Hindutva: ಹಿಂದೂ, ಹಿಂದುತ್ವವಾದಿ ವಿಚಾರದ ಬಗ್ಗೆ ಮತ್ತೆ ತುಟಿ ಬಿಚ್ಚಿದ ರಾಹುಲ್:

* ರಾಮಮಂದಿರ ವಿಚಾರದಲ್ಲಿ 2019 ರ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಭೂಮಿ 

* ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

* ಮತ್ತೆ ಹಿಂದುತ್ವದ ಬಗ್ಗೆ ಕಾಂಗ್ರೆಸ್ ನಾಯಕನ ಮಾತು

Rahul Gandhi targets BJP with Hindu Hindutva jibe over Ayodhya land deal reports pod

ನವದೆಹಲಿ(ಡಿ.23): ರಾಮಮಂದಿರ ವಿಚಾರದಲ್ಲಿ 2019 ರ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಅಯೋಧ್ಯೆಯಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಭೂಮಿ ಖರೀದಿಸುತ್ತಿದ್ದಾರೆ ಎಂಬ ಸುದ್ದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಸತ್ಯದ ಹಾದಿಯಲ್ಲಿ ನಡೆಯುತ್ತಾನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಒಂದಾದ ಬಳಿಕ ಮತ್ತೊಂದರಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಕ್ ಗಾಂಧಿ, ವಾಸ್ತವವಾಗಿ ಅವರು ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿದ್ದರು. ಇದು ತಮ್ಮ ವಿರೋಧ ಪಕ್ಷದ ರಾಜಕೀಯ ತಂತ್ರ ಎಂದು ಬಣ್ಣಿಸಿದ್ದಾರೆ. ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಪೋಸ್ಟ್‌ಗೆ ಮೊದಲು, ಅವರ ಸಹೋದ್ಯೋಗಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಅವರು, ಅಯೋಧ್ಯೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೇಳಿದ್ದರು. ರಾಮಜನ್ಮಭೂಮಿ-ಬಾಬರಿ ಮಸೀದಿಯ ಮಾಲೀಕತ್ವದ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಈ ಖರೀದಿಯನ್ನು ಮಾಡಲಾಗಿದೆ. ಚಳಿಗಾಲದ ಅಧಿವೇಶನದ ಕೊನೆಯ ದಿನದಂದು ಸಂಸತ್ತಿನ ಒಳಗೆ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ, ರಾಹುಲ್ ಗಾಂಧಿ ಸಂಸತ್ತಿನ ಹೊರಗೆ ವಿಷಯ ಪ್ರಸ್ತಾಪಿಸಿದರು.

ಈ ಹಿಂದೆ ಜೈಪುರದಲ್ಲಿ ಹಣದುಬ್ಬರ ತೆಗೆದುಹಾಕಿ ಎಂಬ ಸಮಾೇಶ ಆಯೋಜಿಸಿದ್ದೆಉ. ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್. ಪಕ್ಷವು ರಾಜಕೀಯ ಉದ್ದೇಶಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದರು. ಇದು ಹಿಂದೂಗಳ ದೇಶ, ಹಿಂದುತ್ವವಾದಿಗಳಲ್ಲ, ಆದರೆ ಹಿಂದುತ್ವವಾದಿಗಳು ಯಾವುದೇ ಬೆಲೆ ತೆತ್ತಾದರೂ ಅಧಿಕಾರವನ್ನು ಬಯಸುತ್ತಾರೆ. ಅಧಿಕಾರ ಬೇಕು, ಸತ್ಯಕ್ಕೂ ತನಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೆಸರು ಹೇಳದೆ ಹೇಳಿದರು. 2014ರಿಂದ ದೇಶವನ್ನು ಹಿಂದುತ್ವವಾದಿಗಳು ಆಳುತ್ತಿದ್ದಾರೆ ಎಂದು ದೂಷಿಸಿದ್ದರು.

ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟನೆಗಾಗಿ ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಗಂಗಾನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಹಿಂದುತ್ವವಾದಿಗಳು ಗಂಗಾನದಿಯಲ್ಲಿ ಏಕಾಂಗಿಯಾಗಿ ಸ್ನಾನ ಮಾಡುತ್ತಾರೆ, ಆದರೆ ಹಿಂದೂ ಕೋಟ್ಯಂತರ ಜನರೊಂದಿಗೆ ಸ್ನಾನ ಮಾಡುತ್ತಾನೆ ಎಂದು ಅಮೇಠಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.

Latest Videos
Follow Us:
Download App:
  • android
  • ios