ಲೆಟರ್ ವಿವಾದ, ಡ್ಯಾಮೇಜ್ ಕಂಟ್ರೋಲ್‌ ಮಾಡಲು ಗುಲಾಂ ನಬಿಗೆ ಸೋನಿಯಾ ಕರೆ!

ಕಾಂಗ್ರೆಸ್‌ ಕಾರ್ಯಕಾರಿಣಿ ಸೆ ಬಳಿಕ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ನಾಯಕರು|  ಲೆಟರ್ ವಿವಾದದ ಬಳಿಕ ಆಜಾದ್‌ಗೆ ಸೋನಿಯಾ, ರಾಹುಲ್ ಕರೆ| ಆಜಾದ್‌ ಮನವಿಯನ್ನು ಪರಿಶೀಲಿಸುತ್ತೇವೆ

Rahul And Sonia Gandhi Phoned Ghulam Nabi Azad Targeted At Meet

ನವದೆಹಲಿ(ಆ.26): ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿ ಇಬ್ಬರೂ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ಗಗೆ ಕರೆ ಮಾಡಿ ಮಾತನಾಡಿದ್ದಾರೆ. ಸೋಮವಾರ ನಡೆದಿದ್ದ ಕಾಂಗ್ರೆಸ್‌ ಕಾರ್ಯಕಾರಿಣಿಯ ಮ್ಯಾರಥಾನ್ ಸಭೆಯಲ್ಲಿ ಪತ್ರ ಬರೆದ ಸಂಬಂಧ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿ, ಹಿರಿಯ ನಾಯಕರ ವಿರುದ್ಧ ಕಿಡಿ ಕಾರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

'ಹುದ್ದೆಯ ಪ್ರಶ್ನೆ ಅಲ್ಲ, ಇದು ದೇಶದ ಪ್ರಶ್ನೆ' ದಿನದ ನಂತರ ಕಪಿಲ್ ನಿಗೂಢ ಮಾತು

ಪಕ್ಷದ ನಾಯಕತ್ವ ಕುರಿತು 23 ಮಂದಿ ಹಿರಿಯ ಕಾಂಗ್ರೆಸ್‌ ನಾಯಕರು ಬರೆದಿದ್ದ ಪತ್ರಕ್ಕೆ ಗುಲಾಂ ನಬಿ ಆಜಾದ್ ಕೂಡಾ ಹಸ್ತಾಕ್ಷರ ಹಾಕಿದ್ದರು. ಇನ್ನು ಲಭ್ಯವಾದ ಮಾಹಿತಿ ಅನ್ವಯ ಏಳು ಗಂಟೆ ನಡೆದ ದೀರ್ಘ ಕಾಲದ ಕಾರ್ಯಕಾರಿಣಿ ಸಭೆಯಲ್ಲಿ ಅನೇಕ ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪೂರ್ಣಾವಧಿ ಹಾಗೂ ದೂರದರ್ಶಿ ನೇತೃತ್ವಕ್ಕೆ ಸಂಬಂಧಿಸಿದಂತೆ ಆಜಾದ್ ವಿರುದ್ಧ ಕಿಡಿ ಕಾರಿದ್ದಾರೆನ್ನಲಲಾಘಿದೆ. ಇದಾದ ಬಳಿಕ ಸೋನಿಯಾ ಗಾಂಧಿ ಆಜಾದ್ ಬಳಿ ಮಾತನಾಡಿ ಅವರ ಆತಂಕದ ಬಗ್ಗೆ ಗಮನವಹಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ..

ಇನ್ನು ರಾಹುಲ್ ಗಾಂಧಿ  ಕೂಡಾ ಆಜಾದ್‌ರನ್ನು ಮಾತನಾಡಿದ್ದಾರೆ. ಅಲ್ಲದೇ ಸಿಬಲ್‌ರಿಗೂ ಕರೆ ಮಾಡಿ ಮಾತನಾಡಡಿದ್ದಾರೆನ್ನಲಾಗಿದೆ. ಕಪಿಲ್ ಸಿಬಲ್ ಕೂಡಾ ಈ ಪತ್ರಕ್ಕೆ ಸಹಿ ಹಾಕಿದ್ದರೆಂಬುವುದು ಉಲಲ್ಲೇಖನೀಯ. ಈ ಮಾತುಕತೆ ವೇಳೆ ರಾಹುಲ್ ಗಾಂಧಿ ಪತ್ರ ಬರೆದಿರುವವರ ಮೇಲೆ ಬಿಜೆಪಿಯವರೊಂದಿಗೆ ಕೈಜೋಡಿಸಿದ್ದಾರೆಂಬ ಆರೋಪ ಮಾಡಿಲ್ಲ ಎಂದೂ ಹೇಳಿದ್ದಾರೆ. 

ನಾಯಕತ್ವ ಬದಲಾವಣೆ: ಸೋನಿಯಾಗೆ ಪತ್ರ ಬರೆದ ಗುಂಪಿನಲ್ಲಿ ಕರ್ನಾಟಕ ನಾಯಕ

ರಾಜ್ಯಸಭಾ ಸಂಸದ ಗುಲಾಂ ನಬಿ ಆಜಾದ್ ಈ ಹಿಂದಿನಿಂದಲೂ ಗಾಂಧಿ ಕುಟುಂಬದ ಆಪ್ತರಾಗಿ  ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ CWC ಸಭೆಯಲ್ಲಿ ಅವರು ಭಾರೀ ಟೀಕೆ ಎದುರಿಸಿದ್ದಾರೆ. 
    
 

Latest Videos
Follow Us:
Download App:
  • android
  • ios