ.

ಹೊಸ ಎಸಿ 3 ಟಯರ್‌ ಪ್ರಯಾಣಿಕರಿಗೆ ಕೈಗೆಟಕುವ ದರ ಇರಲಿದೆ. ಈ ದರವು ಈಗಿನ ಎಸಿ-3 ಟಯರ್‌ ಕೋಚ್‌ಗಳಲ್ಲಿನ ಪ್ರಯಾಣ ದರ ಹಾಗೂ ನಾನ್‌-ಎಸಿ ಸ್ಲೀಪರ್‌ ಕ್ಲಾಸ್‌ ಪ್ರಯಾಣ ದರದ ಮಧ್ಯೆ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಪೂರ್ತಲಾದಲ್ಲಿನ ರೈಲು ಬೋಗಿ ಕಾರ್ಖಾನೆಗೆ ಇವುಗಳ ಮಾದರಿ ಬೋಗಿಗಳ ತಯಾರಿಸುವ ಹೊಣೆ ನೀಡಲಾಗಿದೆ. ಈಗ ಒಂದು 3 ಟಯರ್‌ ಬೋಗಿಗಳಲ್ಲಿ 72 ಬತ್‌ರ್‍ (ಸೀಟು) ಇದ್ದು, ಇವುಗಳ ಸಂಖ್ಯೆಯನ್ನು ಇದರಲ್ಲಿ 83ಕ್ಕೆ ಏರಿಸುವ ಉದ್ದೇಶ ಹೊಂದಲಾಗಿದೆ. ಈ ಬೋಗಿಗೆ ‘ಎಸಿ 3-ಟಯರ್‌ ಟೂರಿಸ್ಟ್‌ ಕ್ಲಾಸ್‌’ ಎಂದು ನಾಮಕರಣ ಮಾಡಲಾಗುತ್ತದೆ.

ಮೊದಲ ಹಂತದಲ್ಲಿ 230 ಕೋಚ್‌ಗಳನ್ನು ಉತ್ಪಾದಿಸಲಾಗುತ್ತದೆ. ಪ್ರತಿ ಕೋಚ್‌ಗೆ 3 ಕೋಟಿ ರು. ವೆಚ್ಚವಾಗಲಿದ್ದು, ಈಗ ಉತ್ಪಾದಿಸಲಾಗುವ ಎಸಿ 3-ಟಯರ್‌ ಕೋಚ್‌ ಉತ್ಪಾದನಾ ವೆಚ್ಚಕ್ಕಿಂತ ಶೇ.10ರಷ್ಟುಹೆಚ್ಚು. ಇದೇ ವೇಳೆ ಜನರಲ್‌ ಕ್ಲಾಸ್‌ ಬೋಗಿಗಳನ್ನು 100 ಸೀಟುಗಳ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುತ್ತದೆ.

ಹಾಗಂತ ಈಗ ಇರುವ ನಾನ್‌-ಎಸಿ ಕೋಚ್‌ಗಳನ್ನು ತೆಗೆದು ಹಾಕುವುದಿಲ್ಲ. ಅವು ಮುಂದುವರಿಯುತ್ತವೆ. ಹಂತ ಹಂತವಾಗಿ ಇವನ್ನು ತೆಗೆದು ಹಾಕಲಾಗುತ್ತದೆಯೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios