Asianet Suvarna News Asianet Suvarna News

ಡಿಕೆಶಿ ಪುತ್ರಿ ಆರತಕ್ಷತೆಗೆ ರಾಹುಲ್, ಪ್ರಿಯಾಂಕಾ ಗಾಂಧಿ!

ರಾಹುಲ್‌, ಪ್ರಿಯಾಂಕಾ ಹಾಜರಿಯಲ್ಲಿ ಡಿಕೆಶಿ ಪುತ್ರಿ ಆರತಕ್ಷತೆ| ಬೆಂಗಳೂರು ಹೊರವಲಯದ ರೆಸಾರ್ಟ್‌ನಲ್ಲಿ ಅದ್ಧೂರಿ ಕಾರ್ಯಕ್ರಮ| ದೇವೇಗೌಡ, ಗುಲಾಂ ನಬಿ, ವಜುಭಾಯಿ ವಾಲಾ ಸೇರಿ ಗಣ್ಯರು ಭಾಗಿ

Rahul Priyanka attends reception of DK Shivakumar daughter in Bengaluru pod
Author
Bangalore, First Published Feb 18, 2021, 8:38 AM IST

ಬೆಂಗಳೂರು(ಫೆ.18): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿ.ವಿ.ಜಿ.ಸಿದ್ಧಾರ್ಥ ಅವರ ಪುತ್ರ ಅಮತ್ರ್ಯ ಹೆಗ್ಡೆ ಮದುವೆಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಬುಧವಾರ ಅದ್ಧೂರಿಯಾಗಿ ನೆರವೇರಿತು.

ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸೇರಿದಂತೆ ನೂರಾರು ಗಣ್ಯ ಹಾಗೂ ಅತಿ ಗಣ್ಯ ವ್ಯಕ್ತಿಗಳು ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಿದರು.

KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಮದುವೆ : ಕನಕಪುರ ಜನರಿಗೆ ಡಿ.ಕೆ.ಬ್ರದರ್ಸ್ ಭರ್ಜರಿ ಗಿಫ್ಟ್

ದೇವನಹಳ್ಳಿ ತಾಲೂಕು ನಂದಿಬೆಟ್ಟರಸ್ತೆಯಲ್ಲಿರುವ ಪ್ರೆಸ್ಟೀಜ್‌ ಗಾಲ್‌್ಫಶೈರ್‌ ಐಷಾರಾಮಿ ರೆಸಾರ್ಟ್‌ನ ಉದ್ಯಾನ ಪ್ರದೇಶದಲ್ಲಿ ಬಣ್ಣ ಬಣ್ಣದ ಹೂವು ಹಾಗೂ ದೀಪಗಳಿಂದ ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಆರತಕ್ಷತೆ ನೆರವೇರಿತು. ಗಣ್ಯರು, ಅತಿ ಗಣ್ಯರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದ ಕಾರ್ಯಕ್ರಮದಲ್ಲಿ 1,500 ಮಂದಿಗೂ ಹೆಚ್ಚು ಮಂದಿ ಆಗಮಿಸಿ ನವಜೋಡಿಗಳನ್ನು ಹರಸಿದರು.

ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರಿಂದ ರೆಸಾರ್ಟ್‌ ಸುತ್ತ ಸಾಕಷ್ಟುಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೆ, ಆಹ್ವಾನಿತರನ್ನು ಹೊರತುಪಡಿಸಿ ಉಳಿದವರು ಪ್ರವೇಶಿಸದಂತೆ ಎಲ್ಲರಿಗೂ ಆಹ್ವಾನ ಪತ್ರದೊಂದಿಗೆ ಬಾರ್‌ ಕೋಡ್‌ ನೀಡಲಾಗಿತ್ತು. ಸ್ಕಾ್ಯನ್‌ ಮಾಡಿದ ವೇಳೆ ಬರುವ ಒಟಿಪಿ ಆಧಾರದ ಮೇಲೆ ಮಾತ್ರ ಒಳಗೆ ಪ್ರವೇಶ ಕಲ್ಪಿಸಲಾಗಿತ್ತು. ಇನ್ನು 200 ಮಂದಿ ಸುಪ್ರಸಿದ್ಧ ಬಾಣಸಿಗರಿಂದ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಶೈಲಿಯ ವಿವಿಧ ಅಡುಗೆಗಳನ್ನು ಸಿದ್ಧಪಡಿಸಲಾಗಿತ್ತು.

ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಕೆಶಿ ಮಗಳು ಐಶ್ವರ್ಯ, ಅಮರ್ಥ್ಯ!

ಗಣ್ಯರಿಂದ ಶುಭ ಹಾರೈಕೆ:

ಈ ವೇಳೆ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ, ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್‌, ರಾಜ್ಯಪಾಲ ವಿ.ಆರ್‌. ವಾಲಾ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಮಾಜಿ ಸಚಿವ ಜನಾರ್ದನರೆಡ್ಡಿ, ಸಚಿವರಾದ ರಮೇಶ್‌ ಜಾರಕಿಹೊಳಿ, ಬಿ.ಶ್ರೀರಾಮುಲು, ಆರ್‌.ಅಶೋಕ್‌, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜು, ಸುರೇಶ್‌ಕುಮಾರ್‌, ಆರ್‌. ಶಂಕರ್‌ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅವರ ಮೊಮ್ಮಗನೂ ಆದ ಅಮತ್ರ್ಯ ಹೆಗ್ಡೆ ಹಾಗೂ ಐಶ್ವರ್ಯಾ ಫೆ.14ರ ಪ್ರೇಮಿಗಳ ದಿನದಂದು ಹಸೆಮಣೆ ಏರಿದ್ದರು.

ಬುಧವಾರ ನಡೆದ ಆರತಕ್ಷತೆಯಲ್ಲಿ ಭಾಗವಹಿಸಲು ಎಐಸಿಸಿ ಮಾಜಿ ಅಧ್ಯಕ್ಷರೂ ಆದ ರಾಹುಲ್‌ ಗಾಂಧಿ ಅವರು ಪಾಂಡಿಚೇರಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು. ಈ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಸೇರಿ ಹಲವು ನಾಯಕರು ಅವರನ್ನು ಬರ ಮಾಡಿಕೊಂಡರು.

ಬಳಿಕ ನೇರವಾಗಿ ರೆಸಾರ್ಟ್‌ಗೆ ತೆರಳಿದ ರಾಹುಲ್‌ ಗಾಂಧಿ ವಧು ವರರಿಗೆ ಶುಭ ಹಾರೈಸಿದರು. ಇದೇ ವೇಳೆ ಪ್ರಿಯಾಂಕಾ ಗಾಂಧಿ ಸಹ ಆರತಕ್ಷತೆಯಲ್ಲಿ ಭಾಗವಹಿಸಿ ನವಜೋಡಿಗೆ ಹರಸಿದರು.

Follow Us:
Download App:
  • android
  • ios