ದೇವಸ್ಥಾನದಿಂದ 'ತಿಲಕ'ವಿಟ್ಟು, ಮಸೀದಿಗೆ ತೆರಳಿದ ರಾಹುಲ್: ಫೋಟೋ ಹಂಚಿದ ಕಾಂಗ್ರೆಸ್!
* ಎರಡು ದಿನಗಳ ಜಮ್ಮು ಕಾಶ್ಮೀರ ಪ್ರವಾಸದಲ್ಲಿ ರಾಹುಲ್ ಗಾಂಧಿ
* ಚುನಾವಣೆಗೂ ಮುನ್ನ ಕಣಿವೆ ನಾಡಿನಲ್ಲಿ ರಾಜಕೀಯ ನಾಯಕರ ಭೇಟಿ
* ದೇವಸ್ಥಾನದಿಂದ 'ತಿಲಕ'ವಿಟ್ಟು, ಮಸೀದಿಗೆ ತೆರಳಿದ ರಾಹುಲ್
ಶ್ರೀನಗರ(ಆ.10): ರಾಹುಲ್ ಗಾಂಧಿ ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಹೀಗಿರುವಾಗ ಮಂಗಳವಾರ ಅವರು ಗಂದೇರ್‌ಬಾಲ್‌ನ ಖೀರ್ ಭವಾನಿ ದೇವಸ್ಥಾನಕ್ಕೆ ಭೇಟಿ ನಿಡಿದ್ದಾರೆ. ಬಳಿಕ ಅವರು ಇಲ್ಲಿನ ಪ್ರಸಿದ್ಧ ಹಜರತ್ಬಾಲ್ ಮಸೀದಿಗೆ ತೆರಳಿದ್ದಾರೆ. ಈ ನಡುವೆ ಅತ್ತ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಈ ಎರಡೂ ಕಡೆ ಭೇಟಿ ನಿಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. ಇದಾದ ಬಳಿಕ ರಾಹುಲ್ ಗಾಂಧಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಮಸೀದಿಯ ಚಿತ್ರಗಳನ್ನು ನೋಡಿದ ನಂತರ ಈ ಟ್ವಿಟರ್‌ನಲ್ಲಿ ರಾಹುಲ್ ಟ್ರೋಲ್
ರಾಹುಲ್ ಗಾಂಧಿ ಹಜರತ್ ಬಾಲ್ ಮಸೀದಿಗೆ ಭೇಟಿ ನೀಡಿದ ಹಲವು ಚಿತ್ರಗಳನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದಾಗ, ರಾಹುಲ್ ಹಜರತ್ಬಾಲ್ ಮಸೀದಿಯ ಅಂಗಳದಲ್ಲಿ ದೇಶದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ ಎಂದು ಬರೆದಿದ್ದಾರೆ. ಈ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
* ಎಲ್ಲಕ್ಕೂ ಒಂದು ಮಿತಿ ಇದೆ, ಮಸೀದಿಗೆ ತಿಲಕವಿಟ್ಟು ಹೋಗಿದ್ದಾರೆ. ಯಾರ ಬಗ್ಗೆಯೂ ಭಯವಿಲ್ಲ ಎಂದು ಒಬ್ಬಾತ ಬರೆದುಕೊಂಡಿದ್ದಾರೆ.
* ಇವರು ರಾಹುಲ್‌ರಂತೆ ಕಾಣುವ ವ್ಯಕ್ತಿ, ಬೆಳಿಗ್ಗೆ ಒಬ್ಬ ಹಿಂದೂ ಆಗುತ್ತಾನೆ, ಮಧ್ಯಾಹ್ನ ಮುಸ್ಲಿಂ ಸಂಜೆ ಕ್ರಿಶ್ಚಿಯನ್ ಆಗುತ್ತಾನೆ.
* ಇಂದು ಅಸಲಿ ವೇಷದಲ್ಲಿ ಬಂದಿದ್ದಾರೆ.
* ನಿಮ್ಮಿಂದ ಬೇರೇನೂ ನಿರೀಕ್ಷೆ ಇಲ್ಲ. ನೀವೊಬ್ಬ ಮುಸ್ಲಿಂ ದೇವಸ್ಥಾನಕ್ಕೆ ಹೋಗಿ ನಾಟಕ ಮಾಡುತ್ತೀರಿ.
* ಚುನಾವಣೆ ಹತ್ತಿರವಾಗುತ್ತಿದೆ. ಒಂದು ದಿನ ದೇವಸ್ಥಾನ, ಮತ್ತೊಂದು ದಿನ ಮಸೀದಿಗೆ ಭೇಟಿ.
* ಆದರೆ ಕಾಶ್ಮೀರದಲ್ಲಿ 6 ವರ್ಷಗಳಿಂದ ಮುಸ್ಲಿಮರನ್ನು ತುಳಿಯಲಾಗುತ್ತಿದೆ, ಆಗೆಲ್ಲಾ ಸಂಸತ್ ಭವನದಲ್ಲಿ ಧ್ವನಿ ಎತ್ತಲಿಲ್ಲ, ಸಾವಿರಾರು ಮುಸ್ಲಿಂ ಹುಡುಗರನ್ನು ಸುಳ್ಳು ಪ್ರಕರಣಗಳಿಂದ ಜೈಲಿಗೆ ಕಳುಹಿಸಲಾಯಿತು, ಕಾಂಗ್ರೆಸ್ ಪಕ್ಷ ಮತಕ್ಕಾಗಿ ನಟಿಸುವುದನ್ನು ನಿಲ್ಲಿಸಬೇಕು.
ಮೊದಲು ಹೋದದ್ದು ಖೀರ್ ಭವಾನಿ ದೇವಸ್ಥಾನಕ್ಕೆ
ಮಂಗಳವಾರ ಬೆಳಿಗ್ಗೆ, ರಾಹುಲ್ ಗಾಂಧಿ ಮೊದಲು ಖೀರ್ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಚಿತ್ರಗಳನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ - ಪವಿತ್ರವಾದ ಶ್ರಾವಣ ಮಾಸದಲ್ಲಿ, ರಾಹುಲ್ ಗಾಂಧಿ ಮಾತಾ ಖೀರ್ ಭವಾನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಮಾತಾ ಭವಾನಿಯ ಪ್ರಸಾದವನ್ನು ಸ್ವೀಕರಿಸುವ ಮೂಲಕ ದೇಶದ ಏಳಿಗೆಗಾಗಿ ಹಾರೈಸಿದರು ಎಂದಿದ್ದಾರೆ.
ರಾಜ್ಯದ ಸ್ಥಾನಮಾನ
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ - ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನ ಸಿಗಬೇಕು ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಅವರು (ಬಿಜೆಪಿ) ಸಂಸತ್ತಿನಲ್ಲಿ ಮಾತನಾಡಲು ನಮಗೆ ಅವಕಾಶ ನೀಡುವುದಿಲ್ಲ, ಅವರು ನಮ್ಮನ್ನು ತಡೆಯುತ್ತಾರೆ. ನಾನು ಸಂಸತ್ತಿನಲ್ಲಿ ಪೆಗಾಸಸ್, ರಫೇಲ್, ಜಮ್ಮು ಮತ್ತು ಕಾಶ್ಮೀರ, ಭ್ರಷ್ಟಾಚಾರ, ನಿರುದ್ಯೋಗದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಈ ಜನರು ಭಾರತದ ಎಲ್ಲಾ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಶೀಘ್ರದಲ್ಲೇ ಚುನಾವಣೆ ನಡೆಸಬೇಕು, ಅದಕ್ಕೂ ಮೊದಲು ರಾಜ್ಯ ಸ್ಥಾನಮಾನವನ್ನು ನೀಡಬೇಕು. ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತರಬೇಕು. ಹೊಸ ಕಾನೂನಿನಲ್ಲಿ, ರಾಜ್ಯದ ಸ್ಥಾನಮಾನವನ್ನು ಯಾವಾಗ ನೀಡಲಾಗುತ್ತದೆ, ಭೂಮಿ ಮತ್ತು ಉದ್ಯೋಗಗಳು ಮೊದಲಿನಂತೆಯೇ ಇರಬೇಕು ಎಂದು ಆಗ್ರಹಿಸಿದ್ದಾರೆ.