ನವದೆಹಲಿ[ಡಿ.16]: ವಿಶ್ವದ ಅಚ್ಚುಮೆಚ್ಚಿನ ವ್ಯಕ್ತಿಗಳ ಪಟ್ಟಿಯೊಂದನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಬ್ರಿಟನ್‌ ಮೂಲದ ಯು ಗೌ ನಡೆಸಿದ ಜಾಗತಿಕ ಸಮೀಕ್ಷಾ ವರದಿ ಅನ್ವಯ, ಭಾರತದ ಪ್ರಧಾನಿ ನರೇಂದ್ರ ಮೋದಿ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.

ಉಳಿದಂತೆ ನಟ ಅಮಿತಾಭ್‌ ಬಚ್ಚನ್‌ ನಂ.12, ನಟ ಶಾರುಖ್‌ ಖಾನ್‌ ನಂ.16, ಸಲ್ಮಾನ್‌ ಖಾನ್‌ ನಂ.18ನೇ ಸ್ಥಾನ ಪಡೆದಿದ್ದಾರೆ. ಇನ್ನು ಮಹಿಳೆಯರ ಪಟ್ಟಿಯಲ್ಲಿ ನಟಿಯರಾದ ದೀಪಿಕಾ ಪಡುಕೋಣೆ (ನಂ.13), ಪ್ರಿಯಾಂಕಾ ಚೋಪ್ರಾ (ನಂ.14), ಐಶ್ವರ್ಯಾ ರೈ (ನಂ.16) ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗದಲ್ಲಿ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌, ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ, ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.