ಮುಂಬೈ(ಜೂ.05): ದೆಹಲಿಯಿಂದ ಮುಂಬೈಗೆ 6 ಸಾಕು ಪ್ರಾಣಿಗಳನ್ನು ಹೊತ್ತು ಹಾರಲು ಪ್ರೈವೇಟ್ ಜೆಟ್ ರೆಡಿಯಾಗಿದೆ. ಜೂನ್ 2ನೇ ವಾರದಲ್ಲಿ ಪ್ರೈವೇಟ್ ಜೆಟ್ ಇತಿಹಾಸ ಬರೆಯಲಿದೆ. 6 ಸೀಟಿನ ಪ್ರೈವೇಟ್ ಜೆಟ್‌ನಲ್ಲಿ 6 ಸಾಕು ಪ್ರಾಣಿಗಳು ತೆರಳಲಿದೆ. ಹೀಗಾಗಿ ಪ್ರತಿ ಸೀಟಿನ ಬೆಲೆ 1.6 ಲಕ್ಷ ರೂಪಾಯಿ. ಈ ವಿನೂತನ ಐಡಿಯಾ ಮಾಡಿರುವುದು ಮುಂಬೈನ ಸೈಬರ್ ಸೆಕ್ಯೂರಿಟಿ ಸಂಶೋಧಕಿ ದೀಪಿಕಾ ಸಿಂಗ್.

ಪಾರ್ವತಿಪುರದಲ್ಲಿ ಕೊರೊನಾಗೆ ವೃದ್ಧೆ ಸಾವು; ಇಡೀ ಏರಿಯಾ ಸೀಲ್‌ಡೌನ್

25 ವರ್ಷದ ದೀಪಿಕಾ, ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಸಂಬಂಧಿಕರನ್ನು ದೆಹಲಿಗೆ ಕಳುಹಿಸಲು ವಿಮಾನ ಬುಕ್ ಮಾಡಿದ್ದರು. ಈ ವೇಳೆ ಹಲವರು ತಮ್ಮ ಸಾಕು ಪ್ರಾಣಿಗಳೊಂದಿಗೆ ತೆರಳಲು ಇಚ್ಚಿಸಿದ್ದರು. ಆದರೆ ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ನಾಯಿ, ಬೆಕ್ಕು ಬಿಟ್ಟು ತೆರಳುವ ಪರಿಸ್ಥಿತಿ ಬಂದಿತ್ತು. ಇದರಿಂದ ಬೇಸರಗೊಂಡ ದೀಪಿಕಾ ಸಿಂಗ್, ಸಾಕು ಪ್ರಾಣಿಗಳಿಗಾಗಿಯೇ ಪ್ರೈವೇಟ್ ಜೆಟ್ ವಿಮಾನ ಬುಕ್ ಮಾಡಿ ಮಾಲೀಕರ ಜೊತೆ ಸೇರಿಸಲು ಮುಂದಾಗಿದ್ದಾರೆ.

ಇದಕ್ಕಾಗಿ ಖಾಸಗಿ ವಿಮಾನಯಾನದ ಜೊತೆ ಮಾತುಕತೆ ನಡೆಸಿ 6 ಸೀಟಿನ ಪ್ರೈವೇಟ್ ಜೆಟ್ ಬುಕ್ ಮಾಡಿದ್ದಾರೆ. ನಾಯಿ ಸೇರಿದಂತೆ ಇತರ ಸಾಕು ಪ್ರಾಣಿ ಕರೆದೊಯ್ಯಲು ಪ್ರೈವೇಟ್ ಜೆಟ್‌ಗೆ 9.06 ಲಕ್ಷ ರೂಪಾಯಿ ನೀಡಿದ್ದಾರೆ. ಈ ಮೂಲಕ ಪ್ರತಿ ಸೀಟಿನ ಬೆಲೆ 1.6 ಲಕ್ಷ ರೂಪಾಯಿ ವೆಚ್ಚ ತಗುಲಿದೆ.

ಈಗಾಗಲೇ 4 ಮಂದಿ ತಮ್ಮ ಸಾಕು ಪ್ರಾಣಿಗಳನ್ನು ಈ ಪ್ರೈವೇಟ್ ಜೆಟ್‌ನಲ್ಲಿ ಕಳುಹಿಸಲು ಸಹಿ ಹಾಕಿದ್ದಾರೆ. ಮುಂದಿನ ವಾರದಲ್ಲಿ ವಿಮಾನ ದೆಹಲಿಯಿಂದ ಮುಂಬೈಗೆ ತೆರಳಲಿದೆ. ಈ ವೇಳೆ ಇನ್ನೆರಡು ಮಂದಿ ಸಹಿ ಹಾಕದಿದ್ದಲ್ಲಿ, ಪ್ರತಿ ಸೀಟಿನ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ದೀಪಿಕಾ ಸಿಂಗ್ ಹೇಳಿದ್ದಾರೆ.

ಇತ್ತ ದೆಹಲಿ ವಿಮಾನ ನಿಲ್ದಾಣದಲ್ಲಿ ನಾಯಿಗಳಿಗೂ ಸ್ಕಾನಿಂಗ್ ಮಾಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.  ದೇಹದ ಉಷ್ಣತೆ ಸೇರಿದಂತೆ ಎಲ್ಲವನ್ನು ಪರಿಶೀಲಿಸಿ ಸಾಕು ಪ್ರಾಣಿಗಳ ಪ್ರಯಾಣಕ್ಕೆ ಅನುವುಮಾಡಿಕೊಡಲಾಗವುದು. ಕೊರೋನಾ ವೈರಸ್ ಕಾರಣ ಸಿಬ್ಬಂದಿಗಳ ಸೂಚನೆ ಪಾಲಿಸುವುದು ಕಡ್ಡಾಯ ಎಂದಿದ್ದಾರೆ.