Asianet Suvarna News Asianet Suvarna News

ಕಾಂಗ್ರೆಸ್ ಗಣ್ಯರು ಪಂಜಾಬ್ ಸಿಎಂ ಪುತ್ರನ ವಿವಾಹದಲ್ಲಿ ಭಾಗಿ, ನವಜೋತ್ ಸಿಂಗ್ ಸಿಧು ಗೈರು!

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಜಾಬ್ ಸಿಎಂ ಪುತ್ರ ನವಜಿತ್ ಸಿಂಗ್
  • ಸರಳ ವಿವಾಹದಲ್ಲಿ ವೈಹಾಕಿ ಜೀವನಕ್ಕೆ ಕಾಲಿಟ್ಟ ಚರಣಜಿತ್ ಪುತ್ರ
  • ಕಾಂಗ್ರೆಸ್ ನಾಯಕರು ಭಾಗಿ, ನವಜೋತ್ ಸಿಂಗ್ ಸಿಧು ಗೈರು
Punjab CM Charanjit Singh Channi son got married Navjot singh sidhu miss out wedding ckm
Author
Bengaluru, First Published Oct 11, 2021, 4:18 PM IST

ಪಂಜಾಬ್(ಅ.11): ಪಂಜಾಬ್(Punjab) ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನಿ(Charanjit Singh Channi) ಪುತ್ರ ನವಜಿತ್ ಸಿಂಗ್ ಸರಳವಾಗಿ ವೈವಾಹಿಕ(Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ(ಅ.11) ಮೊಹಾಲಿಯ ಗುರುದ್ವಾರದಲ್ಲಿ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ನವಜಿತ್ ಸಿಂಗ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಪಂಜಾಬ್ ಕಾಂಗ್ರೆಸ್ ನಾಯಕರು, ಗಣ್ಯರು ಪಾಲ್ಗೊಂಡಿದ್ದರು. ಆದರೆ ನವಜೋತ್ ಸಿಂಗ್ ಸಿಧು(Navjot singh sidhu) ಮಾತ್ರ ಗೈರಾಗಿದ್ದಾರೆ. ಈ ಮೂಲಕ ಸಿಧು, ಕಾಂಗ್ರೆಸ್‌(Congress) ನಾಯಕರ ಜೊತೆಗಿನ ಮುನಿಸು ಹೆಚ್ಚಿಸಿದ್ದಾರೆ.

ನಡುನೀರಿನಲ್ಲಿ ಕೈ ಬಿಟ್ಟ ಸಿಧು: ಕೋಪಗೊಂಡ ಕಾಂಗ್ರೆಸ್‌ನಿಂದ ತಿರುಗೇಟು!

ಚರಣ್‌ಜಿತ್ ಸಿಂಗ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಸಿಧು ಜೊತೆಗಿನ ವೈಮನಸ್ಸು ಹೆಚ್ಚಾಯಿತು. ಪಂಜಾಬ್ ಕಾಂಗ್ರೆಸ್ ಒಳಗಿನ ಒಳಜಗಳ ಹೆಚ್ಚಾಯಿತು. ಚರಣಜಿತ್ ಸಿಂಗ್ ಸಿಎಂ ಆಯ್ಕೆಗೆ ಒಕೆ ಎಂದಿದ್ದ ಸಿಧುಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಹೀಗಾಗಿ ಚರಣ್‌ಜಿತ್ ಸಿಂಗ್ ವಿರುದ್ಧ ವಿರೋಧ ಕಟ್ಟಿಕೊಂಡಿರುವ ನವಜೋತ್ ಸಿಂಗ್, ಸಿಎಂ ಪುತ್ರನ ಮದುವೆಗೆ ಗೈರಾಗಿದ್ದಾರೆ.

ನಿಂತಲ್ಲಿ ನಿಲ್ಲದ ಸಿಧು ಇತಿಹಾಸ, ಎಲ್ಲರ ವಿರುದ್ಧವೂ ಸದಾ ಮುನಿಸು!

ನವಜೋತ್ ಸಿಂಗ್ ಸಿಧು ನೇರವಾಗಿ ವೈಷ್ಣೋವಿ ದೇವಿ(Vaishno Devi) ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇತ್ತ ಪುತ್ರನ ಮದುವೆ ಸಂಭ್ರಮವನ್ನು ಸಿಎಂ ಚರಣಜಿತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

'ನಾನು ಮೊದಲೇ ಹೇಳಿದ್ದೆ...': ಸಿಧು ರಾಜೀನಾಮೆ ಬೆನ್ನಲ್ಲೇ ಮೌನ ಮುರಿದ ಕ್ಯಾಪ್ಟನ್!

ಜುಲೈ ತಿಂಗಳಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ನವಜೋತ್ ಸಿಂಗ್ ಸಿಧು ಆಯ್ಕೆಯಾಗಿದ್ದರು.  ಕಳೆದ ಹಲವು ವರ್ಷಗಳಿಂದ ಸಿಎಂ ಆಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಒಳಗೊಳಗೆ ಕತ್ತಿ ಮಸೆಯುತ್ತಿದ್ದ ಸಿಧು ಅಧ್ಯಕ್ಷನಾದ ಬಳಿಕ ಸೇಡು ತೀರಿಸಿಕೊಂಡರು. ಅಮರಿಂದರ್ ಸಿಂಗ್ ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದ ನವಜೋತ್ ಸಿಂಗ್, ಅಷ್ಟೇ ವೇಗದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. 

ಪಂಜಾಬ್‌ ಕಾಂಗ್ರೆಸ್‌ಗೆ ಬಿಗ್ ಶಾಕ್: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನವಜೋತ್ ಸಿಂಗ್!

ಚರಣಜಿತ್ ಸಿಂಗ್ ಸಿಎಂ ಆದ ಬಳಿಕ ದಿಢೀರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕಾಂಗ್ರೆಸ್ ಪಕ್ಷದಲ್ಲಿ ಇರುವುದಾಗಿ ಘೋಷಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೊದಲೇ ಪಂಜಾಬ್ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದ ಸಿಧು, ಆಮ್ ಆದ್ಮಿ ಪಕ್ಷದತ್ತ ಒಲವು ತೋರಿದ್ದರು. ಆಪ್ ಮೂಲಕ ಪಂಜಾಬ್ ಸಿಎಂ ಆಗುವ ಕನಸು ಕಂಡಿದ್ದರು. ಇದೀಗ ಅದೇ ಕನಸಿನಲ್ಲಿದ್ದಾರೆ ಅನ್ನೋದು ರಾಜಕೀಯ ಪಂಡಿತರ ಅಭಿಪ್ರಾಯ. ಇದೇ ಕಾರಣಕ್ಕೆ ಪಂಜಾಬ್ ಕಾಂಗ್ರೆಸ್ ವಿರೋಧಿ ನಾಯಕರಿಂದ ಸಿಧು ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
 

Follow Us:
Download App:
  • android
  • ios