Asianet Suvarna News Asianet Suvarna News

'ಪ್ರಾಣತ್ಯಾಗ ಮಾಡಿದ ಕೊರೋನಾ ವಾರಿಯರ್ಸ್‌ಗೆ ಯಾಕಿಂಥ ಅಪಮಾನ?'

ಕೊರೋನಾ ವಾರಿಯರ್ಸ್ ಸಾವಿನ  ಲೆಕ್ಕ ಕೇಂದ್ರದ ಬಳಿ ಇಲ್ಲ/ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ/  ಭದ್ರತೆ ಬಗ್ಗೆ ಗಮನ ನೀಡದ ಸರ್ಕಾರ/ ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಂದಲೂ ಅಸಮಾಧಾನ

Rahul Gandhi Slams Modi Govt for Neglecting corona warriors mah
Author
Bengaluru, First Published Sep 18, 2020, 5:50 PM IST

ನವದೆಹಲಿ( ಸೆ.18) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ದೆಮೇಲೆ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.  ಕೊರೋನಾ ವಿರುದ್ಧದ ಸಮರದಲ್ಲಿ ಪ್ರಾಣ ತ್ಯಾಗ ಮಾಡಿದ ಕೊರೋನಾ ವಾರಿಯುರ್ಸ್ ಬಗೆಗಿನ ಅಂಕಿ ಅಂಶ ತನ್ನ ಬಳಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ್ದು ರಾಹುಲ್ ಗಾಂಧಿ  ಅವರ ಆಕ್ರೋಶಕ್ಕೆ ಕಾರಣ.

ದೀಪ ಹಚ್ಚಿ, ಜಾಗಟೆ ಬಾರಿಸುವುದನ್ನು ಬಿಟ್ಟು ಮೋದಿ ಸರ್ಕಾರ ಭದ್ರತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಿತ್ತು ಎಂದು ರಾಹುಲ್ ಹೇಳಿದ್ದಾರೆ.

ಕೊರೋನಾ ವಾರಿಯರ್ಸ್ ಸಾವಿನ ಬಗ್ಗೆ ಮಾತನಾಡಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೊರೋನಾ ವಾರಿಯರ್ಸ್ ಸಾವಿನ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು.

ಮೋದಿ ನಿರ್ಮಿತ ಆರು ವಿಪತ್ತುಗಳ ಪಟ್ಟಿ ಕೊಟ್ಟ ರಾಹುಲ್

ಕೇಂದ್ರ ಸಚಿವರ ಹೇಳಿಕೆ ನಂತರ ಪ್ರತಿಕ್ರಿಯೆ ನೀಡಿದ್ದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ , ಕೇಂದ್ರ ಸರ್ಕಾರ ಮಾನವೀಯ ಮೌಲ್ಯ ಕಳೆದುಕೊಂಡಿದೆ. ದೇಶದಲ್ಲಿ 382  ವೈದ್ಯರು ಪ್ರಾಣ ಕಳೆದುಕೊಂಡಿರುವ ವಿಚಾರ ಗೊತ್ತಿಲ್ಲದಿರುವುದು ದುರ್ದೈವ ಎಂದಿತ್ತು. ಕೊರೋನಾ ವಿರುದ್ಧ ಹೋರಾಟ ಮಾಡುವ ವೈದ್ಯ ಸಿಬ್ಬಂದಿಗೆ ಕೇಂದ್ರ ಸರ್ಕಾರ 50  ಲಕ್ಷ ರೂ. ಗಳ ವಿಮೆ ಮಾಡಿಸಿತ್ತು.

ಈ ರಾಹುಲ್ ಗಾಂಧಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದ ಕೇಂದ್ರ ಸರ್ಕಾರ ಸರ್ಕಾರ ಕೋವಿಡ್ ವಾರಿಯರ್ಸ್ ಗಳನ್ನು ಗೌರವಿಸುತ್ತದೆ. ಆರೋಗ್ಯ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ವಿಮಾ ಸೌಲಭ್ಯ ಕಲ್ಪಿಸಿದೆ. ಈ ಯೋಜನೆಯನ್ನು  ಕೇಂದ್ರ ಸರ್ಕಾರ ನಿರ್ವಹಣೆ ಮಾಡುತ್ತಿದ್ದು, ದೇಶಾದ್ಯಂತ 64 ವೈದ್ಯರೂ ಸೇರಿದಂತೆ 155 ವೈದ್ಯಕೀಯ ಸಿಬ್ಬಂದಿಗೆ ವಿಮಾ ನೆರವು ನೀಡಲಾಗಿದೆ ಎಂದು ತಿಳಿಸಿದ್ದರು .

Follow Us:
Download App:
  • android
  • ios