ಮೋದಿ ಕ್ಷೇತ್ರ ವಾರಣಾಸಿಯಲ್ಲಿ ನಿಂತು ದುರ್ಗಾಮಾತೆ ಜಪಿಸಿದ ಪ್ರಿಯಾಂಕಾ
* ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಪ್ರಿಯಾಂಕಾ ವಾದ್ರಾ
* ದುರ್ಗಾ ಮಾತೆಯ ಸ್ತೋತ್ರ ಪಠಿಸಿದ ಪ್ರಿಯಾಂಕಾ
* ಜೈ ಮಾತಾ ದೀ ಘೊಷಣೆ ಪಠಿಸಲು ಪ್ರಿಯಾಂಕಾ ಕರೆ
* ಕಾಂಗ್ರೆಸ್ ನ ತಂತ್ರಗಾರಿಕೆ ಬದಲಾಯಿತಾ?
ವಾರಣಾಸಿ(ಅ. 11) ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ(Priyanka Gandhi Vadra) ಫುಲ್ ಆಕ್ಟೀವ್ ಆಗಿದ್ದಾರೆ. ಬಿಜೆಪಿ(BJP) ಮತ್ತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡುತ್ತಲೇ ಇದ್ದಾರೆ. ದುರ್ಗಾಮಾತೆಯನ್ನು(Durga) ಕೊಂಡಾಡಿದ ಪ್ರಿಯಾಂಕಾ ಸಭಿಕರಿಗೆ 'ಜೈ ಮಾತಾ ದೀ' ಘೋಷಣೆ ಕೂಗಲು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ(Narendra Modi) ಕ್ಷೇತ್ರ ವಾರಣಾಸಿಯಲ್ಲಿ (Varanasi) ಮಾತನಾಡಿದ, ನಾನು ಉಪವಾಸ ವ್ರತದಲ್ಲಿ ಇದ್ಧೇನೆ.. ದೇವಿ ಸ್ತುತಿಯೊಂದಿಗೆ ನನ್ನ ಭಾಷಣ ಆರಂಭಿಸುತ್ತಿದ್ದೇನೆ ಎಂದ ಪ್ರಿಯಾಂಕಾ ಉತ್ತರ ಪ್ರದೇಶದ ರೈತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕಿದೆ ಎಂದರು.
ಹಿರಿಯ ನಾಯಕರ ಜತೆ ಸಂಧಾನದ ಹೊಣೆ ಹೊತ್ತ ಪ್ರಿಯಾಂಕಾ
ತಮ್ಮ ಭಾಷಣದಲ್ಲಿ ಎರಡು ಸಂಸ್ಕೃತ ಶ್ಲೋಕ ಪಠಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಜನರು ಜೈ ಮಾತಾ ದೀ ಎಂದು ಘೋಷಣೆ ಕೂಗಬೇಕು ಎಂದರು. ತಮ್ಮ ಭಾಷಣವನ್ನು ಸಹ ಜೈ ಮಾತಾ ದೀ ಎಂದು ಹೇಳುತ್ತಲೇ ಅಂತ್ಯಗೊಳಿಸಿದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹಿಂದುತ್ವದ ಪ್ರತಿಪಾದನೆ ಇಳಿದಿದ್ದಾರೆ ಎನ್ನುವ ಅಭಿಪ್ರಾಯ ಬಂತು. ಇನ್ನೊಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ವೇಳೆ 'ಹರ ಹರ ಮಹಾದೇವ' ಘೋಷಣೆ ಮೊಳಗಿತ್ತು.
ಪ್ರಿಯಾಂಕಾ ಅವರ ಇತ್ತೀಚಿನ ವರ್ತನೆಗಳಲ್ಲಿ ಹಲವು ಬದಲಾವಣೆಯಾಗಿದೆ. ಬಿಜೆಪಿಯನ್ನು ಹಿಂದುತ್ವ ಎಂದು ಟೀಕೆ ಮಾಡುತ್ತಿದ್ದ ಪಾರ್ಟಿ ನಾಯಕರು ತಮ್ಮ ಮಾತಿಗೆ ಬ್ರೇಕ್ ಹಾಕಿದ್ದಾರೆ. ಉತ್ತೆ ಪ್ರದೇಶದ ಚುನಾವಣೆ ಸಹ ಎದುರಿನಲ್ಲಿ ಇದ್ದು ಪ್ರಿಯಾಂಕಾ ವಾದ್ರಾ ಕಾಳಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಭಿನ್ನ ಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ.