Asianet Suvarna News Asianet Suvarna News

ಜಾಗತಿಕ ಗಣ್ಯರಿಗೆ ಕೊನಾರ್ಕ್ ಕಾಲಚಕ್ರ ಪರಿಚಯಿಸಿದ ಪ್ರಧಾನಿ ಮೋದಿ

ಜಿ20 ಶೃಂಗಸಭೆ ನಡೆಯುವ ಭಾರತ ಮಂಟಪಂ ಸ್ಥಳಕ್ಕೆ ಆಗಮಿಸಿದ ಎಲ್ಲಾ ಜಾಗತಿನ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಕೊನಾರ್ಕ್ ಸೂರ್ಯ ದೇಗುಲದಲ್ಲಿರುವ ಚಕ್ರದ ಪ್ರತಿಕೃತಿಯ ಎದುರು ಸ್ವಾಗತಿಸಿದರು.

Prime Minister Modi introduced the Konark Kalachakra to the global elite at G20 summit akb
Author
First Published Sep 10, 2023, 8:13 AM IST

ನವದೆಹಲಿ: ಜಿ20 ಶೃಂಗಸಭೆ ನಡೆಯುವ ಭಾರತ ಮಂಟಪಂ ಸ್ಥಳಕ್ಕೆ ಆಗಮಿಸಿದ ಎಲ್ಲಾ ಜಾಗತಿನ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಕೊನಾರ್ಕ್ ಸೂರ್ಯ ದೇಗುಲದಲ್ಲಿರುವ ಚಕ್ರದ ಪ್ರತಿಕೃತಿಯ ಎದುರು ಸ್ವಾಗತಿಸಿದರು. ಇದು ಭಾರತದ ಪ್ರಾಚೀನ ವಿವೇಕ, ಪ್ರೌಢ ನಾಗರಿಕತೆ ಮತ್ತು ವಾಸ್ತುಶಿಲ್ಪದ ಉತೃಷ್ಟತೆಯ ಪ್ರತೀಕವಾಗಿದೆ. ಅಲ್ಲದೇ ಇದು ಕಾಲಚಕ್ರವನ್ನು ಸೂಚಿಸುವ ಸಾಧನವಾಗಿದ್ದು, ಕಾಲ ಬದಲಾಗುತ್ತಲೇ ಇರುತ್ತದೆ ಎಂಬ ತತ್ವವನ್ನೂ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಬದಲಾವಣೆಯ ಸೂಚಕವಾಗಿ ಇದೇ ಚಿತ್ರವನ್ನು ಜಾಗತಿಕ ಗಣ್ಯರ ಮುಂದೆ ಪ್ರದರ್ಶನಕ್ಕೆ ಮೋದಿ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಕೊನಾರ್ಕ್ ಸೂರ್ಯ ದೇವಾಲಯವನ್ನು ಗಂಗರ ಅರಸ ಒಂದನೇ ನರಸಿಂಹ ದೇವ (Narasimha Deva) 13ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದರು. ಈ ದೇವಾಲಯದ ಗೋಡೆಯ (Temple wall) ಮೇಲೆ ನಿರ್ಮಾಣ ಮಾಡಲಾಗಿರುವ 24 ಅಡ್ಡಕಡ್ಡಿಗಳಿರುವ ಚಕ್ರದ ರಚನೆಯಿದ್ದು, ಇದನ್ನೇ ರಾಷ್ಟ್ರಧ್ವಜದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಜಿ20 ಗುಂಪಿಗೆ ಆಫ್ರಿಕನ್‌ ಒಕ್ಕೂಟ ಸೇರ್ಪಡೆ

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ (G-20 summit) ಆಫ್ರಿಕಾ ಒಕ್ಕೂಟಕ್ಕೆ ಖಾಯಂ ಸದಸ್ಯ ಸ್ಥಾನ ನೀಡುವ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಾತಿಗೆ ಮತ್ತೊಮ್ಮೆ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ.

ಜಿ - 20 ಶೃಂಗಸಭೆ: ರಾಗಿ, ಗೋಲ್‌ಗಪ್ಪಾ ರುಚಿ ಸವಿಯಲಿರೋ ವಿದೇಶಿ ಪ್ರತಿನಿಧಿಗಳು; ಯುಪಿಐ ಮ್ಯಾಜಿಕ್ ಬಗ್ಗೆಯೂ ಮಾಹಿತಿ

ಆಫ್ರಿಕನ್‌ ಒಕ್ಕುಟಕ್ಕೂ ಜಿ20 ಒಕ್ಕೂಟದ ಸದಸ್ಯತ್ವ ನೀಡು ಪ್ರಧನಿ ಮೋದಿ ಪ್ರಸ್ತಾಪಕ್ಕೆ ಸದಸ್ಯ ದೇಶಗಳು ಒಮ್ಮತದ ಒಪ್ಪಿಗೆ ನೀಡಿದವು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ‘ಜಿ20 ಕುಟುಂಬಕ್ಕೆ ಖಾಯಂ ಸದಸ್ಯನಾಗಿ ಆಫ್ರಿಕನ್‌ ಒಕ್ಕೂಟವನ್ನು (African Union) ಸ್ವಾಗತಿಸಲು ಸಂತೋಷವಾಗುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಗೆ ಮತ್ತಷ್ಟುಬಲ ನೀಡಲಿದೆ’ ಎಂದು ಹೇಳಿದ್ದಾರೆ. ಸಭೆಯ ಆರಂಭಕ್ಕೂ ಮುನ್ನ ಆಫ್ರಿಕನ್‌ ಒಕ್ಕೂಟದ ಅಧ್ಯಕ್ಷ ಅಜಾಲಿ ಅಸೌಮನಿ ಅವರನ್ನು ವೇದಿಕೆಗೆ ಆಹ್ವಾನಿಸಿದ ಮೋದಿ, ಸಬ್‌ ಕಾ ಸಾಥ್‌ ಎಂಬ ಕಲ್ಪನೆಗೆ ಅನುಗುಣವಾಗಿ ಆಫ್ರಿಕನ್‌ ಒಕ್ಕೂಟಕ್ಕೆ ಖಾಯಂ ಸದಸ್ಯತ್ವ ನೀಡಬೇಕು ಎಂದು ಭಾರತ ಪ್ರಸ್ತಾಪಿಸಿತ್ತು. ಇದಕ್ಕೆ ನಾವೆಲ್ಲರೂ ಒಪ್ಪಿಗೆ ನೀಡಿದ್ದೇವೆ ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ಆಫ್ರಿಕನ್‌ ಒಕ್ಕೂಟದಲ್ಲಿ 55 ರಾಷ್ಟ್ರಗಳಿದ್ದು, ಐರೋಪ್ಯ ಒಕ್ಕೂಟದ ಸಮಾನ ಸ್ಥಾನವನ್ನು ಈ ಒಕ್ಕೂಟಕ್ಕೆ ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಆಫ್ರಿಕಾ ದೇಶಗಳಿಗೆ ಸ್ಥಾನಮಾನ ದೊರಕಿಸಿಕೊಡಬೇಕು ಎಂದು ಕಳೆದ 10 ವರ್ಷಗಳಿಂದ ಭಾರತ ಪ್ರಯತ್ನ ಮಾಡುತ್ತಲೇ ಇದೆ. ಆಫ್ರಿಕಾದ ಎಲ್ಲಾ ರಾಷ್ಟ್ರಗಳಿಗೂ ಭಾರತದ ಸಚಿವ ಮಟ್ಟದ ನಿಯೋಗ ಭೇಟಿ ನೀಡಿದೆ. ಪ್ರಧಾನಿ ಮೋದಿ ಅವರೇ ಆಫ್ರಿಕಾದ 10 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ.

ಜಿ 20 ಸಭೆಗೆ ಬರುತ್ತಿರುವ ಬೈಡನ್‌ ಭದ್ರತಾ ಪಡೆಗೆ 400 ಕೊಠಡಿ ಮೀಸಲು!

ಜಿ20 ಸಭೆಯಲ್ಲೂ ಭಾರತ ನಾಮಫಲಕ

ನವದೆಹಲಿ: ಕೇಂದ್ರ ಸರ್ಕಾರ ತನ್ನ ಅಧಿಕೃತ ದಾಖಲೆಗಳಲ್ಲಿ ಇನ್ನು ಇಂಡಿಯಾ ಬದಲು ಭಾರತ ಎಂಬ ಪದವನ್ನು ಮಾತ್ರ ಬಳಸಲಿದೆ ಎಂಬ ವರದಿಗಳ ಬೆನ್ನಲ್ಲೇ, ಶನಿವಾರ ಇಲ್ಲಿ ಆರಂಭವಾದ ಜಿ20 ಶೃಂಗ ಸಭೆಯಲ್ಲೂ ಇದಕ್ಕೆ ಪೂರಕವಾದ ಸಾಕ್ಷ್ಯಗಳು ಲಭ್ಯವಾಗಿವೆ.  ಜಿ20 ಸಭೆಯಲ್ಲಿ ಗಣ್ಯರು ಕೂರುವ ಕುರ್ಚಿಯ ಮುಂದೆ ಅವರು ಪ್ರತಿನಿಧಿಸುವ ದೇಶಗಳ ಹೆಸರನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಮೋದಿ ಅವರು ಕುಳಿತ ಸ್ಥಳದ ಮುಂದಿನ ಫಲಕದಲ್ಲಿ ಭಾರತ ಎಂದು ಬರೆಯಲಾಗಿತ್ತು. ಇದುವರೆಗೆ ನಡೆಯುತ್ತಿದ್ದ ಸಭೆಗಳಲ್ಲಿ ಇಂಡಿಯಾ ಫಲಕವನ್ನು ಇಡಲಾಗುತ್ತಿತ್ತು. ಈ ಮೂಲಕ ಇಂಡಿಯಾ ಹೆಸರನ್ನು ಭಾರತ ಎಂದು ಬದಲಾಯಿಸಲಾಗುತ್ತದೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

ಮೋದಿ ಅವರ ಮುಂದೆ ಭಾರತ ಎಂದು ಬರೆದಿರುವ ಫಲಕ ಇಟ್ಟಿರುವುದನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದು, ಇದು ಭಾರತದ ಸಂಸ್ಕೃತಿಯನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios