Asianet Suvarna News Asianet Suvarna News

ಹೈಡ್ರೋಜನ್‌ ಎಂಜಿನ್‌ ಪ್ರಯೋಗಕ್ಕೆ ರೈಲ್ವೆ ನಿರ್ಧಾರ!

* ಹೈಡ್ರೋಜನ್‌ ಎಂಜಿನ್‌ ಆಗಿ ಡೀಸೆಲ್‌ ಎಂಜಿನ್‌ ಪರಿವರ್ತನೆ

* ಹೈಡ್ರೋಜನ್‌ ಎಂಜಿನ್‌ ಪ್ರಯೋಗಕ್ಕೆ ರೈಲ್ವೆ ನಿರ್ಧಾರ

* ಇದರಿಂದ ಸಾಕಷ್ಟುಇಂಧನ ಉಳಿತಾಯ, ಮಾಲಿನ್ಯ ಕೂಡ ಕಡಿಮೆ

* ಪ್ರಸ್ತುತ ಪೋಲಂಡ್‌, ಜರ್ಮನಿಯಲ್ಲಿ ಮಾತ್ರ ಈ ತಂತ್ರಜ್ಞಾನ

Railways Interested In Inviting Bids Explores Possibility Of Hydrogen On DEMU Locomotives pod
Author
Bangalore, First Published Aug 8, 2021, 12:17 PM IST

ನವದೆಹಲಿ(ಆ.08): ಭಾರತೀಯ ರೈಲ್ವೆ ಇದೇ ಮೊದಲ ಬಾರಿ ಹೈಡ್ರೋಜನ್‌ ಚಾಲಿತ ಎಂಜಿನ್‌ ಪ್ರಯೋಗಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅದು ಹಾಲಿ ಇರುವ ಡೀಸೆಲ್‌ ಎಂಜಿನ್‌ ಅನ್ನು ಹೈಡ್ರೋಜನ್‌ ಚಾಲಿತ ಎಂಜಿನ್‌ ಆಗಿ ಬದಲಿಸಲು ಬಿಡ್ಡಿಂಗ್‌ ಆಹ್ವಾನಿಸಿದೆ.

ಹರಾರ‍ಯಣದ ಸೋನಿಪತ್‌-ಜಿಂದ್‌ ಸೆಕ್ಷನ್‌ನ 89 ಕಿ.ಮೀ. ಉದ್ದದ ಮಾರ್ಗದ ಡೀಸೆಲ್‌ ಚಾಲಿತ ಡೆಮು ರೈಲನ್ನು ಅದು ಹೈಡ್ರೋಜನ್‌ ಎಂಜಿನ್‌ ಆಗಿ ಬದಲಿಸಲು ನಿರ್ಧರಿಸಿದೆ. ಹೀಗೆ ಪರಿವರ್ತಿಸುವುದರಿಂದ ವಾರ್ಷಿಕ 2.3 ಕೋಟಿ ರು.ನಷ್ಟುಇಂಧನ ಉಳಿತಾಯ ಆಗಲಿದೆ. ಅಷ್ಟೇ ಅಲ್ಲ, ವಾರ್ಷಿಕ 11.12 ಕಿಲೋ ಟನ್‌ ಇಂಗಾಲ ಹೊರಸೂಸುವಿಕೆ ನಿಲ್ಲಲಿದೆ. ಈ ರೀತಿ ಹೈಡ್ರೋಜನ್‌ ತಂತ್ರಜ್ಞಾನ ಪರಿಸರ ಸ್ನೇಹಿ ಹಾಗೂ ಮಿತವ್ಯಯಿ ಆಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಬಿಡ್ಡಿಂಗ್‌ ಸೆ.21ರಂದು ಆರಂಭವಾಗಲಿದೆ ಹಾಗೂ ಅ.5ಕ್ಕೆ ಅಂತ್ಯಗೊಳ್ಳಲಿದೆ. ಮೊದಲು ಪ್ರಾಯೋಗಿಕವಾಗಿ 2 ಡೆಮು ರೈಲುಗಳಿಗೆ ಹೈಡ್ರೋಜನ್‌ ತಂತ್ರಜ್ಞಾನ ಅಳವಡಿಸಲಾಗುತ್ತದೆ. ನಂತರ ಉಳಿದ ರೈಲುಗಳಿಗೆ ವಿಸ್ತರಿಸಲಾಗುತ್ತದೆ ಎಂದಿದೆ.

ಈಗಿನ ಮಟ್ಟಿಗೆ ಪೋಲೆಂಡ್‌ ಹಾಗೂ ಜರ್ಮನಿ ಮಾತ್ರ ಈ ತಂತ್ರಜ್ಞಾನದ ಪ್ರಯೋಗ ನಡೆಸಿವೆ.

Follow Us:
Download App:
  • android
  • ios