ಉತ್ತರಖಂಡದ 11ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪುಷ್ಕರ್ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ ಎರಡನೇ ದಿನಕ್ಕೆ ಪುಷ್ಕರ್ ಪ್ರಮಾಣ ವಚನ
ಡೆಹ್ರಡೂನ್(ಜು.04): ಸಾಂವಿಧಾನಿಕ ಬಿಕ್ಕಟ್ಟು ಪರಿಹರಿಸಲು ಉತ್ತರಖಂಡದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ತೀರಥ್ ಸಿಂಗ್ ರಾವತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರಡನೇ ದಿನಕ್ಕೆ ಇದೀಗ ಪುಷ್ಕರ್ ಸಿಂಗ್ ಧಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಉತ್ತರಖಂಡ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಆಯ್ಕೆ!.
ಪುಷ್ಕರ್ ಸಿಂಗ್ ಧಮಿ ಉತ್ತರಖಂಡದ 11ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗರ್ವನರ್ ಬೇಬಿ ರಾಣಿ ಮೌರ್ಯ, ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪುಷ್ಕರ್ ಸಿಂಗ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಾಲ್ವರು ಮಂತ್ರಿಗಳು ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ
ನೂತನ ಸಿಎಂ ಪುಷ್ಕರ್ ಸಂಪುಟಕ್ಕೆ ಸತ್ಪಾಲ್ ಮಹಾರಾಜ, ಹರಕ್ ಸಿಂಗ್ ರಾವತ್, ಬನ್ಸಿಧರ್ ಭಗತ್, ಯಶ್ಪಾಲ್ ಆರ್ಯ ಸೇರಿಕೊಂಡಿದ್ದಾರೆ. ಸತತ ಮಳೆ ನಡುವೆಯೂ ಉತ್ತರಖಂಡದಲ್ಲಿ ನೂತನ ಮುಖ್ಯಂತ್ರಿ ಅಧಿಕಾರಿ ಸ್ವೀಕರಿಸಿದ್ದಾರೆ.
BREAKING:ಸಿಎಂ ಆದ ಕೆಲವೇ ತಿಂಗಳಿಗೆ ರಾಜೀನಾಮೆ ಪತ್ರ ರವಾನಿಸಿದ ತೀರ್ಥ ಸಿಂಗ್ ರಾವತ್!
45 ವರ್ಷದ ಪುಷ್ಕರ್ ಸಿಂಗ್ ಧಮಿ ಉತ್ತರಖಂಡದ ಕಿರಿಯ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸಾಂವಿಧಾನಿಕ ಬಿಕ್ಕಟ್ಟು ಪರಿಹರಿಸಲು ಬೇರೆ ದಾರಿ ಕಾಣದ ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತೀರಥ್ ಕೇವಲೆ ತಿಂಗಳಲ್ಲಿ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ತೀವ್ರೇಂದ್ರ ಸಿಂಗ್ ರಾವತ್ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ತೀರತ್ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿದ್ದರು. ಉತ್ತಖಂಡದ ಜನ ಕೆಲ ತಿಂಗಳಲ್ಲಿ ಮೂರನೇ ಮುಖ್ಯಮಂತ್ರಿಯನ್ನು ನೋಡುತ್ತಿದ್ದಾರೆ.
