ನವದೆಹಲಿ(ನ.13): ಚೀನಾ ಜತೆ ನಂಟು ಹೊಂದಿದ ಕಾರಣಕ್ಕಾಗಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಜನಪ್ರಿಯ ಮೊಬೈಲ್‌ ಗೇಮ್‌ ‘ಪಬ್‌ಜಿ’ ಇದೀಗ ಮತ್ತೆ ಭಾರತಕ್ಕೆ ಬರುತ್ತಿದೆ. ‘ಪಬ್‌ಜಿ ಮೊಬೈಲ್‌ ಇಂಡಿಯಾ’ ಹೆಸರಿನಲ್ಲಿ ಈ ಗೇಮ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗುತ್ತಿರುವುದಾಗಿ ಪಬ್‌ಜಿ ಕಾರ್ಪೋರೇಷನ್‌ ತಿಳಿಸಿದೆ.

ಭಾರತೀಯ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡು ಹೊಸ ಗೇಮ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ ಗೇಮ್‌ ಬಳಕೆದಾರರಿಗೆ ಗರಿಷ್ಠ ಭದ್ರತೆಯನ್ನು ಒದಗಿಸುತ್ತದೆ ಮತ್ತು ಸ್ಥಳೀಯ ನಿಯಮಗಳಿಗೆ ಬದ್ಧವಾಗಿರುತ್ತದೆ ಎಂದು ದಕ್ಷಿಣ ಕೊರಿಯಾ ಮೂಲದ ಕಂಪನಿ ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಪಬ್‌ಜಿ ಸೇರಿದಂತೆ 118 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.

ಪಬ್ಜಿ ಕಾರ್ಪೋರೇಶನ್‌ ತಿಳಿಸಿದೆ. ಅಲ್ಲದೆ ಇದಕ್ಕಾಗಿಯೇ ಸ್ಥಳೀಯವಾಗಿ ಕಚೇರಿಗಳನ್ನು ತೆರೆಯುವ ಉದ್ದೇಶವೂ ಇದೆ ಎಂದು ತಿಳಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಪಬ್ಜಿ ಮೊಬೈಲ್‌, ಪಬ್ಜಿ ಮೊಬೈಲ್‌ ಲೈಟ್‌ ಸೇರಿದಂತೆ 116 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಪ್ಲೇಸ್ಟೋರ್‌ನಿಂದಲೂ ತೆಗೆದುಹಾಕಲಾಗಿತ್ತು. ಆದಾಗ್ಯೂ ಅದಕ್ಕೂ ಮೊದಲೇ ಇದ್ದ ಆ್ಯಂಡ್ರಾಯ್ಡ್‌ ಮತ್ತು ಈಒಎಸ್‌ ಸಾಧನಗಳಲ್ಲಿ ಇನ್ನೂ ಈ ಆಟ ಆಡಬಹುದಿತ್ತು.