ಸೋನಿಯಾ ಸಮ್ಮತಿ ಇದ್ರೂ ಸಿಎಂ ಹುದ್ದೆ ನಿರಾಕರಿಸಿದ ಅಂಬಿಕಾ ಸೋನಿ, ಕಾರಣವೇನು?
* ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜೀನಾಮೆ
* ಸಿಂಗ್ ರಾಜೀನಾಮೆ ಬೆನ್ನಲ್ಲೇ ಮುಂದಿನ ಸಿಎಂ ಯಾರೆಂಬ ಕುತೂಹಲ
* ಸಿಎಂ ಹುದ್ದೆ ನಿರಾಕರಿಸಿದ ಅಂಬಿಕಾ ಸೋನಿ
ಚಂಡೀಗಢ(ಸೆ.19): ಪ್ಟನ್ ಅಮರೀಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಪಂಜಾಬ್‌ನ ಮುಖ್ಯಮಂತ್ರಿ ಯಾರು ಎಂಬುವುದು ಭಾರೀ ಕುತೂಹಲ ಮೂಡಿಸಿರುವ ಪ್ರಶ್ನೆ. ಈ ರೇಸ್‌ನಲ್ಲಿ ಅಂಬಿಕಾ ಸೋನಿಯ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿ ಕೂಡ ಅಂಬಿಕಾ ಸೋನಿ ಹೆಸರನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಖುದ್ದು ಅಂಬಿಕಾ ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಸಿಎಂ ಹುದ್ದೆಯ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂಬುವುದು ತಿಳಿದು ಬಂದಿದೆ.
ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ
ವಾಸ್ತವವಾಗಿ, ಶನಿವಾರ ಸಂಜೆ ಚಂಡೀಗಢದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು, ಆದರೆ ಸಿಎಂ ಯಾರೆಂಬ ವಿಚಾರದಲ್ಲಿ ಶಾಸಕರ ನಡುವೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಇದಾದ ಬಳಿಕ, ಶನಿವಾರ ತಡರಾತ್ರಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪಕ್ಷದ ನಾಯಕಿ ಅಂಬಿಕಾ ಸೋನಿ ಮತ್ತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.
ಸಿಎಂ ಆಗದಿರಲು ಆ ಒಂದು ಕಾರಣ ಕೊಟ್ಟ ಅಂಬಿಕಾ ಸೋನಿ
ಹೈಕಮಾಂಡ್ ಪಂಜಾಬ್ ಜವಾಬ್ದಾರಿ ವಹಿಸಿಕೊಳ್ಳುವಂತೆ ಅಂಬಿಕಾ ಸೋನಿಗೆ ಪದೇ ಪದೇ ಮನವಿ ಮಾಡಿದೆ ಎಂದು ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಆದರೆ ಅವರು
ಈ ಹುದ್ದೆಗೇರುವುದನ್ನು ನೇರವಾಗಿ ನಿರಾಕರಿಸಿದ್ದಾರೆ. ಅಂಬಿಕಾ ಸೋನಿ ರ್ವ ಖ್ರಿ ಹಿಂದೂ ಆಗಿದ್ದಾಎ. ಹೀಗಾಗಿ ಅವರು ಓರ್ವ ಸಿಖ್ ಅಭ್ಯರ್ಥಿಯೇ ಪಂಜಾಬ್‌ನ ಸಿಎಂ ಆಗಬೇಕೆಂಬ ಸಲಹೆ ಇಟ್ಟಿದ್ದಾರೆ. ಪಂಜಾಬಿನ ಮುಖ್ಯಮಂತ್ರಿ ಸಿಖ್ ಆಗಿರಬೇಕು, ಈ ರಾಜ್ಯದಲ್ಲಿ ಸಿಖ್ ಸಿಎಂ ಆಗದರೆ ಬೇರೆ ಯಾರು ಆಗುತ್ತಾರೆ ಎಂದೂ ಕೇಳಿದ್ದಾರೆ.
ಪಂಜಾಬ್ ರಾಜಕೀಯದ ದೀರ್ಘ ಅನುಭವ
ಅಂಬಿಕಾ ಸೋನಿಗೆ ಕಾಂಗ್ರೆಸ್ಮತ್ತು ಪಂಜಾಬ್ ರಾಜಕೀಯದ ಸುದೀರ್ಘ ಅನುಭವವಿದೆ ಪ್ರಸ್ತುತ, ಅವರುಪಂಜಾಬ್‌ನ ರಾಜ್ಯಸಭಾ ಸಂಸದರಾಗಿದ್ದಾರೆ. ಅವರು ಯುಪಿಎ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವೆ, ಸಂಸ್ಕೃತಿ ಸಚಿವೆ ಮತ್ತು ಮಾಹಿತಿ ಮತ್ತು ಪ್ರಸಾರ ಮಂತ್ರಿ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುವುದು ಉಲ್ಲೇಖನೀಯ.