Asianet Suvarna News Asianet Suvarna News

ಮಕ್ಕಳನ್ನು ಮಸೀದಿಗೆ ಕರೆದೊಯದ್ದು ಧಾರ್ಮಿಕ ಆಚರಣೆ ಮಾಡಿಸಿದ ಶಿಕ್ಷಕ!

ಇಲ್ಲಿನ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗಳನ್ನು ಧಾರ್ಮಿಕ ಅರಿವಿಗಾಗಿ ಮಸೀದಿಗೆ ಕರೆದೊಯ್ದು ಧಾರ್ಮಿಕ ಆಚರಣೆ ಮಾಡಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಶಾಲೆಯ ಪ್ರಾಂಶುಪಾಲ ಶಂಕರ ಗಾಂವಕರ್‌ರನ್ನು ಅಮಾನತುಗೊಳಿಸಲಾಗಿದೆ.

principal of a private school in Goa took the students to the mosque for religious awareness performed a religious ritual suspended akb
Author
First Published Sep 13, 2023, 9:19 AM IST

ಪಣಜಿ: ಇಲ್ಲಿನ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗಳನ್ನು ಧಾರ್ಮಿಕ ಅರಿವಿಗಾಗಿ ಮಸೀದಿಗೆ ಕರೆದೊಯ್ದು ಧಾರ್ಮಿಕ ಆಚರಣೆ ಮಾಡಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಶಾಲೆಯ ಪ್ರಾಂಶುಪಾಲ ಶಂಕರ ಗಾಂವಕರ್‌ರನ್ನು ಅಮಾನತುಗೊಳಿಸಲಾಗಿದೆ. ವಾಸ್ಕೋದಲ್ಲಿನ ಖಾಸಗಿ ಶಾಲೆಯ ಪ್ರಾಂಶುಪಾಲರು 11ನೇ ತರಗತಿಯ ವಿದ್ಯಾರ್ಥಿಗಳನ್ನು ಮಸೀದಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಮಕ್ಕಳಿಂದ ಇಸ್ಲಾಂ ಧಾರ್ಮಿಕ ಆಚರಣೆಗಳನ್ನು ಮಾಡಿಸಿದ್ದರು ಎಂದು ವಿಶ್ವ ಹಿಂದು ಪರಿಷತ್‌ ಇಲ್ಲಿನ ಪೊಲೀಸರಿಗೆ ಹಾಗೂ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿತ್ತು. ‘ರಾಷ್ಟ್ರ ವಿರೋಧಿ ಚಟುವಟಿಕೆಗೆ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿತ್ತು. ಇದನ್ನು ಪರಿಗಣನೆಗೆ ಪಡೆದ ಶಿಕ್ಷಣ ಇಲಾಖೆ, ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.

ಸನಾತನ ಧರ್ಮದ ವಿರುದ್ಧ ಮಾತಾಡಿದವರ ಕಣ್ಣು, ನಾಲಿಗೆ ಕೀಳಲಾಗುವುದು: ಶೆಖಾವತ್‌

ಜೈಪುರ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ ಮತ್ತು ಕಣ್ಣುಗಳನ್ನು ಕಿತ್ತು ಹಾಕುತ್ತೇವೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಆಕ್ರೋಶ ಹೊರಹಾಕಿದ್ದಾರೆ. ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್‌ ಮತ್ತು ಎ. ರಾಜಾ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಕುಷ್ಟರೋಗಕ್ಕೆ ಹೋಲಿಸಿ ಅದನ್ನು ನಿರ್ಮೂಲನೆ ಮಾಡುವ ಕೀಳು ಹೇಳಿಕೆ ನೀಡಿದ್ದಕ್ಕೆ ಪ್ರತ್ಯುತ್ತರವಾಗಿ ಸಿಂಗ್‌ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ಸಿಂಗ್ ಅವರ ಈ ಹೇಳಿಕೆಯ ವಿಡಿಯೋ ಇದೀಗ ವೈರಲ್‌ ಆಗಿದೆ.

ಪಾಕಿಸ್ತಾನದ 108 ಹಿಂದುಗಳಿಗೆ ಭಾರತೀಯ ಪೌರತ್ವ ವಿತರಣೆ

ಈ ವೇಳೆ ಸಿಂಗ್‌ "ಸನಾತನ ಧರ್ಮದ ವಿರುದ್ಧ ಮಾತನಾಡಿ ಯಾರೂ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ನಾನು ಚಾಲೆಂಜ್‌ ಮಾಡುತ್ತೇನೆ. 2,000 ವರ್ಷಗಳ ಹಿಂದಿನಿಂದ ಸನಾತನ ಧರ್ಮವನ್ನು ನಾಶ ಮಾಡಲು ಅಲ್ಲಾವುದ್ದೀನ್‌ ಖಿಲ್ಜಿಯಂತಹವರು ಅನಕರು ಪ್ರಯತ್ನಿಸಿದರು. ಆದರೆ ನಮ್ಮ ಪೂರ್ವಜರು ಸಮರ್ಥರಾಗಿದ್ದರು ಮತ್ತು ಧರ್ಮವನ್ನು ರಕ್ಷಿಸಿದರು" ಎಂದಿದ್ದಾರೆ.

ಏಕರೂಪ ಸಂಹಿತೆ ವಿರುದ್ಧ ನಾಗಾಲ್ಯಾಂಡ್ ಅಸೆಂಬ್ಲಿ ನಿರ್ಣಯ

ಕೊಹಿಮಾ: ಪ್ರಾಸ್ತಾವಿತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ವಿರೋಧಿಸಿ, ಅದು ರಾಜ್ಯದಲ್ಲಿ ಜಾರಿಯಾಗದಂತೆ ನಾಗಾಲ್ಯಾಂಡ್ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ನಾಗಾಲ್ಯಾಂಡ್‌ ಶಾಸಕಾಂಗ ಸಭೆಯ 14ನೇ ಸದನದಂದು ಯುಸಿಸಿಯ ಉದ್ದೇಶಿತ ಜಾರಿಯಿಂದ ರಾಜ್ಯವನ್ನು ಮುಕ್ತಗೊಳಿಸುವುದು ಅಥವಾ ರಾಜ್ಯದಲ್ಲಿ ಯುಸಿಸಿ ಜಾರಿಯಾಗದಂತೆ ಮುಖ್ಯಮಂತ್ರಿ ನೆಫಿಯು ರಿಯೊ ನಿರ್ಣಯ ಮಂಡಿಸಿದರು.

ದಕ್ಷಿಣದ ಈ ಟಾಪ್‌ ನಟಿ ಕ್ರಿಶ್ಚಿಯನ್‌ ಧರ್ಮ ತೊರೆದು ಹಿಂದೂ ಆಗಿ ಬದಲಾದ ಹಿಂದಿನ ಕಾರಣ ಇದಾ?

ಈ ವೇಳೆ ಅವರು "ಯುಸಿಸಿಯು ಸಾಂಪ್ರಾದಾಯಿಕ ಕಾನೂನುಗಳು, ಸಾಮಾಜಿಕ ಆಚರಣೆಗಳು ಮತ್ತು ನಾಗಾ ಜನರ ಧಾರ್ಮಿಕ ಆಚರಣೆಗಳಿಗೆ ಬೆದರಿಕೆಯನ್ನುಂಟು ಮಾಡುತ್ತದೆ ಎಂದು ನಾಗಾಲ್ಯಾಂಡ್‌ ಸರ್ಕಾರ ಮತ್ತು ನಾಗಾ ಜನರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ವೈಯಕ್ತಿಕ ವಿಷಯಗಳ ಮೇಲೆ ಒಂದೇ ಕಾನೂನು ರಚಿಸುವುದು ಯುಸಿಸಿಯ ಸ್ಪಷ್ಟ ಉದ್ದೇಶವಾಗಿದೆ" ಎಂದರು. ಎಲ್ಲಾ ನಾಗರಿಕ ನಿಯಮಗಳನ್ನು ಎಲ್ಲಾ ಧರ್ಮದವರಿಗೆ ಒಂದೇ ತೆರನಾಗಿ ರೂಪಿಸುವುದು ಯುಸಿಸಿ ಉದ್ದೇಶವಾಗಿದೆ. 

ಆಗಸ್ಟ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.83ಕ್ಕೆ ಇಳಿಕೆ

ನವದೆಹಲಿ: ದೇಶದಲ್ಲಿ ಆಹಾರ ಪದಾರ್ಥಗಳ ಮೇಲಿನ ಬೆಲೆ ಇಳಿಸುವಿಕೆಯಿಂದಾಗಿ ದೇಶದಲ್ಲಿ ಆಗಸ್ಟ್‌ ತಿಂಗಳ ಚಿಲ್ಲರೆ ಹಣದುಬ್ಬರವು ಶೇ.6.83ಕ್ಕೆ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಜುಲೈ ತಿಂಗಳಿನಲ್ಲಿ ಶೇ.7.44ರಷ್ಟಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.7ರಷ್ಟಿತ್ತು. ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲಿನ ಬೆಲೆ ಕಡಿತಗೊಳಿಸಲು ಕ್ರಮ ಕೈಗೊಂಡ ಪರಿಣಾಮ ಆಹಾರ ಹಣದುಬ್ಬರವು ಜುಲೈ ತಿಂಗಳಿನ ಶೇ.11.54 ನಿಂದ ಶೇ.9.94ಕ್ಕೆ ಇಳಿಕೆಯಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ 2023-24ನೇ ಸಾಲಿನ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರವನ್ನು ಶೇ.5.4ರಷ್ಟು ಇರಲಿದೆ ಎಂದು ಅಂದಾಜಿಸಿದೆ.

Follow Us:
Download App:
  • android
  • ios