ನವದೆಹಲಿ[ಮಾ.07]:  40 ಮಂದಿ ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ- ಎನ್‌ಐಎ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳನ್ನು ಶ್ರೀನಗರದ ಬಾಗ್‌ ಎ ಮೆಹತಾಬ್‌ ನಿವಾಸಿ ವೈಝ್‌ ಉಲ್‌ ಇಸ್ಲಾಮ್‌ (19) ಹಾಗೂ ಪುಲ್ವಾಮಾ ನಿವಾಸಿ ಮೊಹದ್‌ ಅಬ್ಬಾಸ್‌ ರಾಧರ್‌ ಎಂದು ಗುರುತಿಸಲಾಗಿದೆ.

ವಿಚಾರಣೆಯ ವೇಳೆ ಈ ವೈಝ್‌ ಉಲ್‌ ಇಸ್ಲಾಂ, ತಾನು ಐಇಡಿ ಬಾಂಬ್‌ ತಯಾರಿಕೆಗೆ ಬೇಕಾದ ರಾಸಾಯನಿಕ ಸಾಮಗ್ರಿಗಳು, ಬ್ಯಾಟರಿಗಳು ಮತ್ತು ಇತರ ಉಪಕರಣಗಳನ್ನು ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್‌ ಉಗ್ರರ ನಿರ್ದೇಶನದಂತೆ ಅಮೆಜಾನ್‌ನಲ್ಲಿ ಆನ್‌ಲೈನ್‌ ಮೂಲಕ ತರಿಸಿಕೊಂಡಿದ್ದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾನೆ.

ಪುಲ್ವಾಮಾ ದಾಳಿಯ ಭಾಗವಾಗಿ ತರಿಸಲಾದ ವಸ್ತುಗಳನ್ನು ತಾನೇ ಸ್ವತಃ ಜೈಷ್‌ ಉಗ್ರರಿಗೆ ತಲುಪಿಸಿದ್ದಾಗಿಯೂ ಆತ ಹೇಳಿಕೆ ನೀಡಿದ್ದಾನೆ