ಪ್ರವಾಸೋದ್ಯಮವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲು ದೇಶದಲ್ಲೇ ಮದುವೆ ತಾಣಗಳನ್ನು ಅಭಿವೃದ್ಧಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಕರೆ ನೀಡಿದ್ದಾರೆ.
ನವದೆಹಲಿ: ಪ್ರವಾಸೋದ್ಯಮವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲು ದೇಶದಲ್ಲೇ ಮದುವೆ ತಾಣಗಳನ್ನು ಅಭಿವೃದ್ಧಿ ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಕರೆ ನೀಡಿದ್ದಾರೆ. ಜನ ಮದುವೆಯಾಗಲು ವಿದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ. ಇದರ ಬದಲು ದೇಶದಲ್ಲೇ ಅವರು ಮದುವೆಯಾಗುವಂತಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬಜೆಟ್ ನಂತರದ ಪ್ರವಾಸೋದ್ಯಮದ ವೆಬಿನಾರ್‌ನಲ್ಲಿ (Webinar) ಮಾತನಾಡಿದ ಅವರು, ನಾವು ಪ್ರವಾಸೋದ್ಯಮವನ್ನು ಮತ್ತೊಂದು ಮಗ್ಗುಲಿಗೆ ಕೊಂಡೊಯ್ಯುವತ್ತ ಯೋಚಿಸಬೇಕು. ರಾಜ್ಯಗಳು ಮದುವೆ ಸ್ಥಳಗಳ ಕುರಿತಾಗಿ ವಿಷೇಶ ಪ್ಯಾಕೇಜ್‌ಗಳನ್ನು ಘೋಷಿಸಬೇಕು. ಉದಾಹರಣೆಗೆ ಗುಜರಾತ್‌ನ ಜೋಡಿಯೊಂದು ತಮಿಳುನಾಡಿನಲ್ಲಿರುವ (Tamilnadu) ಸ್ಥಳದಲ್ಲಿ, ತಮಿಳುನಾಡಿನ ಶೈಲಿಯಲ್ಲಿ ಮದುವೆಯಾಗಲು ಬಯಸಿದರೆ, ಅದಕ್ಕೆ ತಕ್ಕ ವಾತಾವರಣ ಅಲ್ಲಿ ನಿರ್ಮಾಣವಾಗಬೇಕು. ಅದೇ ರೀತಿ ಇಬ್ಬರು ಮಕ್ಕಳಿರುವ ದಂಪತಿ, ತಮ್ಮ ಮಕ್ಕಳ ಮದುವೆಯನ್ನು ಬೇರೆ ಬೇರೆ ರಾಜ್ಯಗಳ ಶೈಲಿಯಲ್ಲಿ ಮಾಡಲು ನಿರ್ಧರಿಸಿದರೆ ಅದಕ್ಕೆ ಸೂಕ್ತ ಸ್ಥಳ ಲಭ್ಯವಾಗಬೇಕು ಎಂದು ಅವರು ಹೇಳಿದ್ದಾರೆ.
ಅಂತೂ ಇಂತೂ ನಂದಿಬೆಟ್ಟ ರೋಪ್‌ವೇಗೆ ಕಾಲ ಕೂಡಿಬಂತು: ಅಂಜನಾದ್ರಿ ಬೆಟ್ಟಕ್ಕೂ ರೋಪ್ ವೇ
ಮದುವೆಗಾಗಿ ಸ್ಥಳಗಳನ್ನು ರೂಪಿಸುವುದು ಪ್ರವಾಸೋದ್ಯಮದ ಅವಕಾಶವನ್ನು ಹೆಚ್ಚಿಸಲಿದೆ. ನಮ್ಮ ದೇಶದ ಮಧ್ಯಮ ವರ್ಗದ ಜನರೂ ಸಹ ಇತ್ತೀಚಿಗೆ ವಿದೇಶಗಳಿಗೆ ತೆರಳುತ್ತಿದ್ದಾರೆ. ಇದನ್ನು ಗಮನಿಸಿದರೆ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ತಿಳಿಯುತ್ತಿದೆ ಎಂದು ಅವರು ಹೇಳಿದರು.
