* ರಾಜಕೀಯದಿಂದಾಚೆ, ಫ್ಯಾಮಿಲಿ ಜೊತೆ ಸಮಯ ಕಳೆದ ಪ್ರಿಯಾಂಕಾ ಗಾಂಧಿ* ಮಗನ ಪೋಟೋಗ್ರಫಿ ಪ್ರದರ್ಶನ ವೀಕ್ಷಿಸಲು ಬಂದ ಪ್ರಿಯಾಂಕಾ* ಮಗನ ಪ್ರತಿಭೆ ಕಂಡು ಸೆಲ್ಪೀ ಕ್ಲಿಕ್ಕಿಸಿಕೊಂಡ ಕಾಂಗ್ರೆಸ್ ನಾಯಕಿ

ನವದೆಹಲಿ(ಜು.13): ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್‌ ವಾದ್ರಾರ ಮಗ ರೆಹಾನ್ ರಾಜೀವ್ ವಾದ್ರಾಗೆ ಫೋಟೋಗ್ರಫಿಯಲ್ಲಿ ಬಹಳಷ್ಟು ಆಸಕ್ತಿ ಇದೆ. ಇತ್ತೀಚೆಗಷ್ಟೇ ರೆಹಾನ್ ತಾನು ಕ್ಲಿಕ್ಕಿಸಿದ ಕೆಲ ಆಯ್ದ ಫೋಟೋಗಳ ಪ್ರದರ್ಶನ ಆಯೋಜಿಸಿದ್ದರು. ಇದನ್ನು ವೀಕ್ಷಿಸಲು ಖುದ್ದು ಪ್ರಿಯಾಂಕಾ ಗಾಂಧಿ ಕೂಡಾ ತಲುಪಿದ್ದರು. 

View post on Instagram

ಈ ವೇಳೆ ಮಗನ ಪ್ರತಿಭೆ ಕಂಡು ಅವರೆಷ್ಟು ಖುಷಿಯಾದರೆಂದರೆ ಮಗನೊಂದಿಗೆ ಸೆಲ್ಫೀ ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಸೇರ್ ಮಾಡಿಕೊಂಡಿದ್ದಾರೆ.

ಫೋಟೋಗಳ ಪುಸ್ತಕ ಬಿಡುಗಡೆ

View post on Instagram

ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ತನ್ನ ಮಗ ರೆಹಾನ್ ತೆಗೆದ ಫೋಟೋಗಳ ಪುಸ್ತಕ ಡಾರ್ಕ್ ಪರ್ಸೆಪ್ಶನ್ (Dark Perception) ಕೂಡಾ ಬಿಡುಗಡೆ ಮಾಡಿದ್ದಾರೆ. ಇನ್ನು ರೆಹಾನ್‌ ತೆಗೆದ ಫೋಟೋಗಳ ಪ್ರದರ್ಶನ 'ಡಾರ್ಕ್ ಪರ್ಸೆಪ್ಶನ್ಸ್: ಆನ್ ಎಕ್ಸ್‌ಪೊಸಿಷನ್ ಆಫ್ ಲೈಟ್, ಸ್ಪೇಸ್ ಅಂಡ್ ಟೈಮ್' ಭಾನುವಾರದಿಂದ ಆರಂಭವಾಗಿದೆ ಎಂಬುವುದು ಉಲ್ಲೇಖನೀಯ. ಇಪ್ಪತ್ತು ವರ್ಷದ ರೆಹಾನ್ ದೀರ್ಘ ಸಮಯದಿಂದ ಫೋಟೋಗ್ರಫಿ ಮಾಡುತ್ತಿದ್ದಾರೆ.