ಈ ಸಂಬಂಧ ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ. 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ, 2019ರಲ್ಲಿಅಧೀರ್ ರಂಜನ್ ಚೌಧರಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.
ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (Congress Working Committee) ರಾಹುಲ್ ಗಾಂಧಿ ಅವರನ್ನು ಲೋಕಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 10 ವರ್ಷದ ಬಳಿಕ ಕಾಂಗ್ರೆಸ್ (Congress) ಅಧಿಕೃತ ವಿಪಕ್ಷವಾಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆರಂಭದಲ್ಲಿ ರಾಹುಲ್ ಗಾಂಧಿ (Rahul Gandhi) ವಿಪಕ್ಷ ನಾಯಕನ ಸ್ಥಾನ ನಿರಾಕರಿಸಿದ್ದಾರೆ. ಅಂತಿಮವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ರಾಹುಲ್ ಗಾಂಧಿಯವರನ್ನೇ ವಿಪಕ್ಷ ನಾಯಕನನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರ ಬಂದಿದೆ. 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ, 2019ರಲ್ಲಿಅಧೀರ್ ರಂಜನ್ ಚೌಧರಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. ಲೋಕಸಭಾ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಹುಲ್ ಗಾಂಧಿಯೇ ಬೆಸ್ಟ್ ಆಯ್ಕೆ ಎಂದು ಸಿಡಬ್ಲ್ಯೂಸಿಯಲ್ಲಿ ನಿರ್ಧರಿಸಲಾಗಿದೆ ಎಂದು ಕೆ.ಸಿ.ವೇಣುಗೋಪಾಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ವರದಿಗಳ ಪ್ರಕಾರ ಕಾಂಗ್ರೆಸ್ ತನ್ನ ಸಂಸದೀಯ ನಾಯಕನನ್ನಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಮಿತ್ರಪಕ್ಷಗಳು ಒಪ್ಪಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ರಾಹುಲ್ ಗಾಂಧಿ ಒಪ್ಪದಿದ್ದರೆ ಕೆ.ಸಿ.ವೇಣುಗೋಪಾಲ್, ಶಶಿ ತರೂರ್ ಹೆಸರು ಕೇಳಿ ಬಂದಿವೆ.
ಸಚಿವ ಸಂಪುಟ ಬಗ್ಗೆ ಟೀವಿ ಸುದ್ದಿಗಳು ಸುಳ್ಳು: ಯಾರೂ ನಂಬಬೇಡಿ ಎಂದ ಪ್ರಧಾನಿ ಮೋದಿ
ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಎರಡರಲ್ಲಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕಾಂಗ್ರೆಸ್ ಅಂಗಳದಲ್ಲಿ ಮನೆ ಮಾಡಿದೆ.
ಮೋದಿ 3.0 ಸರ್ಕಾರದಲ್ಲಿ ಜೆಡಿ(ಯು)ಗೆ ಎರಡು ಸ್ಥಾನ ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಪುಟದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಬಣಕ್ಕೆ ಎರಡು ಕ್ಯಾಬಿನೆಟ್ ದರ್ಜೆಯ ಸ್ಥಾನಗಳು ಸಿಗಲಿವೆ ಎಂದು ವರದಿಯಾಗಿವೆ. ಜೆಡಿ(ಯು)ನ ಹಿರಿಯ ನಾಯಕರಾದ ಲಲನ್ ಸಿಂಗ್ ಮತ್ತು ರಾಮ್ ನಾಥ್ ಠಾಕೂರ್ ಅವರ ಹೆಸರನ್ನು ಸಂಪುಟ ಸಚಿವ ಸ್ಥಾನಕ್ಕೆ ಶಿಫಾರಸ್ಸು ಮಾಡಲಾಗಿದೆಯಂತೆ. ಲಲನ್ ಸಿಂಗ್ ಬಿಹಾರದ ಮುಂಗೇರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಭಾರತ ರತ್ನ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಪುತ್ರನಾಗಿರುವ ರಾಮನಾಥ್ ಠಾಕೂರ್ ರಾಜ್ಯಸಭೆಯ ಸಂಸದರಾಗಿದ್ದಾರೆ.
ಚುನಾವಣೆ ಬಳಿಕ ಮತ್ತೊಂದು ಯಾತ್ರೆ ಘೋಷಿಸಿದ ಕಾಂಗ್ರೆಸ್
ಜೂನ್ 9ರಂದು ನರೇಂದ್ರ ಮೋದಿಯವರ ಜೊತೆ ಪ್ರಮಾಣವಚನ ಸ್ವೀಕರಿಸುವವರ ಪೈಕಿ ಲಲನ್ ಸಿಂಗ್ ಮತ್ತು ರಾಮ್ ನಾಥ್ ಠಾಕೂರ್ ಹೆಸರು ಅಂತಿಮವಾಗಿದೆ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಎರಡು ಕ್ಯಾಬಿನೆಟ್ ಸ್ಥಾನಗಳನ್ನು ಕೋರಿತ್ತು. ಚಂದ್ರಬಾಬು ನಾಯ್ಡು ಅವರ ಟಿಡಿಪಿ ನಾಲ್ಕು ಖಾತೆ ಮತ್ತು ಲೋಕಸಭಾ ಸ್ಪೀಕರ್ ಹುದ್ದೆಯನ್ನು ಕೇಳಿದೆ ಎನ್ನಲಾಗಿದೆ. ಟಿಡಿಪಿಯಿಂದ ರಾಮ್‌ಮೋಹನ್ ನಾಯ್ಡು, ಪೆಮ್ಮಸಾನಿ ಚಂದ್ರಶೇಖರ್, ವೆಮಿರ್‌ರೆಡ್ಡಿ ಪ್ರಭಾಕರ್ ರೆಡ್ಡಿ ಹೆಸರುಗಳು ಸಂಪುಟ ಸಚಿವರ ಪಟ್ಟಿ ಇಲ್ಲಿದೆ ಎನ್ನಲಾಗುತ್ತಿದೆ.
