ಪುಣೆ (ನ.15):  ದೀಪಾವಳಿ ಹಬ್ಬದ ವೇಳೆ ಮನೆಯನ್ನು ಸ್ವಚ್ಛಗೊಳಿಸಿ ಬೇಡವಾದ ವಸ್ತುಗಳನ್ನು ಮನೆಯಿಂದ ಆಚೆ ಹಾಕುತ್ತೇವೆ. 

ಆದರೆ, ಹಬ್ಬಕ್ಕೆ ಮನೆಯನ್ನು ಸ್ವಚ್ಛಗೊಳಿಸುವ ಧಾವಂತದಲ್ಲಿ ಪುಣೆಯ ಮಹಿಳೆಯೊಬ್ಬಳು 3 ಲಕ್ಷ ರು. ಮೌಲ್ಯದ ಚಿನ್ನ ಇದ್ದ ಬ್ಯಾಗ್‌ ಅನ್ನು ಕಸದ ಬುಟ್ಟಿಗೆ ಎಸೆದಿದ್ದಾಳೆ. 

ಪುಣೆಯ ಪಿಂಪ್ಲಿ ನಿವಾಸಿ ಶೆಲುಕರ್‌ ಎಂಬಾಕೆ ಹಳೆಯ ಬ್ಯಾಗ್‌ಗಳನ್ನು ಕಸದ ಬುಟ್ಟಿಗೆ ಹಾಕಿದ್ದಳು. ಅದನ್ನು ಕಸದ ಗಾಡಿ ತೆಗೆದುಕೊಂಡು ಹೋಗಿತ್ತು. ಅದಾದ 2 ಗಂಟೆಯ ಬಳಿಕ ಶೆಲುಕರ್‌ಗೆ ತಾನು ಎಸೆದ ಚೀಲದಲ್ಲಿ ಚಿನ್ನಾಭರಣಗಳು ಇದ್ದಿದ್ದು ಅರಿವಾಗಿದೆ. 

ದೀಪಾವಳಿ ಹೊಸ್ತಿಲಲ್ಲಿ ಹೀಗಿದೆ ನೋಡಿ ಚಿನ್ನದ ದರ! ...

ಬಳಿಕ ನಗರಪಾಲಿಕೆಗೆ ಫೋನ್‌ ಮಾಡಿ ಕಸದ ಗಾಡಿಯನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾಳೆ. ಅಷ್ಟರಲ್ಲಾಗಲೇ ಕಸವನ್ನು ವಿಲೇವಾರಿ ಮಾಡಿ ಆಗಿತ್ತು. ಬಳಿಕ ಕಸದ ರಾಶಿಯನ್ನು ಹುಡುಕಾಡಿದ ವೇಳೆ ಚಿನ್ನ ಇದ್ದ ಬ್ಯಾಗ್‌ ಪತ್ತೆ ಆಗಿದೆ.