Asianet Suvarna News Asianet Suvarna News

ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದವನಿಗೆ ಥಳಿಸಿದ ಕಾಂಗ್ರೆಸ್‌ ಶಾಸಕ : ವಿಡಿಯೋ ವೈರಲ್‌

-ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಥಳಿಸಿದ ಕಾಂಗ್ರೆಸ್‌ ಶಾಸಕ

-ಚುನಾವಣೆ ಹೊಸ್ತಿಲಿನಲ್ಲಿರುವ ಕಾಂಗ್ರೆಸ್‌ಗೆ ಮತ್ತೊಂದು ತಲೆನೋವು

-ಶಾಸಕರು ಈ ರೀತಿ ವರ್ತಿಸಬಾರದಿತ್ತು ಎಂದ ಗೃಹ ಸಚಿವ
 

Punjab congress MLA beats man who questioned about development
Author
Bengaluru, First Published Oct 20, 2021, 2:25 PM IST
  • Facebook
  • Twitter
  • Whatsapp

ಚಂಡೀಗಢ(ಅ. 20) :ʼ ಐದು ವರ್ಷದಲ್ಲಿ ಏನು ಸಾಧನೆ ಮಾಡಿದ್ದೀರಿʼ ಎಂದು ಕೇಳಿದ ಯುವಕನೊಬ್ಬನಿಗೆ ಕಾಂಗ್ರೆಸ್‌ ಶಾಸಕ ಜೋಗಿಂದರ್‌ ಪಾಲ್‌ (Joginder Pal) ಥಳಿಸಿರುವ ಘಟನೆ ಪಂಜಾಬ್‌ನ (Punjab) ಚಂಡೀಗಢದಲ್ಲಿ ನಡೆದಿದೆ. ವ್ಯಕ್ತಿಯೋರ್ವನಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಶಾಸಕ ಜೋಗಿಂದರ್‌ ಪಾಲ್‌ ಪಟಾನಕೊಟ್‌ ಜಿಲ್ಲೆಯ ಭೋವಾದಲ್ಲಿ ಸಭೆಯೊಂದ್ದನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಗ್ರಾಮದಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಜನರಿಗೆ ವಿವರಿಸುತ್ತಿದ್ದರು. ಈ ಮಧ್ಯೆ ಸಭೆಯಲ್ಲಿ ನೆರೆದಿದ್ದ ಯುವಕನಬ್ಬ ಏನೋ ಗುನುಗುತ್ತಿದ್ದ. ಆದರೆ ಶಾಸಕರು ಅವನನ್ನು ನಿರ್ಲಕ್ಷ್ಯಸಿ ತಮ್ಮ ಮಾತು ಮುಂದುವರೆಸಿದ್ದಾರೆ. ಪಕ್ಕದಲ್ಲೇ ನಿಂತಿದ್ದ ಪೋಲಿಸ್‌, ಯುವಕನನ್ನು ತಡೆದು ಸಭೆಯಿಂದ ಹೊರಹಾಕಲು ಪ್ರಯತ್ನಿಸಿದರೂ ಬಗ್ಗದ ಯುವಕ ಮತ್ತೆ ಶಾಸಕರನ್ನು ಪ್ರಶ್ನಿಸತೊಡಗಿದ್ದಾನೆ.

ಬಿಜೆಪಿ ಜೊತೆ ಮೈತ್ರಿಗೆ ಸಿದ್ಧ, ಷರತ್ತು ಅನ್ವಯ: ಮಾಜಿ ಸಿಎಂ ಘೋಷಣೆ!

ʼನೀವು ನಿಜವಾಗಲು ಏನು ಕೆಲಸ ಮಾಡಿದ್ದೀರಿ?ʼ ಎಂದು ಜೋರಾಗಿ ಕೂಗಿ ಶಾಸಕರನ್ನು ಪ್ರಶ್ನಿಸಿದ್ದಾನೆ.  ಶಾಸಕರು ಮೊದಲಿಗೆ ಆ ಯುವಕನನ್ನು ಬಳಿಗೆ ಕರೆದು ಅವನಿಗೆ ಮೈಕ್‌ ನೀಡಿದ್ದಾರೆ. ಇದಾದ ತಕ್ಷಣವೇ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಅಲ್ಲಿದ್ದ ಪೋಲಿಸ್‌ ಅಧಿಕಾರಿ ಕೂಡ ಇದಕ್ಕೆ ಸಾಥ್‌ ನೀಡಿದ್ದಾರೆ. ಅಲ್ಲದೇ ಯುವಕ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ಅಲ್ಲಿ ನೆರೆದಿದ್ದ ಜನ ಕೂಡ ಯುವಕನನ್ನು ಥಳಿಸಲು ಪ್ರಾರಂಭಿಸಿದ್ದಾರೆ. ಇನ್ನೊಬ್ಬ ಪೋಲಿಸ್‌ ಅಧಿಕಾರಿ ಬಂದ ನಂತರವೇ ಜನರು ಯುವಕನ್ನು ಥಳಿಸುವುದು ನಿಲ್ಲಿಸಿದ್ದಾರೆ.

 

ರಾಜ್ಯದ ಗೃಹ ಮಂತ್ರಿ ಸುಖಜಿಂದರ್‌ ಸಿಂಗ್‌ ರಾಂಧವ (Sukhjinder Singh Randhawa) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ʼಶಾಸಕರು ಈ ರೀತಿ ವರ್ತಿಸಬಾರದಿತ್ತು, ನಾವು ಜನರ ಪ್ರತಿನಿಧಿಗಳು ಹಾಗೂ ಅವರ ಸೇವೆ ಮಾಡಲು ಇಲ್ಲಿದ್ದೇವೆʼ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರ ಈ ಅಮಾನುಷ ವರ್ತನೆ ಪಕ್ಷಕ್ಕೆ ಈಗ ಮುಜುಗರ ಉಂಟುಮಾಡಿದೆ. ಇನ್ನೊಂಡೆದೆ  ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್(Amarinder Singh) ಮತ್ತು ನವಜೋತ್ ಸಿಂಗ್ ಸಿಧು(Navjot Singh Sidhu) ನಡುವಿನ ಸಂಘರ್ಷ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಚುನಾವಣಾ ಹೊಸ್ತಿಲಲ್ಲಿ ಪಂಜಾಬ್‌ ಕಾಂಗ್ರೆಸ್‌(Punjab Congress) ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು(Navjot Singh Sidhu) ರಾಜೀನಾಮೆ ನೀಡಿದ್ದು ಭಾರೀ ಸಂಚಲನ ಸೃಷ್ಟಿಸಿತ್ತು. ಈಗ ಶಾಸಕರ ಈ ವರ್ತನೆ ಪಂಜಾಬ್ ಕಾಂಗ್ರೆಸ್‌‌ಗೆ  ಮತ್ತೊಮ್ಮೆ ತಲೆ ನೋವಾಗಿ ಪರಿಣಮಿಸಿದೆ

ಕಾಂಗ್ರೆಸ್‌ಗೆ ಮತ್ತೆ ಟೆನ್ಶನ್: 13 ಬೇಡಿಕೆ, ಸೋನಿಯಾಗೆ ಪತ್ರ ಬರೆದ ಸಿಧು!

ಪಂಜಾಬ್ ವಿಧಾನಸಭೆ ಚುನಾವಣೆ 2022 ರಲ್ಲಿ ನಡೆಯಲಿದ್ದು, 117 ವಿಧಾನಭೆ ಕ್ಷೇತ್ರಗಳಲ್ಲಿ ಪೈಪೋಟಿ ನಡೆಯಲಿದೆ. ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ರಾಜಕೀಯ ಬದಲಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಚರಣಜಿತ್ ಸಿಂಗ್ ಚನ್ನಿ (Charanjit Singh Channi) ಆಯ್ಕೆಯಾಗಿದ್ದರು. ಚರಣಜಿತ್ ಸಿಂಗ್ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಮಕೌರ್ ಸಾಹೀಬ್ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಚರಣಜಿತ್ ಸಿಂಗ್ ಮೇಲೆ 2018ರಲ್ಲಿ ಮೀಟೂ ಆರೋಪ ಕೇಳಿಬಂದಿತ್ತು. ಮಹಿಳಾ ಐಎಎಸ್ ಅಧಿಕಾರಿಗೆ ಅನಗತ್ಯ ಸಂದೇಶ ಕಳುಹಿಸಿ ಕಿರಿ ಕಿರಿ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಸರ್ಕಾರದಿಂದ ಮಹಿಳಾ ಅಧಿಕಾರಿ ವರದಿ ಕೇಳಿದ್ದರು. ಕೇಸ್ ದಾಖಲಿಸದ ಕಾರಣ ಬಳಿಕ ಪ್ರಕರಣ ಮುಚ್ಚಿಹೋಗಿತ್ತು.

Follow Us:
Download App:
  • android
  • ios