Asianet Suvarna News Asianet Suvarna News

ಪಂಜಾಬ್‌ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಎಡ್ಮಿಷನ್, ರೀ ಎಡ್ಮಿಷನ್, ಟ್ಯೂಶನ್ ಫೀಸ್ ಇಲ್ಲ

2020-2021ರ ಶೈಕ್ಷಣಿಕ ವರ್ಷದಲ್ಲಿ ಪಂಜಾಬ್‌ನ ಸರ್ಕಾರಿ ಶಾಲೆಗಳಲ್ಲಿ ಎಡ್ಮಿಷನ್, ರೀ ಎಡ್ಮಿಷನ್, ಟ್ಯೂಷನ್ ಫೀಸ್ ರದ್ದು ಮಾಡಲಾಗಿದೆ ಎಂದು ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಘೋಷಿಸಿದ್ದಾರೆ.

punjab schools not charge admission re admission tuition fee for 2020-2021 academic year
Author
Bangalore, First Published Jul 26, 2020, 3:53 PM IST

ದೆಹಲಿ(ಜು.26): 2020-2021ರ ಶೈಕ್ಷಣಿಕ ವರ್ಷದಲ್ಲಿ ಪಂಜಾಬ್‌ನ ಸರ್ಕಾರಿ ಶಾಲೆಗಳಲ್ಲಿ ಎಡ್ಮಿಷನ್, ರೀ ಎಡ್ಮಿಷನ್, ಟ್ಯೂಷನ್ ಫೀಸ್ ರದ್ದು ಮಾಡಲಾಗಿದೆ ಎಂದು ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಘೋಷಿಸಿದ್ದಾರೆ. ಪ<ಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ಪ್ರತಿವಾರ ನಡೆಸುವ #AskCaptain ಟ್ವಿಟರ್‌ ಸೆಷನ್‌ನಲ್ಲಿ ಇಂತಹದೊಂದು ಘೋಷಣೆ ಮಾಡಿದ್ದಾರೆ.

ಕೆಟ್ಟ ವೈರಸ್‌ ದೇಶಕ್ಕೆ ಪ್ರವೇಶಿಸಿದೆ: ಲಾಕ್‌ಡೌನ್ ಘೋಷಿಸಿದ ಉ. ಕೊರಿಯಾ ಸರ್ವಾಧಿಕಾರಿ ಕಿಮ್!

ರಾಜ್ಯದಲ್ಲಿ ಜನರ ಸಮಸ್ಯೆ ಹಾಗೂ ಸಂಶಯಗಳಿಗೆ ಸೆಷನ್‌ನಲ್ಲಿ ಉತ್ತರಿಸಿದ ಅಮರಿಂದರ್ ಸಿಂಗ್, ಈ ಘೋಷಣೆ ಮಾಡಿದ್ದಾರೆ. ಈ ಈ ಬಾರಿಯ ಮಕ್ಕಳ ಎಡ್ಮಿಷನ್, ರೀ ಎಡ್ಮಿಷನ್, ಟ್ಯೂಷನ್ ಫೀಸ್‌ ತೆಗೆದುಕೊಳ್ಳುವುದಿಲ್ಲ ಎಂದು ಸಿಎಂ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಕೊರೋನಾ ವೈರಸ್‌ನಿಂದಾಗಿ ರಾಜ್ಯಾದ್ಯಂತ ಶಾಲೆಗಳು ಮುಚ್ಚಲಾಗಿದ್ದು, ಈ ಬಾರಿ ಶಿಕ್ಷಣ ಫೀಸುಗಳನ್ನು ಪಡೆದುಕೊಳ್ಳಬಾರದು ಎಂದು ಶಿಕ್ಷಕರು ಒತ್ತಾಯಿಸಿದ್ದರು. ಫತೇಘರ್ ಸಾಹಿಬ್‌ನ ವ್ಯಕ್ತಿಯೊಬ್ಬರು ಶಾಲೆಯ ಫೀಸ್‌ ಕಟ್ಟದಿರುವುದಕ್ಕೆ ತಮ್ಮ ಮಗಳ ಹೆಸರನ್ನು ಶಾಲೆಯ ವಿದ್ಯಾರ್ಥಿ ಪಟ್ಟಿಯಿಂದ ಹೊಡೆದು ಹಾಕಲಾಗಿದೆ ಎಂದು ಸಿಎಂಗೆ ತಿಳಿಸಿದ್ದರು.

ಚೀನಾ ಆಪ್ತನಿಗೆ ಭಾರತದ ಸಹಾಯ: 10 ಲಕ್ಷ ಡಾಲರ್ ಮೌಲ್ಯದ ವೈದ್ಯಕೀಯ ನೆರವು!

ಇದನ್ನು ಪರಿಶೀಲಿಸಲು ಫತೇಘರ್ ಸಾಹೀಬ್‌ನ ಸಿಎಂಗೆ ತಿಳಿಸಲಾಗಿತ್ತು. ಈ ಬಗ್ಗೆ ವರದಿ ಸಲ್ಲಿಸಿದ ಸುಖಜಿಂದರ್ ಸಿಂಗ್, ಶಿಕ್ಷಕರನ್ನು ನೇಮಿಸಲಾಗಿದ್ದು, ಸರ್ಕಾರಿ ಶಾಲೆಗಳನ್ನು ಅಪ್‌ಗ್ರೇಡ್ ಮಾಡಲಾಗುತ್ತಿದೆ ಎಂದಿದ್ದಾರೆ.

Follow Us:
Download App:
  • android
  • ios