Asianet Suvarna News Asianet Suvarna News

ಮೋದಿ ಒಬಿಸಿ ಜಾತಿ ಕುರಿತು ಹಸಿ ಸುಳ್ಳು ಹೇಳಿ ಪೇಚಿಗೆ ಸಿಲುಕಿದ ರಾಹುಲ್, 1999ರ ದಾಖಲೆ ಬಹಿರಂಗ!

ಮೋದಿ ಅಸಲಿಗೆ ಒಬಿಸಿ ಜಾತಿಯಲ್ಲಿ ಹುಟ್ಟಿಲ್ಲ, ಗುಜರಾತ್ ಸಿಎಂ ಆದ ಬಳಿಕ ಮೋದಿ ತಮ್ಮ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದಾರೆ. ಮೋದಿ ಜಾತಿ ಮುಂದಿಟ್ಟು ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಮಾಡಿದ ಭಾಷಣ ಇದೀಗ ವೈರಲ್ ಆಗಿದೆ. ಆದರೆ ಈ ಹೇಳಿಕೆಯಿಂದ ರಾಹುಲ್ ಗಾಂಧಿ ಪೇಚಿಗೆ ಸಿಲುಕಿದ್ದಾರೆ. ಕಾರಣ ಮೋದಿ ಜಾತಿ ಒಬಿಸಿ ಪಟ್ಟಿಗೆ ಸೇರಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಅನ್ನೋ ಸತ್ಯ ಬಹಿರಂಗವಾಗಿದೆ.

Rahul Gandhi on PM modi obc caste remark backfired congress 1999 Govt notification reveals truth ckm
Author
First Published Feb 8, 2024, 4:32 PM IST

ನವದೆಹಲಿ(ಫೆ.08) ಪ್ರಧಾನಿ ನರೇಂದ್ರ ಮೋದಿ ಬಜೆಟ್ ಅಧಿವೇಶನದಲ್ಲಿ ಮೀಸಲಾತಿ ಕುರಿತು ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ತೆಗೆದುಕೊಂಡು ನಿರ್ಣಗಳನ್ನು ಟೀಕಿಸಿದ್ದರು. ನೆಹರೂ ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರವನ್ನು ಉಲ್ಲೇಖಿಸಿದ್ದರು. ಇದು ಕಾಂಗ್ರೆಸ್ ಬುಡವನ್ನೇ ಅಲುಗಾಡಿಸಿತ್ತು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಒಬಿಸಿ ಜಾತಿ ಕೆಣಕಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಇದು ರಾಹುಲ್ ಗಾಂಧಿಯನ್ನು ಪೇಚಿಗೆ ಸಿಲುಕಿಸಿದೆ. ಪ್ರಧಾನಿ ಮೋದಿ ಒಬಿಸಿ ಜಾತಿಯಲ್ಲಿ ಹುಟ್ಟಿಲ್ಲ, ಮೋದಿ ಮುಖ್ಯಮಂತ್ರಿಯಾದ ಬಳಿಕ ತಮ್ಮ ಜಾತಿಯನ್ನು ತಾವೇ ಒಬಿಸಿ ಪಟ್ಟಿಗೆ ಸೇರಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ ಅಸಲಿಗೆ ಮೋದಿಯ ಘನಾಚಿ ಜಾತಿಯನ್ನು 1999ರಲ್ಲಿ ಕಾಂಗ್ರೆಸ್ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸಿದೆ. ಮೋದಿ 2000ನೇ ಇಸವಿಯಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ ಅನ್ನೋ ಸತ್ಯ ಬಯಲಾಗಿದೆ.

ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಒಡಿಶಾದ ಜಾರ್ಸುಗುಡದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸುಳ್ಳುಗಾರ ಎಂದು ಟೀಕಿಸಿದರು. ಮೋದಿ ತಮಗೆ ತಾವೇ ಒಬಿಸಿ ಪಟ್ಟ ನೀಡಿದ್ದಾರೆ. ಅಸಲಿಗೆ ಮೋದಿ ಒಬಿಸಿ(ಹಿಂದುಳಿದ ವರ್ಗ) ಜಾತಿಯಲ್ಲಿ ಹುಟ್ಟಿಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ತಮ್ಮ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಿದರು. ಮೋದಿ ಸಮಾನ್ಯ ಕೆಟಗರಿ ಜಾತಿಯಲ್ಲಿ ಹುಟ್ಟಿ ಒಬಿಸಿ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

ಮೋದಿ ಒಬಿಸಿ ಅಲ್ಲ ಎಂದ ರಾಹುಲ್‌ಗೆ ಪಾರ್ಸಿ ಕ್ಯಾಥೋಲಿಕ್ ನಡುವೆ ಬ್ರಾಹ್ಮಣ ಹೇಗಾಯ್ತು? ನೆಟ್ಟಿಗರ ಪ್ರಶ್ನೆ!

ರಾಹುಲ್ ಗಾಂಧಿ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಒಬಿಸಿ ಜಾತಿಗಳ ಪಟ್ಟಿ ಕುರಿತು ಸರ್ಕಾರದ ಅಧಿಸೂಚನೆ ಮಾಹಿತಿಗಳು ಬಹಿರಂಗವಾಗಿದೆ. 1999ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಘನಾಚಿ ಸೇರಿದಂತೆ ಹಲವು ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಅಧಿಸೂಚನೆ ಹೊರಡಿಸಿತ್ತು. ಮೋಧ್ ಘನಚಿ ಸೇರಿದಂತೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಗಳಿಗೆ 105 ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರ 1999ರ, ಅಕ್ಟೋಬರ್ 27ರಂದು ಅಧಿಸೂಚನೆ ಹೊರಡಿಸಿತ್ತು.

 

 

ಹಿಂದುಳಿದ ವರ್ಗಗಳ ಪಟ್ಟಿಗೆ ಯಾವೆಲ್ಲಾ ಜಾತಿಯನ್ನು ಸೇರಿಸಬೇಕು ಅನ್ನೋದನ್ನು 2 ವರ್ಷಗಳ ಮೊದಲೇ ವರ್ಗೀಕರಣ ಮಾಡಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಯಾವುದೇ ಹುದ್ದೆಯಲ್ಲಿ ಇರಲಿಲ್ಲ. ಬಿಜೆಪಿ ಕಾರ್ಯಕರ್ತನಾಗಿದ್ದರೆ ಹೊರತು ಇನ್ಯಾವುದೇ ಸ್ಥಾನಮಾನ ಮೋದಿಗೆ ಇರಲಿಲ್ಲ. 1999ರಲ್ಲಿ ಸರ್ಕಾರದ ಹೊರಡಿಸಿದ ಒಬಿಸಿ ಜಾತಿಗಳ ವರ್ಗೀಕರಣ ಪಟ್ಟಿ ಇದೀಗ ಸಾರ್ವಜನಿಕಗೊಂಡಿದೆ. ಇತ್ತ ರಾಹುಲ್ ಗಾಂಧಿ ನೀಡಿದ ಸುಳ್ಳು ಹೇಳಿಕೆ ವೈರಲ್ ಆಗಿದೆ. ಇಷ್ಟೇ ಅಲ್ಲ, ಮೋದಿ ಜಾತಿ ಕೆಣಕಿದ ರಾಹುಲ್ ಗಾಂಧಿ ವಿರುದ್ದ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಇಂಡಿಯಾ ಕೂಟ ಗೆದ್ದರೆ ಶೇ.50 ರ ಮೀಸಲು ಮಿತಿ ನಿಯಮ ರದ್ದು: ರಾಹುಲ್‌

ಪಾರ್ಸಿ ತಂದೆ, ಕ್ಯಾಥೋಲಿಕ್ ತಾಯಿ ಪೋಷಕರಿಂದ ರಾಹುಲ್ ಗಾಂಧಿ ದತ್ರಾತ್ರೆಯ ಕೌಲ್ ಬ್ರಾಹ್ಮಣ ಹೇಗಾದ ಅನ್ನೋ ಪ್ರಶ್ನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಕೇಳಲಾಗಿದೆ. ಒಬಿಸಿ ಅಸ್ತ್ರ ಝಳಪಿಸಲು ಹೋದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.
 

Follow Us:
Download App:
  • android
  • ios