ನವ​ದೆ​ಹ​ಲಿ (ಜೂ.04): ಟ್ವೀಟ​ರ್‌​ನಲ್ಲಿ 1.8 ಕೋಟಿ ಜನರ ಫಾಲೋ​ವ​ರ್‌​ಗ​ಳನ್ನು ಹೊಂದಿ​ರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗುರು​ವಾರ ಬಾಲಿ​ವುಡ್‌ ಸೂಪರ್‌ ಸ್ಟಾರ್‌ ಅಮಿ​ತಾಬ್‌ ಬಚ್ಚನ್‌, ಪತ್ರ​ಕ​ರ್ತ​ರು ಹಾಗೂ ತಮ್ಮ ಆಪ್ತ​ರಾದ ಕೆ.ಬಿ ಬೈಜು, ಕನ್ನ​ಡಿ​ಗ​ರಾದ ನಿಖಿಲ್‌ ಮತ್ತು ನಿವೇ​ದಿತ್‌ ಆಳ್ವಾ ಸೇರಿ​ದಂತೆ ಒಟ್ಟಾರೆ 50 ಖ್ಯಾತ​ನಾ​ಮ​ರನ್ನು ಅನ್‌​ಫಾಲೋ ಮಾಡಿ​ದ್ದಾರೆ.

 ಇದು ರಾಜ​ಕೀಯ ಮತ್ತು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಬಿಸಿ​ಬಿಸಿ ಚರ್ಚೆ ಮತ್ತು ಹಲವು ಕುತೂ​ಹ​ಲ​ಗ​ಳಿಗೆ ಕಾರ​ಣ​ವಾ​ಗಿದೆ.

ಕೊರೋನಾ ಎರಡನೇ ಅಲೆಗೆ ಮೋದಿಯ ಡ್ರಾಮಾಗಳೇ ಕಾರಣ ಎಂದ ರಾಹುಲ್‌ ಗಾಂಧಿ ...

ಸದಾ ಕಾಲ ಜೊತೆ​ಯಾ​ಗಿಯೇ ಕೆಲಸ ಮಾಡು​ವ​ವ​ರನ್ನು ಟ್ವೀಟ​ರ್‌ ವೇದಿ​ಕೆ​ಯಲ್ಲಿ ಯಾಕೆ ಫಾಲೋ ಮಾಡ​ಬೇಕು ಎಂಬ ಕಾರ​ಣಕ್ಕೆ ರಾಹುಲ್‌ ಗಾಂಧಿ ತಮ್ಮ ಆಪ್ತ​ವ​ಲ​ಯ​ದ​ಲ್ಲಿ​ದ್ದ​ವ​ರನ್ನು ಅನ್‌​ಫಾಲೋ ಮಾಡಿ​ದ್ದಾ​ರಷ್ಟೇ. 

ಇದಕ್ಕೆ ವಿಶೇಷ ಅರ್ಥ ಕಲ್ಪಿ​ಸುವುದು ಸರಿ​ಯಲ್ಲ ಎಂದು ಪಕ್ಷದ ಮೂಲ​ಗಳು ತಿಳಿ​ಸಿವೆ. ಆದರೆ ಕನ್ನ​ಡಿಗ ಸೋದ​ರ​ರಾದ ನಿಖಿಲ್‌ ಮತ್ತು ನಿವೇ​ದಿತ್‌ ಆಳ್ವಾ ಸೇರಿ 50 ಮಂದಿ​ಯನ್ನು ರಾಹುಲ್‌ ಗಾಂಧಿ ಅನ್‌​ಫಾಲೋ ಮಾಡುವ ವಿಚಾರ ಕಾಂಗ್ರೆಸ್‌ ಪ್ರಧಾನ ಕಾರ್ಯ​ದರ್ಶಿ ಪ್ರಿಯಾಂಕಾ ಗಾಂಧಿ ಅವ​ರಿಗೆ ಮೊದಲೇ ಗೊತ್ತಿತ್ತು ಎಂದು ಪಕ್ಷ​ದೊ​ಳ​ಗಿ​ನ ಕೆಲ​ವೊಂದು ಗುಂಪು ಮಾತ​ನಾ​ಡಿ​ಕೊ​ಳ್ಳು​ತ್ತಿದೆ.