ಕಣ್ಣೀರಿಡ್ತಾ ಪಬ್‌ಜಿ ಅಂತ್ಯಕ್ರಿಯೆ ಮಾಡಿದ ಯುವಕರು..!
ನಿಷೇಧಕ್ಕೆ ಒಳಗಾಗಿರುವ ಪಬ್‌ಜಿ ಆ್ಯಪ್ ಭಾರತದಲ್ಲಿ ಇನ್ನು ನೆನಪು ಮಾತ್ರ. ಹೀಗಾಗಿ 15-20 ಯುವಕರು ಪಬ್ಜಿ ಆ್ಯಪ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿ ಕಂಬನಿ ಮಿಡಿದಿದ್ದಾರೆ. ಹೀಗಿತ್ತು ನೋಡಿ ಪಬ್‌ಜಿ ಅಂತ್ಯಕ್ರಿಯೆ
ಭಾರತದಲ್ಲಿ ಪಬ್ ಜಿ ಬ್ಯಾನ್ ಆಗಿದೆ. ದೇಶದಲ್ಲಿದ್ದ ಭಾರೀ ಫೇಮಸ್ ಗೇಮ್ ಹೀಗೆ ಹಠಾತ್ತನೆ ಬ್ಯಾನ್ ಆಗಿದ್ರಿಂದ ಯುವಕರು ಮಾತ್ರ ಭಾರೀ ಬೇಸರದಲ್ಲಿದ್ದಾರೆ. ಹಗಲು ರಾತ್ರಿ ಪಬ್ ಜಿ, ಗನ್, ಫೈಟ್, ಚಿಕನ್ ಡಿನ್ನರ್ ಅಂತಿದ್ದ ಯುವಕರ ಪಾಡು ಹೇಳ ತೀರದು.
ಪಬ್ ಜೀ ಬ್ಯಾನ್ ಆದ ಬೇಸರದಲ್ಲೇ ಯುವಕರ ತಂಡವೊಂದು ತಮ್ಮ ನೆಚ್ಚಿನ ಗೇಮ್‌ಗೆ ಹಾರ ಹಾಕಿ, ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕಣ್ಣೀರೊರೆಸ್ಕೊಳ್ತಾ ವಿನ್ನರ್ ವಿನ್ನರ್ ಚಿಕನ್ ಡಿನ್ನರ್ ಅಂತ ಮಂತ್ರ ಬೇರೆ ಪಠಿಸಿದ್ದಾರೆ.
ಚೀನಾಕ್ಕೆ ಮತ್ತೊಂದು ಮರ್ಮಾಘಾತ; ಪಬ್‌ಜಿ ಸೇರಿ 118 ಅಪ್ಲಿಕೇಶನ್ ಬ್ಯಾನ್'
ನಿಷೇಧಕ್ಕೆ ಒಳಗಾಗಿರುವ ಪಬ್‌ಜಿ ಆ್ಯಪ್ ಭಾರತದಲ್ಲಿ ಇನ್ನು ನೆನಪು ಮಾತ್ರ. ಹೀಗಾಗಿ ಅಹಮದಾಬಾದ್‌ನಲ್ಲಿ 15-20 ಯುವಕರು ಪಬ್ಜಿ ಆ್ಯಪ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿ ಕಂಬನಿ ಮಿಡಿದಿದ್ದಾರೆ.
ಶವಕ್ಕೆ ಅಂತ್ಯಕ್ರಿಯೆ ಮಾಡುವಂತೆ ಪಬ್ಜಿ ಆಟದ ಫೋಟೊವನ್ನು ಇಟ್ಟು ಅದಕ್ಕೆ ಹೂಮಾಲೆ ಹಾಕಿ ಬಿಳಿ ಬಟ್ಟೆಯಲ್ಲಿ ನಾಲ್ವರು ಹೆಗಲ ಮೇಲೆ ಹೊತ್ತು ಊರೆಲ್ಲಾ ಮೆರವಣಿಗೆ ಮಾಡಿದ್ದು, ವಿನ್ನರ್ ವಿನ್ನರ್ ಚಿಕನ್ ಡಿನ್ನರ್ ಎಂದು ಮಂತ್ರ ಪಠಿಸಿದ್ದಾರೆ.
ಟಿಕ್ ಟಾಕ್ ಹೋಯ್ತು, ಪಬ್‌ಜಿನೂ ಹೋಯ್ತು..ಇನ್ನು ಇರೋದ್ಯಾವುದು?
ದೇಶದ ಅಭದ್ರತೆಗೆ ಕಾರಣವಾಗುವ ಪಬ್ ಹೇ ಗೇಮಿಂಗ್ ಮೊಬೈಲ್ ಎಪ್ಲಿಕೇಷನನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಇತ್ತೀಚೆಗಷ್ಟೇ ಭಾರತದಲ್ಲಿ ಬ್ಯಾನ್ ಮಾಡಿದೆ. ಸೋಷಿಯಲ್ಲ್ ಮೀಡಿಯಾದಲ್ಲಂತೂ ಈ ಬಗ್ಗೆ ಮೆಮ್ಸ್ ಸಿಕ್ಕಾಪೊಟ್ಟೆ ವೈರಲ್ ಆಗಿದೆ.
ಈ ಗೇಮ್ ಕಂಡು ಹಿಡಿದಿದ್ದು, ಐಯರ್‌ಲೆಂಡ್‌ನ ಬ್ರೆಂದನ್ ಗ್ರೀನ್. ಡೆಸ್ಕ ಟಾಪ್ ವರ್ಷನ್ ಗೇಮ್ ಕಂಡುಹಿಡಿದ ಈತನ ಗೇಮನ್ನು ದಕ್ಷಿಣ ಕೊರಿಯಾದ ಗೇಮಿಂಗ್ ಕಂಪನಿ ಬ್ಲೂ ಹೋಲ್ ಅಭಿವೃದ್ಧಿಪಡಿಸಿತ್ತು.ಗೌರವಯುತ ವಿದಾಯ ಕೋರಲಾಗಿದೆ.