ಎರಡು ಮಸೀದಿಗಳು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ. ರೈಲ್ವೇ ಇಲಾಖೆ ಸ್ಥಳದಲ್ಲಿ ಈ ಮಸೀದಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ತಕ್ಷಣವೇ ತೆರವುಗೊಳಿಸಬೇಕು. ಇಲ್ಲದಿದ್ದರೆ ದಂಡದ ಜೊತೆಗೆ ಪರಿಣಾವನ್ನು ಎದುರಿಸಬೇಕು ಎಂದು ಎಚ್ಚರಿಸಿದೆ.

ದೆಹಲಿ(ಜು.22) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗ ದರ್ಮದಂಗಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ರೈಲ್ವೇ ಇಲಾಖೆ ಸ್ಥಳವನ್ನು ಅತಿಕ್ರಮಣ ಮಾಡಿ ಎರಡು ಮಸೀದಿ ಕಟ್ಟಲಾಗಿದೆ ಎಂದು ಇಲಾಖೆ ನೋಟಿಸ್ ನೀಡಿದೆ. 15 ದಿನದೊಳಗೆ ಎರಡೂ ಮಸೀದಿಯನ್ನು ತೆರವುಗೊಳಿಸಬೇಕು ಎಂದು ನೋಟಿಸ್ ನೀಡಿದಿದೆ. ಉತ್ತರ ದೆಹಲಿಯ ಬೆಂಗಾಲಿ ಮಾರ್ಕೆಟ್ ಬಳಿ ಇರುವ ಮಸೀದಿ ಹಾಗೂ ಬಾಬರ್ ಶಹಾ ತಾಕಿಯಾ ಮಸೀದಿಯನ್ನು ಅಕ್ರಮವಾಗಿ ಕಟ್ಟಲಾಗಿದೆ. ಈ ಸ್ಥಳ ರೈಲ್ವೇ ಇಲಾಖೆಗೆ ಸೇರಿದ್ದು. ಮುಂದಿನ 15 ದಿನದೊಳಗೆ ಮಸೀದಿಯನ್ನು ತೆರವುಗೊಳಿಸಬೇಕು ಎಂದು ರೈಲ್ವೇ ಇಲಾಖೆ ಎಚ್ಚರಿಕೆ ನೀಡಿದೆ.

ಈ ಕುರಿತು ಮಸೀದಿ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ. ರೈಲ್ವೇ ಇಲಾಖೆಯ ಅಡಿಯಲ್ಲಿರುವ ಸ್ಥಳವನ್ನು ಅತಿಕ್ರಮಣ ಮಾಡಲಾಗಿದೆ. ಈ ಜಾಗದಲ್ಲಿ ಮಸೀದಿ ಕಟ್ಟಲಾಗಿದೆ. ಎರಡೂ ಕಟ್ಟಡಗಳು ಅನಧಿಕೃತವಾಗಿದೆ. ಹೀಗಾಗಿ 15 ದಿನದೊಳಗೆ ಸಂಬಂಧ ಪಟ್ಟವನ್ನು ಈ ಮಸೀದಿಯನ್ನು ತೆರವುಗೊಳಿಸಬೇಕು. ಇನ್ನು 15 ದಿನದೊಳಗೆ ಮಸೀದಿ ತೆರವು ಮಾಡದಿದ್ದರೆ, ಮುಂದಿನ ಪಣಾಮ ಎದುರಿಸಬೇಕಾಗುತ್ತದೆ ಎಂದು ರೈಲ್ವೇ ಇಲಾಖೆ ನೋಟಿಸ್ ನೀಡಿದೆ.

ಜ್ಞಾನವಾಪಿ ಸಂಕೀರ್ಣದಲ್ಲಿ ಸರ್ವೆಗೆ ಅವಕಾಶ ನೀಡಿದ ವಾರಣಾಸಿ ಕೋರ್ಟ್‌

ಅತಿಕ್ರಮವಣ ಮಾಡಿ ಮಸೀದಿ ಕಟ್ಟವಾಗಿದೆ. ಇದನ್ನು ತೆರವುಗೊಳಿಸವು ಸಂದರ್ಭ ಇತರ ಕಟ್ಟಡ, ಸ್ಥಳಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ರೈಲ್ವೇ ಇಲಾಖೆ ಸೂಚಿಸಿದೆ. ಇದೀಗ ಮಸೀದಿ ಆಡಳಿತ ಮಂಡಳಿ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಬಾಬರ್ ಶಾಹಾ ತಾಕಿಯಾ ಮಸೀದಿ 400 ವರ್ಷ ಹಳೆಯ ಮಸೀದಿಯಾಗಿದೆ. ಹೀಗಾಗಿ ರೈಲ್ವೇ ಇಲಾಖೆ ಸೂಚನೆ ತಪ್ಪು. ಈ ಮಸೀದಿ ರೈಲ್ವೇ ಇಲಾಖೆ ಸ್ಥಳದಲ್ಲಿ ಇಲ್ಲ ಎಂದು ಕಾರ್ಯದರ್ಶಿ ಅಬ್ಬುಲ್ ಗಫರ್ ಹೇಳಿದ್ದಾರೆ.

ಹೈಕೋರ್ಟ್ ಆವರಣದಲ್ಲಿನ ಮಸೀದಿ ತೆರವಿಗೆ ಸುಪ್ರೀಂ ಸೂಚನೆ
ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಚ್‌ನ ಆವರಣದಲ್ಲಿರುವ ಮಸೀದಿಯನ್ನು 3 ತಿಂಗಳೊಳಗೆ ತೆರವುಗೊಳಿಸುವಂತೆ ಸುಪ್ರೀಂ ಕೋರ್ಚ್‌ ಇತ್ತೀಚೆಗೆ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತಾಗಿ ಅಹಲಾಬಾದ್‌ ಹೈಕೋರ್ಚ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಚ್‌ ತಿರಸ್ಕರಸಿ ಮಹತ್ವದ ಸೂಚನೆ ನೀಡಿತ್ತು. ಮಸೀದಿ ತೆರವುಗೊಳಿಸುವಂತೆ ಅಲಹಾಬಾದ್‌ ಹೈಕೋರ್ಚ್‌ 2017ರಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಕ್ಫ್ ಮಸೀದಿ ಹೈಕೋರ್ಚ್‌ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್‌ ವಕ್ಫ್ ಬೋರ್ಡ್‌ಗಳು ಸುಪ್ರೀಂಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದವು.

Tumakuru: ಮಸೀದಿ ಪಕ್ಕದ ದೇವಿಯ ಆರಾಧನೆಗೆ ಮುಸ್ಲಿಂಮರ ವಿರೋಧ, ಗ್ರಾಮದಲ್ಲೀಗ ಬೂದಿ ಮುಚ್ಚಿದ ಕೆಂಡ!

ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಎಂ.ಆರ್‌. ಶಾ ಹಾಗೂ ನ್ಯಾ ಸಿ.ಟಿ ರವಿಕುಮಾರ್‌ ಅವರ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ‘ಮಸೀದಿ ಜಾಗದ ಗುತ್ತಿಗೆ ಅವಧಿಯು ಮುಕ್ತಾಯಗೊಂಡಿದ್ದು ಅವಧಿ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸುವಂತಿಲ್ಲ. ಮಸೀದಿ ನಿರ್ಮಾಣಕ್ಕೆ ಬೇರೆಡೆ ಜಾಗ ಮಂಜೂರು ಮಾಡಬಹುದು’ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಹಾಗೆಯೇ 3 ತಿಂಗಳೊಳಗಾಗಿ ಮಸೀದಿ ತೆರವು ಮಾಡದೆ ಹೋದಲ್ಲಿ ಅಧಿಕಾರಿಗಳು ಹಾಗೂ ಅಲಹಾಬಾದ್‌ ಹೈಕೋರ್ಚ್‌ಗೆ ಮಸೀದಿ ತೆರವು ಮಾಡುವ ಮುಕ್ತ ಅಧಿಕಾರವಿರುತ್ತದೆ’ ಎಂದು ಪೀಠ ತಿಳಿಸಿದೆ.