Asianet Suvarna News Asianet Suvarna News

ಭಾರತೀಯ ರೈಲ್ವೇ ಎಂದಿಗೂ ಖಾಸಗೀಕರಣ ಮಾಡುವುದಿಲ್ಲ; ಭರವಸೆ ನೀಡಿದ ಗೋಯೆಲ್

ದೇಶದಲ್ಲೀಗ ಸರ್ಕಾರಿ ಖಾಸಗೀಕರಣ ಗಾಳಿ ಜೋರಾಗಿ ಬೀಸುತ್ತಿದೆ. ಸ್ವಾಮ್ಯದ ಸಂಸ್ಥೆಗನ್ನು ಖಾಸಗೀಕರಣ ಅಥವಾ ನಿರ್ವಹಣೆಗಾಗಿ ಖಾಸಗೀ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಈ ಖಾಸಗೀಕರಣ ಭರಾಟೆಯಲ್ಲಿ ಭಾರತೀಯ ರೈಲ್ವೇ ಇಲಾಖೆ ಕೂಡ ಖಾಸಗಿ ಪಾಲಾಗಲಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ರೈಲ್ವೇ ಸಚಿವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

Railways Minister Piyush Goyal revealed that Indian Railways will never be privatised ckm
Author
Bengaluru, First Published Mar 16, 2021, 10:21 PM IST

ನವದೆಹಲಿ(ಮಾ.16): ದೇಶದಲ್ಲಿ ಖಾಸಗೀಕರಣ, ಬ್ಯಾಂಕ್ ವಿಲೀನ ಸೇರಿದಂತೆ ಹಲವು ಯೋಜನೆಗಳು ಚಾಲ್ತಿಯಲ್ಲಿದೆ. ವಿಮಾನ ನಿಲ್ದಾಗಳನ್ನು ನಿರ್ವಹಣೆಗಾಗಿ ಖಾಸಗೀ ಸಂಸ್ಥೆಗಳಿಗೆ ನೀಡವು ಒಪ್ಪಂದ ಪ್ರಕ್ರಿಯೆಲ್ಲಿದೆ. ಇದರ ನಡುವೆ ಭಾರತೀಯ ರೈಲ್ವೇ ಇಲಾಖೆ ಖಾಸಗೀಕರಣಗೊಳ್ಳುತ್ತಿದೆ ಅನ್ನೋ ಆತಂಕ ಜನರಲ್ಲಿ ಮೂಡಿತ್ತು. ಇದೀಗ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ. 

ಬೆಂಗ್ಳೂರಲ್ಲಿ ದೇಶದ ಮೊದಲ ಎಸಿ ರೈಲ್ವೆ ನಿಲ್ದಾಣಕ್ಕೆ ಶೀಘ್ರ ಚಾಲನೆ

ಭಾರತೀಯ ರೈಲ್ವೇ ಎಂದಿಗೂ ಖಾಸಗೀಕರಣ ಮಾಡುವುದಿಲ್ಲ ಎಂದು ಪಿಯೂಷ್ ಗೋಯೆಲ್ ಲೋಕಸಭೆಯಲ್ಲಿ ಭರವಸೆ ನೀಡಿದ್ದಾರೆ.  ಕೇಂದ್ರ ಸರ್ಕಾರ ದೇಶದ ಬೆಳವಣಿಗೆ, ಉದ್ಯೋಗವಕಾಶ ಸೃಷ್ಟಿ ಸೇರಿದಂತೆ ಕೆಲ ಕಾರಣಗಳಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದೆ. ಆದರೆ ರೈಲ್ವೇ ಇಲಾಖೆ ಎಂದಿಗೂ ಸರ್ಕಾರಿ ಸ್ವಾಮ್ಯದಲ್ಲೇ ಇರಲಿದೆ ಎಂದು ಗೋಯೆಲ್ ಹೇಳಿದ್ದಾರೆ.

ರೈಲ್ವೇ ಇಲಾಖೆಯಲ್ಲಿ ಖಾಸಗಿಹೂಡಿಕೆ ಮಾಡಿದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಸಾಧ್ಯ ಎಂದು ಗೋಯೆಲ್ ಹೇಳಿದ್ದಾರೆ. 2021-22ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ರೈಲ್ವೇ ಇಲಾಖೆಗೆ 2.15 ಲಕ್ಷ ರೂಪಾಯಿ ಹೂಡಿಕೆ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 90 ರಷ್ಟು ಹೆಚ್ಚಿಸಿದೆ ಎಂದು ಗೋಯೆಲ್ ಹೇಳಿದ್ದಾರೆ. 

Follow Us:
Download App:
  • android
  • ios