ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ : ಇಬ್ಬರ ದುರ್ಮರಣ

  • ಪಂಜಾಬ್‌ನ ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ 
  • ಇಬ್ಬರ ದುರ್ಮರಣ, ನಾಲ್ವರಿಗೆ  ಗಂಭೀರ ಗಾಯ
Punjab Court Blast 2 Dead, 4 Injured In Explosion akb

ಲೂಧಿಯಾನ: ಪಂಜಾಬ್‌ನ ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಬಾತ್‌ರೂಮ್‌ನ ಗೋಡೆಗೆ ಹಾನಿಯಾಗಿದ್ದು, ಹತ್ತಿರದ ಕಿಟಕಿಗಳ ಗಾಜುಗಳು ಛಿದ್ರಗೊಂಡಿವೆ. ಯಾವ ಕಾರಣಕ್ಕೆ ಸ್ಫೋಟ ಸಂಭವಿಸಿದೆ ಎಂಬುದು ತಿಳಿದು ಬಂದಿಲ್ಲ.

ಪಂಜಾಬ್‌ನ ಲೂಧಿಯಾನದಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ. ಕಟ್ಟಡದ ಎರಡನೇ ಮಹಡಿಯಲ್ಲಿರುವ ಸ್ನಾನಗೃಹದಲ್ಲಿ ಮಧ್ಯಾಹ್ನ 12:22 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸ್ನಾನಗೃಹದ ಗೋಡೆಗಳಿಗೆ ಹಾನಿಯಾಗಿದೆ ಮತ್ತು ಹತ್ತಿರದ ಕಿಟಕಿಗಳ ಗಾಜುಗಳು ಒಡೆದು ಹೋಗಿವೆ. ಪ್ರಸ್ತುತ ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದಾರೆ ಮತ್ತು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದರುವ ಪಂಜಾಬ್ ಮುಖ್ಯ ಮಂತ್ರಿ ಚರಂಜಿತ್ ಸಿಂಗ್ ಚನ್ನಿ, ನಾನು ಲೂಧಿಯಾನಕ್ಕೆ ಹೋಗುತ್ತಿದ್ದೇನೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೆಲವು ದೇಶ ವಿರೋಧಿಗಳು ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಅಲರ್ಟ್ ಆಗಿದೆ. ತಪ್ಪಿತಸ್ಥರೆಂದು ಕಂಡುಬಂದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. 

ಲೂಧಿಯಾನ ಕೋರ್ಟ್‌ನಲ್ಲಿ ನಡೆದ ಸ್ಪೋಟದ ಬಗ್ಗೆ ದೆಹಲಿ ಸಿಎಂ (Delhi Chief Minister) ಅರವಿಂದ್‌ ಕೇಜ್ರಿವಾಲ್‌(Arvind Kejriwal) ಪ್ರತಿಕ್ರಿಯಿಸಿದ್ದು, ಸ್ಫೋಟದಲ್ಲಿ ಸಾವನ್ನಪ್ಪಿದ ಇಬ್ಬರಿಗೆ ಸಂತಾಪ ವ್ಯಕ್ತಪಡಿಸಿದರು. ನ್ಯಾಯಾಲಯದ ಕಟ್ಟಡದ ಎರಡನೇ ಮಹಡಿಯಲ್ಲಿ ಕೋರ್ಟ್‌ನ ಸ್ನಾನಗೃಹದೊಳಗೆ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ನಾಲ್ವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಕೆಲವರು ಪಂಜಾಬ್‌ನಲ್ಲಿ ಶಾಂತಿ ಕದಡಲು ಬಯಸುತ್ತಾರೆ. ಪಂಜಾಬ್‌ನ ಮೂರು ಕೋಟಿ ಜನರು ದುರುಳರ ಈ ಯೋಜನೆಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ. ನಾವು ಪರಸ್ಪರರ ಕೈಗಳನ್ನು ಹಿಡಿಯಬೇಕು. ಮೃತರ ಕುಟುಂಬಗಳಿಗೆ ನನ್ನ ಸಂತಾಪ ಮತ್ತು ಗಾಯಗೊಂಡ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಅರವಿಂದ್‌ ಕೇಜ್ರಿವಾಲ್‌ ಟ್ವಿಟ್‌ನಲ್ಲಿ ಹೇಳಿದ್ದಾರೆ. 

Rohini Court Blast: ನೆರೆ ಮನೆಯ ವಕೀಲನನ್ನು ಕೊಲ್ಲಲು ಕೋರ್ಟ್‌ನಲ್ಲಿ ಬಾಂಬ್‌ ಇಟ್ಟ DRDO ವಿಜ್ಞಾನಿ! 

Latest Videos
Follow Us:
Download App:
  • android
  • ios