ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಆಸ್ಟ್ರೇಲಿಯಾದ ಸಚಿವರು ಹೇಳಿದ ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದೊಡ್ಡ ಸಾಂಸ್ಕೃತಿಕ ಬಾಂಧವ್ಯವನ್ನು ಒತ್ತಿಹೇಳುತ್ತದೆ ಎಂದು ಅವರು ಹೇಳಿದರು.

ನವದೆಹಲಿ (ಮಾ.12):ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಆಸ್ಟ್ರೇಲಿಯಾದ ಸಚಿವರು ಹೇಳಿದ ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ವಾಣಿಜ್ಯ ಸಚಿವ ಡಾನ್ ಫಾರೆಲ್ ಅವರು ತಮ್ಮ ಶಿಕ್ಷಕರೊಬ್ಬರು ಗೋವಾದಿಂದ ವಲಸೆ ಬಂದಿದ್ದು ಹೇಗೆ ಎನ್ನುವುದರ ಕುರಿತು ಪ್ರಧಾನಿ ಮೋದಿಯವರಿಗೆ ತಿಳಿಸಿದರು. ಇದೇ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದೊಡ್ಡ ಸಾಂಸ್ಕೃತಿಕ ಸಂಬಂಧವನ್ನು ಇದು ಒತ್ತಿಹೇಳುತ್ತದೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದು ಗೊತ್ತೇ ಇದೆ. ಡಾನ್ ಫಾರೆಲ್ ಅವರು ಆಂಥೋನಿ ಅಲ್ಬನೀಸ್ ಅವರೊಂದಿಗೆ ಭಾರತ ಪ್ರವಾಸ ಮಾಡಿದರು. ಈ ಸಂದರ್ಭದಲ್ಲಿ ಭೋಜನ ಕೂಟದ ವೇಳೆ ಡ್ಯಾರೆನ್ ಹೇಳಿದ್ದನ್ನು ಸರಣಿ ಟ್ವೀಟ್ ಗಳ ಮೂಲಕ ಮೋದಿ ಹಂಚಿಕೊಂಡಿದ್ದಾರೆ.

"ನನ್ನ ಸ್ನೇಹಿತ ಪ್ರಧಾನಿ ಅಲ್ಬನೀಸ್ ಅವರಿಗೆ ನೀಡಿದ್ದ ಭೋಜನ ಕೂಟದ ಸಮಯದಲ್ಲಿ ... ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಡಾನ್ ಫಾರೆಲ್ ಅವರು ಆಸಕ್ತಿದಾಯಕ ಕಥೆಯನ್ನು ಹಂಚಿಕೊಂಡರು. ಅವರು ಗ್ರೇಡ್ 1 ರಲ್ಲಿ ಎಬರ್ಟ್ ಎನ್ನುವ ಶಿಕ್ಷಕಿಯಿಂದ ಕಲಿತಿದ್ದರು. ಇದು ಅವರ ಜೀವನದ ಮೇಲೆ ಉತ್ತಮ ಪರಿಣಾಮ ಬೀರಿತು. ಈಗಲೂ ತಮ್ಮ ಶೈಕ್ಷಣಿಕ ಜೀವನದ ಮೂಲವಾಗಿರುವ ಎಬರ್ಟ್‌ ಅವನ್ನು ನೆನಪು ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು.

Scroll to load tweet…

ಎಬರ್ಟ್, ಅವರ ಪತಿ ಮತ್ತು ಮಗಳು ಲಿಯೋನಿ 1950 ರ ದಶಕದಲ್ಲಿ ಭಾರತದ ಗೋವಾದಿಂದ ಆಸ್ಟ್ರೇಲಿಯಾದ ಅಡಿಲೇಡ್‌ಗೆ ವಲಸೆ ಹೋಗಿದ್ದರು. ಬಳಿಕ ಅಡಿಲೇಡ್‌ನ ಶಾಲೆಯೊಂದರಲ್ಲಿ ಪಾಠ ಮಾಡಲು ಆರಂಭ ಮಾಡಿದ್ದರು. ಎಬರ್ಟ್‌ ಅವರ ಮಗಳು ಲಿಯೋನಿ ಸೌತ್ ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೀಚರ್ಸ್‌ನ ಅಧ್ಯಕ್ಷೆಯೂ ಆಗಿದ್ದರು.. ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ದೊಡ್ಡ ಸಾಂಸ್ಕೃತಿಕ ಬಾಂಧವ್ಯವನ್ನು ಒತ್ತಿಹೇಳುವ ಈ ಕಥೆಯನ್ನು ಕೇಳಲು ನನಗೆ ಸಂತೋಷವಾಗುತ್ತಿದೆ. "ಯಾರಾದರೂ ತನ್ನ ಗುರುವನ್ನು ಪ್ರೀತಿಯಿಂದ ಉಲ್ಲೇಖಿಸುವುದನ್ನು ಕೇಳಲು ಅಷ್ಟೇ ಸಂತೋಷವಾಗುತ್ತದೆ" ಎಂದು ಮೋದಿ ಹೇಳಿದರು.