ಪಂಜಾಬ್‌ ಸರ್ಕಾರದಿಂದ ಲಸಿಕೆ ಬ್ಯುಸಿನೆಸ್‌! ದುಬಾರಿ ದರಕ್ಕೆ ಮಾರಾಟ

  • ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರ, ಇದೀಗ ತಾನೇ ಲಸಿಕೆಯನ್ನು ಹಣಗಳಿಕೆಯ ಮಾರ್ಗ ಮಾಡಿಕೊಂಡಿದೆ
  • 1ಲಕ್ಷ ಡೋಸ್‌ ಕೋವ್ಯಾಕ್ಸಿನ್‌ ಲಸಿಕೆಯನ್ನು 600 ರು.ನಂತೆ ಖರೀದಿ
  •  20000 ಡೋಸ್‌ ಅನ್ನು ಖಾಸಗಿ ಆಸ್ಪತ್ರೆಗಳಿಗೆ 1060 ರು.ಗೆ ಮಾರಾಟ 
Punjab Govt sold covid vaccine for heavy price snr

ಚಂಡೀಗಢ (ಜೂ.04): ಲಸಿಕೆ ಪೂರೈಕೆ ಕುರಿತು ಕೇಂದ್ರ ಸರ್ಕಾರದ ಬಗ್ಗೆ ಹಲವು ದಿನಗಳಿಂದ ದೂರುತ್ತಲೇ ಇರುವ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ನೇತೃತ್ವದ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರ, ಇದೀಗ ತಾನೇ ಲಸಿಕೆಯನ್ನು ಹಣಗಳಿಕೆಯ ಮಾರ್ಗ ಮಾಡಿಕೊಂಡಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಪಂಜಾಬ್‌ ಸರ್ಕಾರ, ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ನಿಂದ ಇತ್ತೀಚೆಗೆ 1ಲಕ್ಷ ಡೋಸ್‌ ಕೋವ್ಯಾಕ್ಸಿನ್‌ ಲಸಿಕೆಯನ್ನು 600 ರು.ನಂತೆ ಖರೀದಿಸಿದೆ. ಈ ಲಸಿಕೆಯನ್ನು ಅದು ಜನರಿಗೆ ಉಚಿತವಾಗಿ ವಿತರಿಸುವ ಬದಲು, ಕನಿಷ್ಠ 20000 ಡೋಸ್‌ ಅನ್ನು ಖಾಸಗಿ ಆಸ್ಪತ್ರೆಗಳಿಗೆ 1060 ರು.ಗೆ ಮಾರಾಟ ಮಾಡಿದೆ. ಅಂದರೆ ಪ್ರತಿ ಡೋಸ್‌ ಮೇಲೆ 660 ರು. ಲಾಭ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳು ಇದಕ್ಕೆ 500 ರು. ಸೇರಿಸಿ 1560 ರು.ಗೆ ಒಂದು ಡೋಸ್‌ನಂತೆ ಮಾರಾಟ ಮಾಡುತ್ತಿವೆ. ಸರ್ಕಾರದ ಈ ಕ್ರಮ ಭಾರೀ ಅಚ್ಚರಿ ಮತ್ತು ಟೀಕೆಗೆ ಕಾರಣವಾಗಿದೆ.

ಲಸಿಕೆ ಹಾಕಿದ ಬಳಿಕವೂ ಕೊರೋನಾ ಪರೀಕ್ಷೆ ಮಾಡಿಸಬೇಕೆ?

ಸಾಮಾಜಿಕ ಹೊಣೆಗಾರಿಕೆ :  ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನಾವು ‘ಲಸಿಕೆ ಸಾಮಾಜಿಕ ಹೊಣೆಗಾರಿಕಾ ನಿಧಿ’ ಎಂಬ ಹೆಸರಲ್ಲಿ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆದಿದ್ದೇವೆ. ಲಸಿಕೆ ಮಾರಾಟದಿಂದ ಬಂದ ಹೆಚ್ಚುವರಿ ಹಣವನ್ನು ಈ ಖಾತೆಗೆ ಹಾಕಿ, ಬಳಿಕ ಅದನ್ನು ಹೊಸದಾಗಿ ಲಸಿಕೆ ಖರೀದಿಸಲು ಬಳಸಲು ನಿರ್ಧರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ನೇರವಾಗಿ ಕಂಪನಿಯಿಂದ ಖರೀದಿಸಿದ್ದರೆ ಅವರು 1200 ರು. ನೀಡಬೇಕಿತ್ತು. ನಾವು ಅದಕ್ಕಿಂತಲೂ ಕಡಿಮೆ ದರದಲ್ಲಿ ಪೂರೈಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಜೆಪಿ ಟೀಕೆ:  ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌, 400 ರು.ಗೆ ಪಡೆದುಕೊಂಡ ಲಸಿಕೆ ಇದೀಗ 1560 ರು.ಗೆ ಮಾರಾಟವಾಗುತ್ತಿದೆ. ಗಾಂಧೀ ಕುಟುಂಬಕ್ಕೆ ಆಪ್ತರಾಗಿರುವ ಪಂಜಾಬ್‌ ಸರ್ಕಾರದ ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios