Asianet Suvarna News Asianet Suvarna News

ರೈಲಲ್ಲಿ ರಾತ್ರಿ 11ರ ಬಳಿಕ ಮೊಬೈಲ್‌ ಚಾರ್ಜ್ ನಿರ್ಬಂಧ!

ಅಗ್ನಿ ಅವಘಡ ನಿಯಂತ್ರಸಿಲು ರೈಲ್ವೇ ಇಲಾಖೆಯ ನೂತನ ಕ್ರಮ| ರೈಲಲ್ಲಿ ರಾತ್ರಿ 11ರ ಬಳಿಕ ಮೊಬೈಲ್‌ ಚಾರ್ಜ್ ನಿರ್ಬಂಧ!

Railways to not allow charging of mobiles laptops at night during travel pod
Author
Bangalore, First Published Mar 31, 2021, 9:23 AM IST

ನವದೆಹಲಿ(ಮಾ.31): ಇನ್ನು ಮುಂದಿನ ದಿನಗಳಲ್ಲಿ ದೂರದ ಊರಿಗೆ ಪ್ರಯಾಣಿಸುವ ಪ್ರಯಾಣಿಕರು ರೈಲಿನಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ತಮ್ಮ ಮೊಬೈಲ್‌ ಚಾಜ್‌ರ್‍ ಹಾಕಿಕೊಳ್ಳುವಂತಿಲ್ಲ.

ಹೌದು, ಇತ್ತೀಚಿನ ದಿನಗಳಲ್ಲಿ ರಾತ್ರಿ ಹೊತ್ತು ರೈಲಿನಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡ ನಿಯಂತ್ರಣಕ್ಕಾಗಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಪಶ್ಚಿಮ ರೈಲ್ವೆ ವಿಭಾಗದ ಸಿಪಿಆರ್‌ಒ ಸುಮಿತ್‌ ಠಾಕೂರ್‌, ‘ಮಾ.16ರಿಂದಲೇ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಮೊಬೈಲ್‌ ಚಾಜ್‌ರ್‍ ಹಾಕಿಕೊಳ್ಳದ ಕ್ರಮವನ್ನು ಜಾರಿ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲಾ ರೈಲ್ವೆ ವಲಯಗಳಿಗೆ ರೈಲ್ವೆ ಮಂಡಳಿ ಸೂಚಿಸಿದೆ’ ಎಂದರು.

Follow Us:
Download App:
  • android
  • ios