Asianet Suvarna News Asianet Suvarna News

ಅಸ್ಸಾಂನಲ್ಲಿ ರಾಹುಲ್ ಯಾತ್ರೆ ಮೇಲೆ ಉದ್ದೇಶಪೂರ್ವಕ ದಾಳಿ: ಕಾಂಗ್ರೆಸ್ ಆರೋಪ ಪ್ರತಿಭಟನೆಗೆ ಕರೆ

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೇಲೆ ಸರ್ಕಾರದ ಯೋಜಿತ ದಾಳಿ ನಡೆಯುತ್ತಿದ್ದು, ಈ ಬಗ್ಗೆ ಸಂಜೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.  ಈ ಬಗ್ಗೆ ನಿನ್ನೆ ತಡರಾತ್ರಿ ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆ.ಸಿ ವೇಣುಗೋಪಾಲ್ ಪೋಸ್ಟ್ ಮಾಡಿದ್ದಾರೆ.

Deliberate attack on Rahul Yatra in Assam Congress accuses aganist Assam cm and BJP and instructed to Nation wide protest Today akb
Author
First Published Jan 22, 2024, 11:58 AM IST

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೇಲೆ ಸರ್ಕಾರದ ಯೋಜಿತ ದಾಳಿ ನಡೆಯುತ್ತಿದ್ದು, ಈ ಬಗ್ಗೆ ಸಂಜೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.  ಈ ಬಗ್ಗೆ ನಿನ್ನೆ ತಡರಾತ್ರಿ ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆ.ಸಿ ವೇಣುಗೋಪಾಲ್ ಪೋಸ್ಟ್ ಮಾಡಿದ್ದಾರೆ. ಯಾತ್ರೆಯೂ ಅಸ್ಸಾಂಗೆ ಪ್ರವೇಶಿಸಿದಾಗಿನಿಂದಲೂ ದೇಶದ ಅತ್ಯಂತ ಭ್ರಷ್ಟ ಸಿಎಂ, ನಮ್ಮ ನ್ಯಾಯ ಯಾತ್ರೆಯ ತಂಡದ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾರೆ. ತಮ್ಮ ಗೂಂಡಾಗಳನ್ನು ಬಳಸಿ ಅಸ್ಸಾಂ ಸಿಎಂ ಹಾಗೂ ಬಿಜೆಪಿ, ಯಾತ್ರೆಯಲ್ಲಿ ನಾವು ಹೊಂದಿರುವ ವಸ್ತುಗಳು, ಯಾತ್ರೆಯಲ್ಲಿ ಭಾಗವಹಿಸಿರುವ ತಂಡ ಹಾಗೂ ಆಸ್ತಿಯ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ವಿಚಾರವನ್ನು ಪ್ರತಿಯೊಬ್ಬ ಭಾರತೀಯ ನಾಗರಿಕರು ಗಂಭೀರವಾಗಿ ಪರಿಗಣಿಸಬೇಕಿದೆ.  ಏಕೆಂದರೆ ಇದು ಬಿಜೆಪಿಯ ಇದು ಬಿಜೆಪಿಯ ಫ್ಯಾಸಿಸಂ ಹಾಗೂ ಗೂಂಡಾ ರಾಜಕಾರಣವನ್ನು ಎತ್ತಿ ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಪ್ರದೇಶ ಕಾಂಗ್ರೆಸ್ ಕಮಿಟಿ, ಜಿಲ್ಲಾ ಕಾಂಗ್ರೆಸ್ ಕಮಿಟಿಗಳಿಗೆ ನಾಳೆ(ಇಂದು ಸಂಜೆ) ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಸೂಚಿಸಲಾಗಿದೆ. ಈ ಮೂಲಕ ಮೋದಿ ನೇತೃತ್ವದ ಬಿಜೆಪಿ ಅಸ್ಸಾಂನಲ್ಲಿ ಭ್ರಷ್ಟ ಸಿಎಂನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಹೇಗೆ ಹತ್ಯೆ ಮಾಡುತ್ತಿದೆ ಎಂಬುದನ್ನು ಜಗತ್ತಿಗೆ ತೋರಿಸಬೇಕಿದೆ ಎಂದು ವೇಣುಗೋಪಾಲ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು, ಅಸ್ಸಾಂ ಸಿಎಂ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. 

ರಾಹುಲ್‌ ಗಾಂಧಿಗೆ ಅಸ್ಸಾಂನಲ್ಲಿ ದೇಗುಲ ಪ್ರವೇಶಕ್ಕೆ ನಿರಾಕರಣೆ: ನಾನು ಯಾವ ಅಪರಾಧ ಮಾಡಿದ್ದೇನೆ ಎಂದ ‘ಕೈ’ ನಾಯಕ!

ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯಕ್ಕಾಗಿ ನಾವು ಹೋರಾಡುತ್ತಿದ್ದೇವೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ಈ ಸಂಬಂಧ ಎಲ್ಲಾ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಿಗೆ, ರಾಜ್ಯ ಮುಖ್ಯಸ್ಥರಿಗೆ, ಪಕ್ಷದ ಕಾರ್ಯದರ್ಶಿಗಳಿಗೆ ಹಾಗೂ ತಾಲೂಕು ಮಟ್ಟದ ಸಣ್ಣ ಸಣ್ಣ ಘಟಕಗಳಿಗೂ ಪತ್ರ ಬರೆಯಲಾಗಿದೆ.  ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯೂ ಜನವರಿ 14 ರಂದು ಮಣಿಪುರದ ಇಂಫಾಲ್‌ನಿಂದ ಆರಂಭವಾಗಿತ್ತು. ಮಣಿಪುರದಿಂದ ನಾಗಲ್ಯಾಂಡ್‌ಗೆ ಸಾಗಿ ನಂತರ ಅರುಣಾಚಲಕ್ಕೆ ಬಂದು ಈಗ ಅಸ್ಸಾಂಗೆ ಎಂಟ್ರಿಯಾಗಿರುವ  ರಾಹುಲ್ ಭಾರತ್ ಜೋಡೋ ಯಾತ್ರೆ ಮೇಲೆ ಅಸ್ಸಾಂನಲ್ಲಿ ಉದ್ದೇಶ ಪೂರ್ವಕವಾಗಿ ದಾಳಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಹುಲ್ ಪಾದಯಾತ್ರೆ ವೇಳೆ ಮೋದಿ, ಜೈ ಶ್ರೀರಾಮ್ ಘೋಷಣೆ

ನಿನ್ನೆ ಅಸ್ಸಾಂನಲ್ಲಿ ಭಾರತ್ ಜೊಡೋ ನ್ಯಾಯ ಯಾತ್ರೆಯ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್ ಮತ್ತು ನರೇಂದ್ರ ಮೋದಿಗೆ ಜೈಕಾರ ಕೂಗಿದ ಘಟನೆ ಭಾನುವಾರ ನಡೆದಿದೆ. ಇದರಿಂದ ಸಿಟ್ಟಿಗೆದ್ದ ರಾಹುಲ್ ಬಸ್ ನಿಲ್ಲಿಸಲು ಹೇಳಿ ತಾವೇ ಆವೇಶದಿಂದ ಕೆಳಗಿಳಿದು ಘೋಷಣೆ ಕೂಗಿದವರತ್ತ ನುಗ್ಗಿ ಹೋಗಿದ್ದಾರೆ. ಈ ವೇಳೆ ಪೊಲೀಸರು ಘೋಷಣೆ ಕೂಗಿದವರು ಮತ್ತು ರಾಹುಲ್ ನಡುವೆ ತಡೆಗೋಡೆಯಂತೆ ನಿಂತು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡಿದ್ದಾರೆ. ಬಳಿಕ ಸ್ವಲ್ಪ ಶಾಂತರಾದ  ರಾಹುಲ್‌ ಬಿಜೆಪಿ ಕಾರ್ಯಕರ್ತರತ್ತ ಫ್ಲಯಿಂಗ್ ಕಿಸ್ ಕೊಟ್ಟು ಮುಂದೆ ಸಾಗಿದ್ದಾರೆ.

ರಾಹುಲ್ ಪಾದಯಾತ್ರೆ ವೇಳೆ ಮೋದಿ, ಜೈ ಶ್ರೀರಾಮ್ ಘೋಷಣೆ: ಸಿಟ್ಟಿಗೆದ್ದು ಬಸ್‌ನಿಂದ ಇಳಿದು ಆಕ್ರೋಶ

ನಂತರ ಸಾರ್ವಜನಿಕ ಭಾಷಣದಲ್ಲಿ ಮಾತನಾಡುತ್ತಾ, 'ನಾನು ಬಸ್‌ನಿಂದ ಕೆಳಗಿಳಿದುದನ್ನು ನೋಡಿ ದೊಣ್ಣೆ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಹೆದರಿ ಪರಾರಿಯಾದರು. ಈ ಘಟನೆಯಿಂದ ನಾವು ಯಾರಿಗೂ ಹೆದರುವುದಿಲ್ಲ' ಎಂದು ಅಬ್ಬರಿಸಿದರು. ಬಳಿಕ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ ರಾಹುಲ್, 'ನಾವು ಎಲ್ಲೆಡೆಯೂ ಪ್ರೀತಿ, ಸಹನೆಯ ಅಂಗಡಿ(ಪ್ರೇಮ್ ಕಿ ದುಕಾನ್) ತೆರೆದು ಶಾಂತಿ ಸೌಹಾರ್ದತೆಯನ್ನು ಪಸರಿಸುತ್ತೇವೆ' ಎಂದು ತಿಳಿಸಿದರು.

Follow Us:
Download App:
  • android
  • ios