Asianet Suvarna News Asianet Suvarna News

ಪಂಜಾಬ್‌ ಮಾಜಿ ಸಿಎಂ ಚನ್ನಿ ಕೂಡ ಬಿಜೆಪಿಗೆ? ಜಲಂಧರ್‌ ಉಪಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

ಸಿಧುಗೂ ಚನ್ನಿಗೂ ಸಂಬಂಧ ಅಷ್ಟಕ್ಕಷ್ಟೇ. ಹೀಗಾಗಿ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ. ಈಗ ಜಲಂಧರ್‌ ವಿಧಾನಸಭೆ ಉಪಚುನಾವಣೆ ನಡೆಯಲಿದ್ದು, ಅಲ್ಲಿ ಸ್ಪರ್ಧಿಸುವ ಉತ್ಸುಕತೆ ಚನ್ನಿ ಅವರಿಗೆ ಇದೆ. ಅದಕ್ಕೂ ಮುನ್ನವೇ ಅವರು ಬಿಜೆಪಿ ಸೇರಬಹುದು ಎಂದು ಮೂಲಗಳು ಹೇಳಿವೆ.

punjab ex cm charanjit channi rubbishes rumours of joining bjp ahead of jalandhar bypoll ash
Author
First Published Apr 9, 2023, 10:06 AM IST

ಜಲಂಧರ್‌ (ಏಪ್ರಿಲ್ 9, 2023): ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಕಿರಣ್‌ ಕುಮಾರ್‌ ರೆಡ್ಡಿ ಬಿಜೆಪಿ ಸೇರಿದ ಬೆನ್ನಲ್ಲೇ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಮುಖಂಡ ಚರಣ್‌ಜಿತ್‌ ಸಿಂಗ್‌ ಚನ್ನಿ ಕೂಡ ಕೇಸರಿ ಪಕ್ಷ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಜೈಲಿನಲ್ಲಿದ್ದ ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಬಿಡುಗಡೆ ಆಗಿದ್ದು, ಮತ್ತೆ ಸಕ್ರಿಯ ರಾಜಕೀಯಕ್ಕೆ ಧುಮುಕುವ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಚನ್ನಿ ಬಿಜೆಪಿ ಸೇರುವ ಸಾಧ್ಯತೆ ಇದೆ. ಪಂಜಾಬ್‌ ಬಿಜೆಪಿಯ ಕೆಲವು ನಾಯಕರನ್ನು ಚನ್ನಿ ಇತ್ತೀಚೆಗೆ ಭೇಟಿ ಮಾಡಿದ್ದರು ಎಂದು ಮೂಲಗಳು ಹೇಳಿವೆ.

ಸಿಧುಗೂ (Navjot Singh Sidhu) ಚನ್ನಿಗೂ (Charanjit Singh Channi) ಸಂಬಂಧ ಅಷ್ಟಕ್ಕಷ್ಟೇ. ಹೀಗಾಗಿ ಅವರು ಬಿಜೆಪಿ (BJP) ಸೇರುವ ಸಾಧ್ಯತೆ ಇದೆ. ಈಗ ಜಲಂಧರ್‌ ವಿಧಾನಸಭೆ ಉಪಚುನಾವಣೆ (Jalandhar Vidhana Sabha By Election) ನಡೆಯಲಿದ್ದು, ಅಲ್ಲಿ ಸ್ಪರ್ಧಿಸುವ ಉತ್ಸುಕತೆ ಚನ್ನಿ ಅವರಿಗೆ ಇದೆ. ಅದಕ್ಕೂ ಮುನ್ನವೇ ಅವರು ಬಿಜೆಪಿ ಸೇರಬಹುದು ಎಂದು ಮೂಲಗಳು ಹೇಳಿವೆ.

ಇದನ್ನು ಓದಿ: ಕಾಂಗ್ರೆಸ್‌ಗೆ ದೊಡ್ಡ ಶಾಕ್‌: ಆಂಧ್ರ ಮಾಜಿ ಸಿಎಂ ಕಿರಣ್‌ ಕುಮಾರ್ ರೆಡ್ಡಿ ರಾಜೀನಾಮೆ; ಬಿಜೆಪಿಗೆ ಸೇರ್ಪಡೆ..!

ಕಳೆದ ಪಂಜಾಬ್‌ ಚುನಾವಣಾ ಸೋಲಿನ ನಂತರ ಚನ್ನಿ ನೇಪಥ್ಯಕ್ಕೆ ಸರಿದಿದ್ದು, ಬಹಿರಂಗವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಭಾರತ್‌ ಜೋಡೋ ಯಾತ್ರೆ ಸೇರಿದಂತೆ ಕೆಲವು ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.

ಇನ್ನು ಹಲವು ತಿಂಗಳ ಹಿಂದೆ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಕೂಡ ಬಿಜೆಪಿ ಸೇರಿದ್ದರು. ಅಮರೀಂದರ್‌ ಉತ್ತರಾಧಿಕಾರಿಯಾಗಿ ಚನ್ನಿ ನೇಮಕವಾಗಿದ್ದರು. ಆದರೆ, ಬಿಜೆಪಿ ಸೇರುವ ಸುದ್ದಿ ಕೇವಲ ಊಹಾಪೋಹ, ಸುಳ್ಳು ಸುದ್ದಿ ಎಂದು ಪಂಜಾಬ್‌ ಮಾಜಿ ಸಿಎಂ ಚರಣ್‌ಸಿಂಗ್ ಸಿಂಗ್ ಚನ್ನಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. 

ಇದನ್ನೂ ಓದಿ: ಒಂದೇ ವಾಕ್ಯದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಆಂಧ್ರ ಮಾಜಿ ಸಿಎಂ!

ರಾಜಗೋಪಾಲಾಚಾರಿ ಮರಿ ಮೊಮ್ಮಗ ಕೇಶವನ್‌ ಬಿಜೆಪಿಗೆ
ನವದೆಹಲಿ: ಸ್ವಾತಂತ್ರ ಹೋರಾಟಗಾರ, ಭಾರತದ ಕೊನೆಯ ಗವರ್ನರ್‌ ಜನರಲ್‌ ಆಗಿದ್ದ ಸಿ.ರಾಜಗೋಪಾಲಾಚಾರಿ ಅವರ ಮರಿಮೊಮ್ಮಗ ಸಿ.ಆರ್‌ ಕೇಶವನ್‌ ಶನಿವಾರ ಬಿಜೆಪಿ ಸೇರ್ಪಡೆಯಾದರು. ತಮಿಳುನಾಡು ಮೂಲದ ಕೇಶವನ್‌ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು, ಇದೀಗ ಬಿಜೆಪಿ ಸೇರ್ಪಡೆ ದಕ್ಷಿಣದಲ್ಲಿ ಇನ್ನಷ್ಟು ಬೇರುಬಿಡುವ ಕಮಲ ಪಕ್ಷದ ಆಶಯಕ್ಕೆ ನೆರವಾಗಲಿದೆ ಎನ್ನಲಾಗಿದೆ. ಕಾಂಗ್ರೆಸ್‌ ನಾಯಕರಾದ ಎ.ಕೆ.ಆ್ಯಂಟನಿ ಪುತ್ರ ಅನಿಲ್‌, ಆಂಧ್ರದ ಮಾಜಿ ಸಿಎಂ, ಕಿರಣ್‌ಕುಮಾರ್‌ ರೆಡ್ಡಿ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: C R Kesavan: ಮಾಜಿ ಕಾಂಗ್ರೆಸ್‌ ನಾಯಕ ಸಿಆರ್‌ ಕೇಶವನ್‌ ಬಿಜೆಪಿಗೆ ಸೇರ್ಪಡೆ!

Follow Us:
Download App:
  • android
  • ios