Vaccination Drive: ಕೋವಿಡ್‌ ಲಸಿಕೆಗೆ ಹೆದರಿ ಮರ ಏರಿದ ವ್ಯಕ್ತಿಯ ಕಿತಾಪತಿ

 

  • ಕೋವಿಡ್‌ ಲಸಿಕೆಗೆ ಹೆದರಿ ಮರ ಹತ್ತಿದ ವ್ಯಕ್ತಿ
  • ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಘಟನೆ
  • ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಲು ಬಂದಾಗ ನಾಟಕ
Puducherry man climbs on tree to avoid dose of COVID-19 vaccine akb

ಪುದುಚೇರಿ(ಡಿ.30): ಕೋವಿಡ್‌-19 ಲಸಿಕೆಗೆ ಹೆದರಿ ವ್ಯಕ್ತಿಯೊಬ್ಬ ಮರ ಹತ್ತಿದ ಘಟನೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ನಡೆದಿದೆ. 
ಪುದುಚೇರಿಯ (Puducherry) ವಿಲಿಯನೂರ್ (Villianur) ಸಮೀಪದ ಹಳ್ಳಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗ್ರಾಮದಲ್ಲಿ ಜನರಿಗೆ ಲಸಿಕೆ ಹಾಕಲು ಆರೋಗ್ಯ ಅಧಿಕಾರಿಗಳು ಆಗಮಿಸಿದ ತಕ್ಷಣ, ವ್ಯಕ್ತಿ ತನ್ನ ಮನೆಯ ಸಮೀಪವಿರುವ ಮರವನ್ನು ಹತ್ತಿ, ಸತ್ತ ಕೊಂಬೆಗಳನ್ನು ಕತ್ತರಿಸುತ್ತಿರುವಂತೆ ನಟಿಸುವುದಕ್ಕೆ ಮಚ್ಚನ್ನು ಹೊರತೆಗೆದಿದ್ದಾನೆ. ಈ ವೇಳೆ ಆರೋಗ್ಯ ಕಾರ್ಯಕರ್ತರು, ಮರದಲ್ಲಿರುವ  ವ್ಯಕ್ತಿಗೆ ಲಸಿಕೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂದು ಕೇಳಿದಾಗ ಆತ ಇದುವರೆಗೂ ಒಂದೇ ಒಂದು ಡೋಸ್ ತೆಗೆದುಕೊಂಡಿಲ್ಲ ಎಂಬುದು ತಿಳಿದು ಬಂದಿದೆ. 

ನಂತರ ಆರೋಗ್ಯ ಕಾರ್ಯಕರ್ತರು ಮತ್ತು ನೆರೆಹೊರೆಯವರು ಸೇರಿ ಈ ವ್ಯಕ್ತಿಯನ್ನು ಕೆಳಗಿಳಿಯುವಂತೆ ವಿನಂತಿಸಿದರು ಮತ್ತು ಕೋವಿಡ್ -19 ಸೋಂಕು ತಡೆಗಟ್ಟಲು ವ್ಯಾಕ್ಸಿನೇಷನ್ ಅಗತ್ಯವಿದೆ ಎಂದು ವಿವರಿಸಿದರು. ಆದರೆ ವ್ಯಕ್ತಿ ಇದಕ್ಕೆ ನಿರಾಕರಿಸಿದ್ದಾನೆ. ಅಷ್ಟೇ ಅಲ್ಲದೇ ಆರೋಗ್ಯ ಕಾರ್ಯಕರ್ತರನ್ನು ಮರದ ಮೇಲೆಯೇ ನಿಂತು ನಿಂದಿಸಲು ಶುರು ಮಾಡಿದ್ದಾನೆ. ಆದರು ಆರೋಗ್ಯ ಕಾರ್ಯಕರ್ತರು, ತಾವು ಈ ಹಿಂದೆಯೂ  ಗ್ರಾಮದ ಅನೇಕರಿಗೆ ಲಸಿಕೆ ಹಾಕಿದ್ದು ಅವರೆಲ್ಲಾ ಚೆನ್ನಾಗಿದ್ದಾರೆ ಅವರಿಗೆ ಏನೂ ಆಗಿಲ್ಲ ಎಂದು ಹೇಳುವ ಮೂಲಕ ವ್ಯಕ್ತಿಯ ಮನವೊಲಿಕೆ ಮಾಡಲು ಪ್ರಯತ್ನಿಸಿದರು. ಆದರೂ ಆತ ಕೆಳಗಿಳಿಯದ ಕಾರಣ ಬೇರೆ ದಾರಿ ಕಾಣದೇ ಆರೋಗ್ಯ ಕಾರ್ಯಕರ್ತರು ಹಿಂದಿರುಗಿದ್ದಾರೆ. 

 

ಈ ಘಟನೆಯ ವಿಡಿಯೋವನ್ನು ಅಕ್ಕಪಕ್ಕದ ಮನೆಯವರು ಮತ್ತು ಗ್ರಾಮಸ್ಥರು ರೆಕಾರ್ಡ್ ಮಾಡಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯದಲ್ಲಿ ಶೇಕಡಾ 100 ರಷ್ಟು ಕೋವಿಡ್ -19 ಲಸಿಕೆ ಹಾಕುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪುದುಚೇರಿ ಸರ್ಕಾರ ಪ್ರಯತ್ನಿಸುತ್ತಿದ್ದು,  ಅದರ ಭಾಗವಾಗಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಲಸಿಕೆ ಹಾಕುತ್ತಿದ್ದಾರೆ. ಅಲ್ಲದೇ  ತಕ್ಷಣವೇ ಜಾರಿಗೆ ಬರುವಂತೆ COVID-19 ಲಸಿಕೆಯನ್ನು ಪುದುಚೇರಿ ಸರ್ಕಾರವು ಕಡ್ಡಾಯಗೊಳಿಸಿದೆ. ಸರ್ಕಾರದ ಈ ಹೊಸ ಆದೇಶವನ್ನು ಉಲ್ಲಂಘಿಸುವ ಜನರು ಕಾನೂನಿನ ನಿಬಂಧನೆಯ ಪ್ರಕಾರ ದಂಡದ ಕ್ರಮಕ್ಕೆ ಒಳಗಾಗುತ್ತಾರೆ.

Sourav Ganguly Health Update: ಗಂಗೂಲಿಗೆ ಕಾಕ್‌ಟೇಲ್‌ ಥೆರಪಿ ಚಿಕಿತ್ಸೆ

1973 ರ ಸೆಕ್ಷನ್ 8 ರ ಪ್ರಕಾರ ಮತ್ತು ಪುದುಚೇರಿ ಸಾರ್ವಜನಿಕ ಆರೋಗ್ಯ ಕಾಯಿದೆ, 1973 ರ ಸೆಕ್ಷನ್ 54 (1) ರ ನಿಬಂಧನೆಗಳ ಪ್ರಕಾರ, ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕೋವಿಡ್ -19 ಗಾಗಿ ಕಡ್ಡಾಯ ಲಸಿಕೆಯನ್ನು ಜಾರಿಗೊಳಿಸಲಾಗಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

Covid Curbs In Bengal: ಪ.ಬಂಗಾಳದಲ್ಲಿ ಶಾಲಾ ಕಾಲೇಜು ಬಂದ್‌ ? ಸೂಚನೆ ಕೊಟ್ಟ ಸಿಎಂ 

ಈ ಹಿಂದೆ ರಾಜ್ಯದ ಯಾದಗಿರಿಯಲ್ಲಿ ಕೋವಿಡ್‌ ಲಸಿಕೆ ಪಡೆಯಲು ಹೆದರಿ ಜನ ತಮ್ಮ ಮೈಮೇಲೆ ದೆವ್ವ ಬಂದಂತೆ ನಾಟಕ ಮಾಡಿದ ಘಟನೆ ನಡೆದಿತ್ತು.

Latest Videos
Follow Us:
Download App:
  • android
  • ios