* ಮಹಾರಾ‍ಷ್ಟ್ರ ಮೈತ್ರಿಯಲ್ಲಿ ಬಿರುಕು* ಉಭಯ ಪಕ್ಷಗಳ ಬಿರುಕಿಗೆ ಕಾರಣವಾಯ್ತು ಕಲ್ಲಿದ್ದಲು ಒಪ್ಪಂದ* ಹಗರಣವನ್ನು ಬಯಲಿಗೆಳೆದಿದ್ದು ಖುದ್ದು ಕಾಂಗ್ರೆಸ್‌* ಕಲ್ಲಿದ್ದಲು ಹಗರಣ ಸಂಬಂಧ ಬಿಜೆಪಿ ಕಿಡಿ

ಮಹಾರಾ‍ಷ್ಟ್ರ(ಜು.02): ನಾಗ್ಪುರ ಮೂಲದ ರುಖ್ಸಾಯ್ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ ಮಹಾಜೆನೆಕೊ(Maharashtra State Power Generation Company)ದ ಪೂರೈಕೆ ಹಾಗೂ ವಾಶಿಂಗ್ ಒಪ್ಪಂದ ಸದ್ಯ ರಾಜಕೀಯ ಭಿನ್ನಮತಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಪ್ರಾದೇಶಿಕ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಈ ವಿಚಾರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿಗೆ ಪತ್ರ ಬರೆದಿದ್ದಾರೆ. ತಮ್ಮ ಈ ಪತ್ರದಲ್ಲಿ ಒಪ್ಪಂದ ರದ್ದುಗೊಳಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಿರುವಾಗ ಅತ್ತ ಬಿಜೆಪಿಯೂ ಈ ವಿಚಾರವಾಗಿ ವಾಗ್ದಾಳಿ ನಡೆಸಿದೆ. 

ಟ್ವೀಟ್ ಮಾಡಿದ ಕೇಂದ್ರ ಸಚಿವರು:

ಕೇಂದ್ರ ಸಚಿವ ಡಾ. ಹರ್ಷವರ್ಧನ್ ಈ ವಿಚಾರವಾಗಿ ಟ್ವೀಟ್ ಮಾಡಿದ್ದು, ಕಲ್ಲಿದ್ದಲು ಹಗರಣದಲ್ಲಿ ಯಾರೋ ತಮ್ಮ ಕೈಗಳನ್ನು ಮಲಿನಗೊಳಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಜೊತೆಗಿನ ಮೈತ್ರಿಯಲ್ಲಿ ಬಿರುಕು ಮೂಡಲಾರಂಭಿಸಿದೆ ಎಂದು ಬರೆದಿದ್ದಾರೆ.

Scroll to load tweet…

ಕಾಂಗ್ರೆಸ್‌ಗೆ ಕೇವಲ ಭ್ರಷ್ಟಾಚಾರ ತಿಳಿದಿದೆ

ಕೇಂದ್ರ ಕಲ್ಲಿದ್ದಲು ಹಾಗೂ ಗಣಿಗಾರಿಕೆ ಸಚಿವ ಪ್ರಹ್ಲಾದ್‌ ಜೋಶಿ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾಂಗ್ರೆಸ್‌ಗೆ ಕೇವಲ ಭ್ರಷ್ಟಾಚಾರ ತಿಳಿದಿದೆ. ಅದು ತನ್ನ ಮಿತಿ ದಾಟಿ ಮಹಾರಾಷ್ಟ್ರದಲ್ಲಿ ಕಪ್ಪು ಪಟ್ಟಿಗೆ ಸೇರ್ಡಡೆಗೊಂಡ ಕಂಪನಿಗೆ ಟೆಂಡರ್ ನೀಡಿದೆ. ಖುದ್ದು ಅವರ ನಾಯಕರೇ ಇದನ್ನು ಹೇಳಿದ್ದಾರೆ. ರೆಕ್ಕೆಗಳಿರುವ ಹಕ್ಕಿಗಳು ಗುಂಪು ಗುಂಪಾಗಿ ಹಾರುತ್ತವೆ ಎಂಬುವುದು ನಿಜ ಎಂದು ಅವರು ವ್ಯಂಗ್ಯವಾಡಿದ್ದಾರೆ.

Scroll to load tweet…

ಖುದ್ದು ಕಾಂಗ್ರೆಸ್‌ನಿಂದ ಮಾಹಿತಿ ಬಯಲು

ಇನ್ನು ಈ ವಿಚಾರ ಖುದ್ದು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ನಾನಾ ಪಟೋಲ್ ಬಹಿರಂಗಪಡಿಸಿದ್ದಾರೆ ಎಂಬುವುದು ಉಲ್ಲೇಖನೀಯ. ಯಾವುದೇ ರೀತಿಯ ನಿವ್ವಳ ಮೌಲ್ಯ ಮತ್ತು ವಹಿವಾಟು ಹೊಂದಿರದ ಭದ್ರತಾ ಅನುಮತಿ ಮತ್ತು ಕಲ್ಲಿದ್ದಲು ವಾಶಿಂಗ್ ಅನುಭವವಿಲ್ಲದ ಕಂಪನಿಗೆ ಒಪ್ಪಂದವನ್ನು ಹೇಗೆ ನೀಡಲಾಯಿತು? ಎಂದು ಅವರು ಪ್ರಶ್ನಿಸಿದ್ದಾರೆ.