ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ನಡುವಿನ ಜಟಾಪಟಿ ಮುಂದುವರಿದಿದೆ. ಇದೀಗ ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ಶರ್ಮಾ ಲೇವಡಿ ಮಾಡಿದ್ದಾರೆ.
ಗುವ್ಹಾಟಿ(ಜ.28) ರಾಹುಲ್ ಘಾಂದಿ ಭಾರತ್ ಜೋಡೋ ನ್ಯಾಯ ಯಾತ್ರೆ ಹೆಚ್ಚು ಸದ್ದು ಮಾಡಿದ್ದು ಅಸ್ಸಾಂನಲ್ಲಿ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ರಾಹುಲ್ ಗಾಂಧಿ ನಡುವಿನ ಜಟಾಪಟಿ, ಸಂಘರ್ಷದಿಂದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ದೇಶಾದ್ಯಂತ ಪ್ರಚಾರ ಸಿಕ್ಕಿತ್ತು. ರಾಹುಲ್ ಗಾಂಧಿ ವಿರುದ್ಧ ಕೇಸು ದಾಖಲಿಸಲು ಅಸ್ಸಾಂ ಸಿಎಂ ಸೂಚನೆ ಕೂಡ ನೀಡಿ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ತುತ್ತಾಗಿದ್ದರು. ಈ ಜಟಾಪಟಿ ಬಳಿಕ ಇದೀಗ ಹಿಮಂದ ಬಿಸ್ವ ಶರ್ಮಾ ನೀಡಿದ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ. ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಶರ್ಮಾ, ರಾಹುಲ್ ಗಾಂಧಿ ಹೋದ ಕಡೆಯೆಲ್ಲಾ ಪಕ್ಷ ಸೋತಿದೆ. ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ರಾಹುಲ್ ಗಾಂಧಿಯಲ್ಲಿ ನಾಯಕತ್ವದ ಗುಣಗಳಿಲ್ಲ. ಎಲ್ಲೆಲ್ಲಿ ರಾಹುಲ್ ಗಾಂದಿ ಹೋಗಿದ್ದಾರೋ, ಅಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸೋಲಿನ ಕಹಿ ಅನುಭವಿಸಿದೆ. ರಾಹುಲ್ ಗಾಂಧಿಯಿಂದ ಯಾರೂ ಸ್ಪೂರ್ತಿ ಪಡೆಯುತ್ತಿಲ್ಲ. ರಾಹುಲ್ ಗಾಂಧಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಬಿಜೆಪಿ ಸ್ಟಾರ್ ಪ್ರಚಾರಕ ಎಂದು ಶರ್ಮಾ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ರಾಹುಲ್ ಬಂಧನ: ಅಸ್ಸಾಂ ಸಿಎಂ
ಇಂಡಿಯಾ ಮೈತ್ರಿ ಒಕ್ಕೂಟ ರಚನೆಯಾದಾಗಲೇ ನಾವು ಹೇಳಿದ್ದೇವು, ಇದು ಹೆಚ್ಚಿನ ದಿನ ಇರುವುದಿಲ್ಲ.ಕಾರಣ ಸೈದ್ಧಾಂತಿಕ ಭಿನ್ನಭಿಪ್ರಾಯ ಇದ್ದರೂ ಸರಿಹೋಗಬಹುದು. ಆದರೆ ಬಹುತೇಕ ಪಾರ್ಟಿಗಳಲ್ಲಿ ಅಜೆಂಡಾ, ಸೈದ್ಧಾಂತಿಕ ವಿಚಾರಧಾರೆಯೇ ಇಲ್ಲ. ಅಧಿಕಾರ ಸಿಗಬೇಕು ಅಷ್ಟೆ. ಎಲ್ಲರಿಗೂ ಪ್ರಧಾನಿ ಮೋದಿಯನ್ನು ಸೋಲಿಸಬೇಕು ಅನ್ನೋದು ಗುರಿಯಾಗಿತ್ತು. ಬಿಜೆಪಿ ಆಡಳಿತದಲ್ಲಿ ಎನಾದರೂ ಸಮಸ್ಯೆ ಇದೆಯಾ ಎಂದರೆ ಎತ್ತಿ ತೋರಿಸಲು ಒಂದು ಹುಳುಕು ಸಿಕ್ಕಿಲ್ಲ. ಇಂತಹ ಮೈತ್ರಿಯ ಆಯಸ್ಸು ಇಷ್ಟೇ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ತಲುಪುತ್ತಿದ್ದಂತೆ ಸಂಘರ್ಷಗಳು ಆರಂಭಗೊಂಡಿದೆ. ಮೇಘಾಲಯ ಖಾಸಗಿ ವಿವಿಯೊಂದರ ವಿದ್ಯಾರ್ಥಿಗಳ ಸಂವಾದಕ್ಕೆ ತಡೆ ಒಡ್ಡಲಾಗಿದೆ ಹಾಗೂ ಅವರ ಗುವಾಹಟಿ ಪ್ರವೇಶಕ್ಕೂ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿ ಪ್ರತಿಭಟನ ನಡೆಸಿತ್ತು. ಇದೇ ವೇಳೆ, ಕಾರ್ಯಕರ್ತರನ್ನು ಹಿಂಸೆಗೆ ಪ್ರಚೋದಿಸಿದ ಆರೋಪ ಹೊರಿಸಿ ರಾಹುಲ್ ವಿರುದ್ಧ ಕೇಸು ದಾಖಲಿಸಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಪೊಲೀಸರಿಗೆ ಸೂಚಿಸಿದ್ದರು.
ಅಸ್ಸಾಂನಲ್ಲಿ ರಾಹುಲ್ ಯಾತ್ರೆ ಮೇಲೆ ಉದ್ದೇಶಪೂರ್ವಕ ದಾಳಿ: ಕಾಂಗ್ರೆಸ್ ಆರೋಪ ಪ್ರತಿಭಟನೆಗೆ ಕರೆ
