Asianet Suvarna News Asianet Suvarna News

ರೈತ ಪ್ರತಿಭಟನೆ ಹೆಸರಲ್ಲಿ ಹಳೇ ಫೋಟೋ ಶೇರ್ ಮಾಡಿ ಪೇಚಿಗೆ ಸಿಲುಕಿದ ರಾಹುಲ್!

* ರೈತ ಪ್ರತಿಭಟನೆ ಬಗ್ಗೆ ತಪ್ಪು ಮಾಹಿತಿ ಹರಡಿದ್ರಾ ರಾಹುಲ್?

* ಹಳೇ ಫೋಟೋ ಟ್ವೀಟ್ ಮಾಡಿದ ರಾಹುಲ್‌ಗೆ ನೆಟ್ಟಿಗರ ಗುದ್ದು

* ರಾಜಕೀಯವಾಗಿ ತಪ್ಪು ಮಾಃಇತಿ ಹರಡುತ್ತಿದ್ದಾರೆಂದ ಬಿಜೆಪಿ

Rahul Gandhi posts old photo of Kisan Mahapanchayat slammed for sharing fake news pod
Author
Bangalore, First Published Sep 6, 2021, 3:06 PM IST

ನವದೆಹಲಿ(ಸೆ.06): ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಉತ್ತರ ಪಗ್ರದೇಶದ ಮುಜಫ್ಫರ್‌ನಗರದಲ್ಲಿ ಆಯೋಜಿಸಲಾಗಿದ್ದ ರೈತರ ಮಹಾಪಂಚಾಯತ್ ಬೆನ್ನಲ್ಲೇ ಸದ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅತ್ತ ಕಳೆದ ಒಂಭತ್ತು ತಿಂಗಳಿಂದ ನಡೆಯುತ್ತಿರುವ ರೈತರ ಚಳುವಳಿ ಮತ್ತಷ್ಟು ಬಲ ಪಡೆದುಕೊಳ್ಳುತ್ತಿದ್ದರೆ, ಇತ್ತ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸುವಲ್ಲಿ ತಲ್ಲೀನರಾಗಿದ್ದಾರೆ. ಸದ್ಯ ಈ ಧಾವಂತದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ರೈತ ಪ್ರತಿಭಟನೆಯ ಫೋಟೋ ಶೇರ್ ಮಾಡಿ ಪೇಚಿಗೀಡಾಗಿದ್ದಾರೆ. 

ಹೌದು ವಾಸ್ತವವಾಗಿ ಕಿಸಾನ್ ಮಹಾಪಂಚಾಯತ್ ಹೆಸರಿನಲ್ಲಿ ರಾಹುಲ್ ಗಾಂಧಿ ಶೇರ್ ಮಾಡಿರುವ ಫೋಟೋ ಸುಮಾರು ಏಳು ತಿಂಗಳಷ್ಟು ಹಳೆಯದು. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ರಾಹುಲ್ ಗಾಂಧಿಯವರ ಟ್ವೀಟ್ ಮಾಡಿರುವ ಫೋಟೋವನ್ನು ಶೇರ್ ಮಾಡುತ್ತಾ, ಹಳೆಯ ಫೋಟೋ ಹಂಚಿಕೊಳ್ಳುವ ಮೂಲಕ ಪ್ರತಿಭಟನೆ ಯಶಸ್ಸು ಕಂಡಿದೆ ಎಂದು ಸುಳ್ಳು ಹೇಳಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಬರೆದಿದ್ದಾರೆ. ಅತ್ತ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕೂಡ ರಾಹುಲ್ ಗಾಂಧಿ ಭ್ರಮೆಗಳ ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಮಾಡಿದ ಟ್ವೀಟ್ ಏನು?

ಕಿಸಾನ್ ಮಹಾಪಂಚಾಯತ್‌ ಯಶಸ್ಸಿಗೆ ಅಭಿನಂದಿಸಿದ ರಾಹುಲ್ ಗಾಂಧಿ ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆಡ ಬರೆದಿರುವ ರಾಹುಲ ಬಲಶಾಲಿ ಹಾಘೂ ಧೈರ್ಯವಂತರು ಇಲ್ಲಿದ್ದಾರೆ, ಇವರೇ ಭಾರತ ಭಾಗ್ಯವಿದಾತರು ಎಂದಿದ್ದಾರೆ. ಈ ಟ್ವೀಟ್ ಜೊತೆ ಫೋಟೋವೊಂದನ್ನೂ ಶೇರ್ ಮಾಡಿದ್ದಾರೆ. 

ರಾಹುಲ್ ಗಾಂಧಿ ಫೋಟೋಗೇ ಬಿಜೆಪಿ ತಿರುಗೇಟು

ರಾಹುಲ್ ಗಾಂಧಿಯವರ ಈ ಟ್ವೀಟ್ ಬೆನ್ನಲ್ಲೇ, ಬಿಜೆಪಿ ಅವರನ್ನು ತರಾಟೆಗೆ ತೆಗೆದುಕೊಂಡು, ಪ್ರಚಾರಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆಂದು ಹೇಳಿದೆ. ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವೀಯ ಈ ಬಗ್ಗೆ ಬರೆದಿದ್ದು, ರಾಹುಲ್ ಗಾಂಧಿ ಹಂಚಿಕೊಂಡ ಚಿತ್ರ ತುಂಬಾ ಹಳೆಯದು. ಕಿಸಾನ್ ಮಹಾಪಂಚಾಯತ್‌ಗಾಗಿ ರಾಹುಲ್ ಗಾಂಧಿ ಹಳೆಯ ಚಿತ್ರವನ್ನು ಹಂಚಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದರಿಂದ ಕಿಸಾನ್ ಆಂದೋಲನದ ಹೆಸರಿನಲ್ಲಿ ಹರಡಿದ ಸುಳ್ಳಿನಬ ಪ್ರಚಾರ ಕೆಲಸ ಮಾಡುತ್ತಿಲ್ಲ ಎಂಬುವುದು ಸ್ಪಷಟ್ವಾಗುತ್ತದೆ ಎಂದಿದ್ದಾರೆ.

ಅಲ್ಲದೇ ಇದು ಸಂಪೂರ್ಣವಾಗಿ ರಾಜಕೀಯ ವಿಷಯ. ಎಲ್ಲಿ ರೈತರ ಚಳವಳಿಯ ಹೆಸರಿನಲ್ಲಿ ಧಾರ್ಮಿಕ ಘೋಷಣೆಗಳು ಕೇಳಿ ಬರುತ್ತವೆಯೋ, ಆಗ ಅದರ ಹಿಂದಿನ ಉದ್ದೇಶವೇನು ಎಂಬುವುದರಲ್ಲಿ ಅನುಮಾನ ಇರಲೇಬಾರದು ಎಂದೂ ಮಾಳವೀಯ ಬರೆದಿದ್ದಾರೆ.

ಸಂಬೀತ್ ಪಾತ್ರಾ ತಿರುಗೇಟು

ಇನ್ನು ಅತ್ತ ಬಿಜೆಪಿ ನಾಯಕ ಸಂಬೀತ್ ಪಾತ್ರಾ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಯಾವಾಗೆಲ್ಲಾ ಭ್ರಮೆ ಹಬ್ಬಿಸುವ ರಾಜಕೀಯ ನಡೆಯುತ್ತದೋ, ಅದರ ಹಿಂಣದೆ ರಾಹುಲ್ ಗಾಂಧಿ ಕೈವಾಡವಿರುತ್ತದೆ. ಖುದ್ದು ತಾವಾಗೇ ಕರೆಲಸಕ್ಕಿಳಿಯುವುದಿಲ್ಲ, ಆದರೆ ಟ್ವೀಟ್ ಮಾಡಿ ಭ್ರಮೆ ಹುಟ್ಟಿಸುತ್ತಾರೆ ಎಂದಿದ್ದಾರೆ. 

Follow Us:
Download App:
  • android
  • ios