Asianet Suvarna News Asianet Suvarna News

ಜನರು ಮರೆತರೂ, ಬಿಜೆಪಿ ನನ್ನನ್ನು ಮರೆಯಲಿಲ್ಲ; ಮೇಘಾಲಯದ ನೂತನ ರಾಜ್ಯಪಾಲ ಸಿ.ಹೆಚ್. ವಿಜಯಶಂಕರ್ ಮೊದಲ ಮಾತು

ಪಕ್ಷ ಸಂಘಟನೆ ಹಾಗೂ ಸಂಘಕ್ಕಾಗಿ ದುಡಿದ ನನ್ನನ್ನು ಜನರು ಮರೆತರೂ ಪಕ್ಷ ಮರೆತಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿ ಉನ್ನತ ಹುದ್ದೆ ಕೊಡುವುದಾಗಿ ಹೇಳಿದರು.

Prime Minister Modi himself called me said Meghalaya new Governor C H Vijaya Shankar sat
Author
First Published Jul 28, 2024, 1:54 PM IST | Last Updated Jul 28, 2024, 1:54 PM IST

ಬೆಂಗಳೂರು (ಜು.28): ಚಾಮುಂಡೇಶ್ವರಿ ವರ್ಧಂತಿ ದಿನ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನನಗ ಕರೆ ಮಾಡಿ ನಿಮಗೆ ಉನ್ನತವಾದ ಹುದ್ದೆ ಕೊಡುತ್ತಿದ್ದೇವೆ ಎಂದು ತಿಳಿಸಿದ್ದರು. ಜೀವನಪೂರ್ತಿ ಪಕ್ಷ ಹಾಗೂ ಸಂಘದ ಏಳಿಗೆಗೆ ಶ್ರಮಿಸಿದ ನನ್ನನ್ನು ಜನರು ಮರೆತರೂ ಪಕ್ಷ ಗುರುತಿಸಿ ಜವಾಬ್ದಾರಿ ಕೊಟ್ಟಿರುವುದಕ್ಕೆ ಋಣಿಯಾಗಿದ್ದೇನೆ ಎಂದು ಮೇಘಾಲಯದ ನೂತನ ರಾಜಪಾಲರಾಗಿ ಆಯ್ಕೆಯಾದ ಸಿ.ಹೆಚ್. ವಿಜಯಶಂಕರ್ ಹೇಳಿದರು.

ರಾಜ್ಯಪಾಲ ಹುದ್ದೆಗೆ ಆಯ್ಕೆಯಾದ ಸಿಹೆಚ್.ವಿಜಯಶಂಕರ್ ಅವರು ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳಿಂದಿಗೆ ಮಾತನಾಡಿದ ಅವರು, ನನಗೆ 14 ವರ್ಷಗಳ ವನವಾಸ ಅಂತ್ಯ ಆಗಿದೆ. ಹಾಸನ ಲೋಕಸಭಾ ಚುನಾವಣೆ ನಂತರ ನಾನು ರಾಜಕೀಯ ಹಿನ್ನಡೆ ಅನುಭಿಸಿದೆ. ಅಲ್ಲಿಂದ ಜನ ನನ್ನನ್ನು ಮರೆತಿದ್ದರು. ಅಂತಹವರನ್ನ ಗುರುತಿಸಿ ಇಂತಹ ಉನ್ನತ ಹುದ್ದೆ ಕೊಟ್ಟಿರುವುದು ನನ್ನ ಬಿಜೆಪಿ ಪಕ್ಷ. ಎಲ್ಲವೂ ನನ್ನ ತಾಳ್ಮೆಯಿಂದಲೇ ಸಾಧ್ಯವಾಗಿದ್ದು ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿಗಳಿಗೆ ಹಣ ಒದಗಿಸಲು ಹಿಂದುಳಿದ ವರ್ಗಗಳ ಇಲಾಖೆ ಹಣಕ್ಕೂ ಕೈ ಹಾಕಿದ ಸರ್ಕಾರ?

ಚಾಮುಂಡೇಶ್ವರಿ ವರ್ಧಂತಿ ದಿನ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನನಗ ಕರೆ ಮಾಡಿ ಈ ವಿಚಾರ ತಿಳಿಸಿದರು. ಬೆಳಗ್ಗೆ 9.30 ಕ್ಕೆ ಕರೆ ಮಾಡಿ ನಿಮಗೆ ಉನ್ನತವಾದ ಹುದ್ದೆ ಕೊಡುತ್ತಿದ್ದೇವೆ ಎಂದರು. ಅದು ನನಗೆ ಅವರು ಮಾಡಿದ ಮಾಡಿದ ಮೊದಲ ಫೋನ್ ಕರೆಯೂ ಆಗಿತ್ತು. ಇದರಿಂದಾಗಿ ನನಗೆ ತುಂಬಾ ಆಶ್ಚರ್ಯವಾಯಿತು. ಈ ಸಮಯದಲ್ಲಿ ಸೋತಾಗಲೂ ನನಗೆ ಅಧಿಕಾರ ಕೊಟ್ಟ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತು ಈಗ ಅಧಿಕಾರ ಕೊಟ್ಟಿರುವ ಪ್ರಧಾನ ಮಂತ್ರಿಯನ್ನ ಸ್ಮರಿಸುತ್ತೇನೆ ಎಂದು ತಿಳಿಸಿದರು.

ಪ್ರತಿ ಹಂತದಲ್ಲೂ ನನ್ನ ಮೇಲೆ ಸಂಘದ ಪಕ್ಷದ ಜನರ ಋಣ ಇದೆ. ನಾನು ಈಗಲೂ ಅವರ ಋಣದಲ್ಲೇ ಇದ್ದೇನೆ. ಇನ್ಮುಂದೆ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಸದ್ಯ ಮೇಘಾಲಯದ ರಾಜ್ಯಪಾಲರ ಕಛೇರಿಯ ದೂರವಾಣಿಗಾಗಿ ಕಾಯುತ್ತಿದ್ದೇನೆ. ಸದ್ಯ ಎಲ್ಲಾ ಶಿಷ್ಟಾಚಾರದ ಬಗ್ಗೆ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಗೊತ್ತಾಗಿದೆ. ಅವರ ಕರೆ ಬಂದ್ರೆ ನಾನು ನಾಳೆ ಬೆಳಗ್ಗೆ ಮೇಘಾಲಯಕ್ಕೆ ಪ್ರಯಾಣ ಬೆಳೆಸುತ್ತೇನೆ. ಇದೇ ತಿಂಗಳ ಜು.30ರಂದು ಪ್ರಮಾಣವಚನ ಸ್ವೀಕರಿಸಬೇಕೆಂದುಕೊಂಡಿದ್ದೇನೆ ಎಂದು ಮಾಹಿತಿ ನೀಡಿದರು.

ಮೇಘಾಲಯದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ನಂತರ 3 ದಿನಗಳ ಕಾಲ ನಡೆಯುವ ಅಖಿಲ ಭಾರತ ರಾಜ್ಯಪಾಲರ ಸಮಾವೇಶದಲ್ಲಿ ಭಾಗಿಯಾಗುತ್ತೇನೆ ಎಂದು ನೂತನ ರಾಜ್ಯಪಾಲರಾಗಿ ಆಯ್ಕೆಯಾದ ಸಿ.ಎಚ್‌ ವಿಜಯಶಂಕರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಮಹಾನಾಯಕ ಅಲ್ಲ, ಆತನ ಹೆಸರು ಸಿಡಿ ಶಿವು; ರಮೇಶ್ ಜಾರಕಿಹೊಳಿ

ಅಭಿನಂದನೆ ತಿಳಿಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ: ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ  ಮಾಜಿ ಸಂಸದರು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕ ಸಿ.ಹೆಚ್.ವಿಜಯಶಂಕರ್ ಅವರಿಗೆ  ಹೃದಯಪೂರ್ವಕ ಅಭಿನಂದನೆಗಳು. ಸಮಸ್ತ ಕನ್ನಡಿಗರ ಪರವಾಗಿ ಶ್ರೀ ವಿಜಯ ಶಂಕರ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ, ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಅವರ ಹೆಜ್ಜೆಗಳು ನಿರಂತರವಾಗಿ ಸಾಗಲಿ. ಮೇಘಾಲಯದ ಜನರಿಗೆ ಅವರಿಂದ ಒಳ್ಳೆಯದಾಗಲಿ ಎಂದು ಮನಸಾರೆ ಆಶಿಸುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios